296.  Purple Sunbird (Nectarinia asiatica) R Sparrow- ನೇರಳೆ ಸೂರಕ್ಕಿ (ನೇರ್ಳೆ ತೇನ್ಗೀಜೆ)

 

10 ಸೆಂಮೀ. ಸಂತಾನಋತುವಿನಲ್ಲಿ ಗಂಡಿಗೆ ಲೋಹದ ಹೊಳಪಿನ ಗಾಢ ನೀಲಿ ಮೈ; ಕಡು ಹಳದಿ-ಕೆಂ ಎದೆ ಮಚ್ಚೆಗಳು; ಪೇಲವ ಹಳದಿ ಕೆಳಮೈ. ಬಿಸಿಲಿನಲ್ಲಿ ಅನೇಕ ಬಣ್ಣಗಳನ್ನು ಹೊರಹೊಮ್ಮಿಸುವ ಸುಂದರ ಹಕ್ಕಿ. ಉಳಿದ ವೇಳೆ, ಹೆಣ್ಣಿನಂತೆ ಪೇಲವ; ಹಸಿರುಗಂದು ಮೇಲ್ಮೈ; ತಿಳಿಹಳದಿ ಕೆಳಮೈ. ಉದುರೆಲೆ, ಕುರುಚಲು ಕಾಡು, ಎಸ್ಟೇಟಿನ ಹೂದೋಟಗಳಲ್ಲಿ ವಾಸ. ಗಂಡಿನ ಸಂಭ್ರಮದ ಚೆವಿಟ್. ಚೆವಿಟ್.. ಕೂಗು.