300. Little Spiderhunter (Arachnothera longirostra) R Sparrow- ಬಾಳೆಗುಬ್ಬಿ (ಬಾಳೆಗೀಜೆ)

 

 

14 ಸೆಂಮೀ. ಮೇಲ್ನೋಟಕ್ಕೆ ಹೆಣ್ಣು ಸೂರಕ್ಕಿಯಂತೆ ತಿಳಿಹಸಿರು ಮೇಲ್ಮೈ; ಬೂದು ಗಂಟಲು; ತಿಳಿ ಕಿತ್ತಳೆ ಎದೆ ಕುಚ್ಚು; ಮಾಸಲು ಹಳದಿ ಕೆಳಮೈ. ಬಾಲಕ್ಕಿಂತ ಉದ್ದವಾದ, ಮುಖದಲ್ಲಿ ಎದ್ದುಕಾಣುವ, ಬಾಳೆಹೂವಿನ ಮಕರಂದವನ್ನು ಹೀರಲು ತಕ್ಕ ಕೊಕ್ಕು. ದೆ, ಮರಗಳ ನಡುವೆ ಮತ್ತು ಬಾಳೆತೋಟಗಳಲ್ಲಿ ಚಟುವಟಿಕೆಯಿಂದ ಅಡ್ಡಾಡುತ್ತಿರುತ್ತವೆ. ವಿಚ್.ವಿಚ್.. ಹಾಡು. ಬಾಳೆ, ಪರ್ವತಬಾಳೆಯಂತಹ ಅಗಲವಾದ ಎಲೆಗಳ ಕೆಳಭಾಗದಲ್ಲಿ ಎಲೆಗೆ ಅಂಟಿಕೊಂಡಂತೆ ತೆಳು ಜಲ್ಲಿಕಾಗದದಂತಹ ತರಗೆಲೆಗಳನ್ನು ಹೊಲಿದ ಗೂಡು.