White-eyes  (Zosteropidae)

 

ಬೆಳ್ಗಣ್ಣಗಳು (ಬೊಳ್ತಕಣ್ಣ್)

301. Oriental White-eye (Zosterops palpebrosus) White-eye R ಬೆಳ್ಗಣ್ಣ (ಬೊಳ್ತಕಣ್ಣ್)

 

10 ಸೆಂಮೀ. ಹಸಿರುಗಂದು ಮೇಲ್ಭಾಗ; ಹಳದಿ ಗಂಟಲು; ಕಣ್ಣಿನ ಕ್ಪ ಕಳ್ಳಪಟ್ಟಿ; ಜೊತೆಗೆ ಕಣ್ಣಿನ ಸುತ್ತ ಕನ್ನಡಕದಂತೆ ಬಿಳಿ ಉಂಗುರ; ಕೆಳಮೈ ಹಾಗೂ ಬಾಲದ ಬುಡ ಬಿಳಿ. ಗುಂಪಾಗಿ, ಲವಲವಿಕೆಯಿಂದ, ಚಿಲಿಪಿಲಿಗುಟ್ಟುತ್ತ, ಉದುರೆಲೆ, ಕುರುಚಲು ಕಾಡು, ಎಸ್ಟೇಟುಗಳ, ಹೂದೋಟಗಳಲ್ಲಿ, ಗಿಡಗಂಟಿಗಳ ಮೇಲೆ ಸರ್ಕಸ್ ಮಾಡಿಕೊಂಡು ಕೀಟ, ಹಣ್ಣು, ಮಕರಂದವನ್ನು ಹೀರುತ್ತವೆ. ಹೀಗೆ ಪರಾಗಸ್ಪರ್ಶದಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಮೆಲುದನಿಯ ಮೋಹಕ ಉಲಿತ; ಪ್ರಜನನ ಕಾಲದಲ್ಲಿ ಗಂಡಿನ ಸುಶ್ರಾವ್ಯ ಹಾಡು. ಮರದ ತುದಿಕವಲುಗಳಲ್ಲಿ, ಬೊಡ್ಡೆಯ ಮೇಲೆ, ಚೀಲದಂತೆ ನೇತುಹಾಕಿರುವ ಟ್ಟ ಗೂಡು.