Sparrows and Snowfinches (Passeridae: Passerinae)

 

ಗುಬ್ಬಚ್ಚಿಗಳು (ಮನೆಪಕ್ಷಿ)

 

 

ಸಣ್ಣ ಆಕಾರದ, ಕಾಳು, ಧವಸ-ಧಾನ್ಯ, ಹಣ್ಣು, ಕೀಟಗಳನ್ನು ತಿಂದು ಬದುಕುವ, ಸಂಜೀವಿಗಳು; ಆದ್ದರಿಂದ ಹೆಚ್ಚಾಗಿ ಜನನಿಬಿಡ ಪ್ರದೇಶಗಳಲ್ಲಿ, ಧಾನ್ಯದ ಉಗ್ರಾಣ, ಗಿರಣಿ, ಸಂತೆಮಾಳ ಮುಂತಾದೆಡೆಗಳಲ್ಲಿ ವಾಸ. ದಪ್ಪನಾದ, ಚೂಪಾದ, ಟ್ಟ ಕೊಕ್ಕು. ಕುಪ್ಪಳಿಸುತ್ತ ನೆಲದ ಮೇಲೆ ಓಡಾಟ. ರೈತರ ಧಾನ್ಯ, ಹೂದೋಟಗಳನ್ನು ನಾಶಪಡಿಸಿ ದಾಂಧಲೆಯೆಬ್ಬಿಸಿದರೂ, ಅವುಗಳ ಮರಿಗಳನ್ನು ಕೀಟ-ಹುಳುಹುಪ್ಪಟೆಗಳನ್ನೇ ತಿನ್ನಿಸಿ ಬೆಳೆಸುವುದರಿಂದ, ರೈತನ ಗೆಳೆಯ. ಎಲ್ಲೆಂದರಲ್ಲಿ, ರಂಧ್ರಗಳಿರುವೆಡೆ, ನಾರು-ಕಸದಿಂದ ರಚಿತವಾದ ಗೂಡು.

 

 

302. House Sparrow (Passer domesticus) R Sparrow ಗುಬ್ಬಚ್ಚಿ (ಮನೆಪಕ್ಷಿ)

15 ಸೆಂಮೀ. ಪ್ರಪಂಚದಾದ್ಯಂತ ಸುಪರಿಚಿತವಾದ, ಮಾನವನ ಅವಿನಾ ಸಂಗಾತಿ. ಎಷ್ಟೋ ಬಾರಿ ಮನೆಯೊಳಗೇ ಗೂಡುಕಟ್ಟುವುದು. ನಮ್ಮ ಸುತ್ತ-ಮುತ್ತ ಓಡಾಡಿಕೊಂಡಿದ್ದರೂ, ಅತಿ ಜಾಗರೂಕತೆ, ಅಷ್ಟೇ ಚುರುಕು. ಹೆಣ್ಣು ಗುಬ್ಬಚ್ಚಿ ಗಂಡಿನಷ್ಟು ಲಕ್ಷಣವಿಲ್ಲ. ಚಿಲಿಪಿಲಿ ಕೂಗು. ರಾತ್ರಿ ಎಲೆಭರಿತ ಮರಗಳು, ಮುಳ್ಳು ದೆಗಳಲ್ಲಿ ವಿಶ್ರಾಂತಿ. ಮರಿಗಳಿಗೆ ಹುಳ-ಹುಪ್ಪಟೆಗಳನ್ನು ತಿನ್ನಿಸಿ ಬೆಳೆಸುತ್ತವೆ. ಇತ್ತೀಚೆಗೆ ಆವಾಸನಾಶದ ಜೊತೆಗೆ, ವಾಸಿಸಲು ಯೋಗ್ಯ ಪರಿಸರ ದೊರಕದೆ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ