Weavers  (Passeridae: Ploceinae)

 

ನೇಯ್ಗಾರ ಹಕ್ಕಿಗಳು (ಗೀಜೆಪಕ್ಷಿ)

304. Baya Weaver (Ploceus philippinus) Baya R Sparrow ಗೀಜಗ (ಗೀಜೆಪಕ್ಷಿ)

15 ಸೆಂಮೀ. ಸುಪರಿಚಿತ ಗೀಜಗನ ಗೂಡಿಗೆ ಪ್ರಸಿದ್ಧಿ ಪಡೆದ ಹಕ್ಕಿ. ಸಂತಾನ ಋತುವಿನಲ್ಲಿ ಗಂಡುಹಕ್ಕಿಗೆ ಅಚ್ಚ ಹಳದಿ ತಲೆ, ಕತ್ತು, ಎದೆ; ಕ್ಪ ಮೂತಿ; ಕಂದು ಬೆನ್ನು; ಕ್ಪ ರೆಕ್ಕೆ ಗೀರುಗಳು; ತಿಳಿಗಂದು ಗೀರುಗಳಿರುವ ಬಿಳಿ ಹೊಟ್ಟೆ. ಉಳಿದ ವೇಳೆ ಗಂಡು-ಹೆಣ್ಣು ಎರಡೂ ಹೆಣ್ಣು ಗುಬ್ಬಚ್ಚಿಯಂತೆ. ಭತ್ತದ ತೆನೆಕಟ್ಟುವ ಸಮಯದಲ್ಲಿ, ಚೀ.ಚೀ.ಚಿವ್.ಚಿವ್. ಎಂದು ಹಾಡಿಕೊಂಡು ಗಂಡುಹಕ್ಕಿಗಳು ಗುಂಪಾಗಿ ಗೂಡುಕಟ್ಟುತ್ತವೆ. ಜೌಗು ಪ್ರದೇಶ, ಕೃಷಿಭೂಮಿಗಳ ಸುತ್ತಮುತ್ತ ಜೊಂಡುಹುಲ್ಲು, ಮರ-ದೆಗಳಿರುವೆಡೆ ನೀರಿರುವಲ್ಲಿ, ಬಾಗಿದ ಜಾಲಿ-ಮುಳ್ಳುಕೊಂಬೆಗಳ ಅಥವಾ ತಾಳೆಜಾತಿಯ ಎಲೆಗಳ ತುದಿಗಳಲ್ಲಿ, ಭತ್ತದ ಎಲೆ, ನಾರು-ಹುಲ್ಲುಗಳಿಂದ ದಟ್ಟವಾಗಿ ಹೆಣೆದ, ಜೋತಾಡುವ, ಕೆಳಗೆ ಬಾಗಿಲಿರುವ, ಬಟ್ಟಿಪಾತ್ರೆಯಾಕಾರದ, ಉದ್ದನಾದ ಗೂಡು ಅವುಗಳ ಕಾರ್ಯನೈಣ್ಯಕ್ಕೆ ಸಾಕ್ಷಿ!  ಗೂಡು ಕಟ್ಟುವುದು ಬಿಟ್ಟರೆ, ಬಾಕಿ ಕೆಲಸವೆಲ್ಲ ಹೆಣ್ಣುಹಕ್ಕಿಯದು. ಒಂದೇ ಋತುವಿನಲ್ಲಿ ಗಂಡುಹಕ್ಕಿ ನಾಲ್ಕೈದು ಗೂಡು ಕಟ್ಟುವುದು; ಅಷ್ಟೇ ಸಂಗಾತಿಗಳು!