306. White-rumped Munia (Lonchura striata) White-backed Munia R Sparrow- ಬಿಳಿಪೃಷ್ಠದ ರಾಟವಾಳ(ತೊಂಬೆಗೀಜೆ)

 

10 ಸೆಂಮೀ. ಕರಿ ಮೈಗೆ ಬಿಳಿ ಕೆಳಭಾಗ ಮತ್ತು ಅಚ್ಚಬಿಳಿ ಪೃಷ್ಠ; ಚೊಟ್ಟೆ ಬಾಲ; ದಪ್ಪ ಗಾಢನೀಲಿ ಕೊಕ್ಕು. ಇತರ ಜಾತಿಯ ರಾಟವಾಳಗಳೊಂದಿಗೆ, ಚಟುವಟಿಕೆಯಿಂದ ತೆನೆಭರಿತ ಗದ್ದೆ, ಹೂದೋಟಗಳಲ್ಲಿ ಗುಂಪಾಗಿ ವಾಸ. ಒಟ್ಟಾಗಿ ಹಾರುವಾಗ, ಮೇಲಕ್ಕೂ-ಕೆಳಕ್ಕೂ ಅಲೆಯಂತೆ ತೂಗಿಕೊಂಡು ಹಾರುತ್ತವೆ. ಕೀಟಾಹಾರಿ ಕೂಡ. ಉಳಿದೆಲ್ಲ 305ರಂತೆ.