308. Spotted Munia (Lonchura punctulata) R Sparrow- ಚುಕ್ಕೆ ರಾಟವಾಳ (ಕುರಿ ತೊಂಬೆಗೀಜೆ)

10 ಸೆಂಮೀ. ಕೆಂಗಂದು ಮೇಲ್ಮೈ, ಮುಖ ಮತ್ತು ಗಂಟಲು; ಮಾಸಲು ಬಿಳಿ ಎದೆ; ಎದೆ, ಪಕ್ಕೆ ಮತ್ತು ಹೊಟ್ಟೆಯ ಮೇಲೆ ಕರಿಯ ಅಂಕುಡೊಂಕಾದ ಗೀರುಗಳು. ಅವಯಸ್ಕ ಹಕ್ಕಿಗಳು ಸರಿಸುಮಾರು ಕಂದು ಬಣ್ಣ. ಕುರುಚಲು ಕಾಡು, ಕೃಷಿಭೂಮಿ, ತೋಟ-ಬಯಲು, ಜನವಸತಿ ಪ್ರದೇಶಗಳಲ್ಲಿ ವಾಸ. ಮಳೆಹುಳಗಳೆಂದರೆ ಚಪಲ. ಎರಡು ಸ್ವರದ ಕಿಟೀ.ಕಿಟೀ.. ಕೂಗು.