31. Northern Pintail (Anas acuta) Pintail M Duck- ಸೂಜಿಬಾಲದ ಬಾತು (ಚೂದ್ಬಾಲ್ರ ಬಾತ್)

56-74 ಸೆಂಮೀ. ಅತಿಸುಂದರ. ಚಾಕೊಲೇಟ್ ಬಣ್ಣದ ತಲೆ, ಕತ್ತು; ಮುಖದ ಎರಡೂ ಬದಿ ಬಿಳಿ ಗೆರೆ; ಬಿಳಿ ಎದೆ, ಕೆಳಮೈ ಮತ್ತು ರೆಕ್ಕೆ ಪಟ್ಟಿ; ಬೂದು ಬೆನ್ನಿನ ಮೇಲೆ ತಿಳಿಗುಲಾಬಿ-ಕ್ಪ ಗರಿಗಳು; ಹಾರುವಾಗ ಎದ್ದುಕಾಣುವ ಕಡುಬೂದು ಚೂಬಾಲ. ತಿಳಿಗಂದು ಬಣ್ಣದ ಹೆಣ್ಣಿಗೆ, ಚೂಪಾದ ಬಾಲವಿಲ್ಲ. ನೀರಿರುವೆಡೆ, ಗುಂಪಾಗಿ ವಾಸ. ಒಂದಾಗಿ ಹಾರುವಾಗ, ಹುಶ್..ಶ್.. ಎಂಬ ಶಬ್ದ. ಉತ್ತರ ಗೋಳಾರ್ಧದಿಂದ ಚಳಿಗಾಲದ ವಲಸೆಗಾರ.