Finches (Fringillidae)

 

ಗುಲಾಬಿಗುಬ್ಬಿಗಳು

 

310. Common Rosefinch (Carpodacus erythrinus) M Sparrow+ ಗುಲಾಬಿಗುಬ್ಬಿ

15 ಸೆಂಮೀ. ಗುಲಾಬಿ ಬಣ್ಣದ ತಲೆ, ಕತ್ತು; ದಪ್ಪನಾದ ತ್ರಿಕೋಣಾಕಾರದ ಕೊಕ್ಕು; ಕಂದು ಕೆನ್ನೆ; ಕಂದು ರೆಕ್ಕೆಯಲ್ಲಿ ಕ್ಪ; ತಿಳಿ ಗುಲಾಬಿ ತಲೆ, ಗಲ್ಲ, ಗಂಟಲುಮತ್ತು ಎದೆ, ಕೆಳಮೈ ಮತ್ತು ಪೃಷ್ಠ; ಕಂದು ಬೆನ್ನು; ಸಣ್ಣ ಸದೃಢ ಕಾಲುಗಳು ಮತ್ತು ತುಸು ಸೀಳಿದ, ಕಂದು ಬಾಲ. ಹೆಣ್ಣಿಗೆ ಸರಿಸುಮಾರು ಕಂದು ಬಣ್ಣದ ದೇಹ. ಗುಂಪಾಗಿ, ತಿಳಿಕಾಡುಗಳಲ್ಲಿ, ಹೊಲಗದ್ದೆಗಳಿರುವೆಡೆ ಕಾಣಬಹುದು. ವೇಗವಾಗಿ, ಮೇಲಕ್ಕೂ ಕೆಳಕ್ಕೂ ಜೂಗಾಡುತ್ತಾ ಹಾರಾಟ. ಲಾಂಟಾನ, ಆಲ-ಅರಳಿ-ಬಸರಿ ಮುಂತಾದ ಅಂಜೂರದ ಜಾತಿಯ ಹಣ್ಣುಗಳು, ಹೂ ಪಕಳೆ, ಬಿದಿರುಭತ್ತ, ಹೂ ಮಕರಂದ, ಹೀಗೆ ಸಸ್ಯಾಹಾರಿ. ಪರಾಗಸ್ಪರ್ಶದಲ್ಲಿ ಮುಖ್ಯ ಪಾತ್ರ. ಪ್ರಶ್ನಾರ್ಥಕ, ಸುಶ್ರಾವ್ಯ ಟೂಈ?..ಟೂಈ?.. ಸಿಳ್ಳು. ಕಾಶ್ಮೀರ, ರ್ವ ಟಿಬೆಟ್ನಿಂದ ಚಳಿಗಾಲದ ವಲಸೆಗಾರ.