Hawks, Eagles, Buzzards, Kites, Harriers and

Old World Vultures (Accipitridae)

 

ಗಿಡುಗ, ಗರುಡ, ಹದ್ದು, ರಣಹದ್ದು ಮತ್ತು ಸೆಳೆವಗಳು (ಕ್ರ್ಕೊಟ್ಟ, ಪದ್ದ್, ಕ್ಡುವ)

 

ಹಗಲಿನ ಬೇಟೆಗಾರ ಹಕ್ಕಿಗಳು. ಸತ್ತ ಪ್ರಾಣಿಯಾಗಲೀ ಅಥವಾ ತಾನೇ ಕೊಂದದ್ದಾಗಲೀ, ಅದರ ಮಾಂಸವನ್ನು ಹರಿದು ತಿನ್ನಲು ಬಲಿಷ್ಠವಾದ, ತುದಿಯಲ್ಲಿ ಕೊಕ್ಕೆಯಂತೆ ಬಾಗಿರುವ ಕೊಕ್ಕು ಮತ್ತು ಕಾಲ್ಬೆರಳ ಉಗುರುಗಳು; ಎತ್ತರದಲ್ಲಿ ಹಾರಾಡಲು ತಕ್ಕುದಾದ ಪ್ರಬಲ ರೆಕ್ಕೆಗಳು. ತೀಕ್ಷ್ಣ ದೃಷ್ಟಿ; ನೆಲದಿಂದ ಏಳುವ ಬಿಸಿಗಾಳಿಯ ಕೆಳಒತ್ತಡದ ಸಹಾಯದಿಂದ, ಇವು ರೆಕ್ಕೆ ಬಡಿಯದೆ ಆಕಾಶದಲ್ಲಿ ಸಾಕಷ್ಟು ಎತ್ತರದಲ್ಲಿ ಸುತ್ತು ಹೊಡೆಯುವುದನ್ನು ಕಾಣಬಹುದು. ದೇಹದ ಬಣ್ಣ, ವಯಸ್ಸು, ಋತುವನ್ನಾಧರಿಸಿ ವ್ಯತ್ಯಾಸಗೊಳ್ಳುವುದು. ಸಾಧಾರಣವಾಗಿ ಹೆಣ್ಣುಹಕ್ಕಿ ತುಸು ದೊಡ್ಡ ಗಾತ್ರ. ಕೀಟ, ಹಲ್ಲಿ, ಇಲಿ, ಹೆಗ್ಗಣ, ಹಾವು, ಆಹಾರ. ಎತ್ತರದ ಮರಗಳ ಮೇಲೆ, ಕಡ್ಡಿಗಳಿಂದ ತಯಾರಾದ, ಹುಲ್ಲು-ಎಲೆಗಳ ಹಾಸಿಗೆಯ ವಿಸ್ತಾರವಾದ ಅಟ್ಟಣಿಗೆ ಗೂಡು.

 

33. Black-shouldered Kite (Elanus caeruleus) Black-winged Kite R Crow- ರಾಮದಾಸ ಹದ್ದು (ಕರಿ ಕ್ರ್ಕೊಟ್ಟ)

33 ಸೆಂಮೀ. ಬೂದು ಹಕ್ಕಿಗೆ ಬಿಳಿ ಕೆಳಮೈ; ಕ್ಪ ಕಣ್ಣುಪಟ್ಟಿ; ಕಪ್ಪಾದ ಅಗಲ ಭುಜಪಟ್ಟಿ ಮತ್ತು ರೆಕ್ಕೆಯ ತುದಿ; ಬಿಳಿ ಮೊಂಡು ಬಾಲ; ಹಳದಿ ಕಾಲುಗಳು. ಸಂಕೋಚ ಸ್ವಭಾವ. ಒಂಟಿಯಾಗಿ, ಕುರುಚಲುಕಾಡು, ಹುಲ್ಲುಗಾವಲು, ಕೃಷಿಭೂಮಿ ಮುಂತಾದೆಡೆ ಮರಗಳ ತುದಿಯಲ್ಲೋ, ಆಕಾಶದಲ್ಲಿ ಪ್ಯಾರಾಚೂಟಿನಂತೆ ನಿಂತಲ್ಲಿಯೇ ತೇಲಾಡುತ್ತಲೋ, ಬೇಟೆ ಹೊಂಚುವುದು. ಅಲ್ಲದೆ ತೆರೆದ ಪ್ರದೇಶಗಳಲ್ಲಿ ಆಹಾರವನರಸುತ್ತಾ ಕೆಳಸ್ತರದಲ್ಲಿ ಹಾರುತ್ತದೆ. ರೆಕ್ಕೆಗಳನ್ನು ಇಳಿಬಿಟ್ಟು ಬಾಲವನ್ನು ನಿಮಿರಿಸಿ ಕೂರುವ ಸ್ವಭಾವ. ತೀಕ್ಷ್ಣ ಚೀರುವಿಕೆ.