34. Pariah Kite (Milvus migrans govinda) R Kite  ಹದ್ದು (ಕ್ರ್ಕೊಟ್ಟ)

61 ಸೆಂಮೀ. ಸಾಮಾನ್ಯವಾಗಿ ಕಾಣುವ ಬೇಟೆಹಕ್ಕಿ. ಕಡುಗಂದು ಮೈ, ಹಾರುವಾಗ ಎದ್ದುಕಾಣುವ ಸೀಳಿದ ಬಾಲ. ಮನುಷ್ಯನ ಒಡನಾಡಿ. ಗುಂಪಾಗಿ, ಕುರುಚಲುಕಾಡು, ಊರಿನ ಹೊರಗಿನ ಕಸದ ರಾಶಿಯಲ್ಲಿ ಅಥವಾ ಊರೊಳಗೆ ಕಸಾಯಿಖಾನೆ, ಮೀನು-ಮಾಂಸದ ಮಾರುಕಟ್ಟೆಯಲ್ಲಿ ಆಹಾರವನ್ನು ಹೆಕ್ಕುತ್ತದೆ. ಪೀ.ವಿರ್.. ಸಿಳ್ಳು. ಸಾಮೂಹಿಕ ಜೀವನ.