48 ಸೆಂಮೀ. ಅಚ್ಚ ಬಿಳಿ ತಲೆ, ಕತ್ತು ಮತ್ತು ಎದೆ; ಕೆಂಗಂದು ಮೈ; ಹಳದಿ ಕಾಲುಗಳು; ದುಂಡಾದ ಬಾಲದ ತುದಿ. ಒಂಟಿಯಾಗಿ, ಕೃಷಿಭೂಮಿ, ಗದ್ದೆ, ತೋಟ ಮತ್ತು ಜನವಸತಿಯಲ್ಲಿ ನೀರಿರುವೆಡೆಯಲ್ಲಿ ಎತ್ತರದ ಸ್ಥಳದಲ್ಲಿ ಕುಳಿತು ಬೇಟೆ ಹುಡುಕುತ್ತದೆ. ಮೀನು, ಕಪ್ಪೆ, ಏಡಿ, ಹಾವು, ಬಾವಲಿ ಮತ್ತು ಮಳೆಕೀಟಗಳೇ ಆಹಾರ. ಗೊಗ್ಗರು ಗಂಟಲ ಸಿಳ್ಳು.