44. Crested Serpent-Eagle (Spilornis cheela) R Kite+ ತುರಾಯಿ ಪನ್ನಗಾರಿ (ಜೆಡೆಕ್ಡುವ)

74 ಸೆಂಮೀ. ತಲೆಯ ಮೇಲೆ ಕ್ಪ-ಬಿಳಿ ಹೆಡೆಯಂತಹ ಜುಟ್ಟು; ಕಂದು ಕೆಳಮೈ ಮೇಲೆ ಸಣ್ಣ ಕ್ಪ-ಬಿಳಿ ಚುಕ್ಕೆಗಳು; ಕ್ಪ ಮೊಂಡುಬಾಲದಲ್ಲಿ ಹಾಗೂ ರೆಕ್ಕೆಗಳಲ್ಲಿ ಬಿಳಿಪಟ್ಟಿಗಳು. ಕೂರುವಾಗ, ಕುಳಿತಾಕ್ಷಣ ಅಥವಾ ಬೆದರಿದಾಗ ಜುಟ್ಟು ಸೆಟೆದು ನಿಲ್ಲುತ್ತದೆ. ಒಂಟಿಯಾಗಿ ಒತ್ತಾದ ಎಲೆಗಳಿರುವ ಅರಣ್ಯವ್ಯಾಪ್ತಿಯಲ್ಲಿ ಹಾರಾಡುವುದನ್ನು ಕಾಣಬಹುದು. ಬೇಟೆಯನ್ನು ಬೆನ್ನಟ್ಟಿ ಹಿಡಿಯುವುದು.  ಗಟ್ಟಿಯಾದ ಕೀ..ಕೆ.ಕೆ.ಕೆ.ಕೀ.. ಸಿಳ್ಳು.