46. Shikra (Accipiter badius) R Crow- ಬಿಜ್ಜು

30-34 ಸೆಂಮೀ. ಗಿಡ್ಡ ಕತ್ತಿನ ಮೇಲೆ ಟೊಣಪನ ತಲೆ; ಬೂದು-ನೀಲಿ ಮೇಲ್ಮೈ; ಬಿಳಿ ಕೆಳಮೈ ಮೇಲೆ ಕಂದು ಗೀರುಗಳು; ಪಟ್ಟಿ ಬಾಲ; ಗರಿಗಳಿರುವ ಹಳದಿ ಕಾಲುಗಳು. ಒಂಟಿಯಾಗಿ, ಕುರುಚಲು ಕಾಡು, ತೋಗಳಲ್ಲಿ, ಹೊಲ-ಗದ್ದೆಗಳ ಬಳಿಯಿರುವ ಮರಗಳ ಎಲೆಮರೆಯಲ್ಲಿ ಕುಳಿತು ಬೇಟೆಯರಸುತ್ತದೆ. ಸಣ್ಣ-ಟ್ಟ ಪಕ್ಷಿ-ಪ್ರಾಣಿಗಳೂ ಇದರ ಆಹಾರದ ಪಟ್ಟಿಯಲ್ಲಿವೆ. ಬೇಟೆಗೆ ಅಪಾಯದ ಅರಿವಾಗುವುದರ ಒಳಗೆ ಹಠಾತ್ತನೆ ಎರಗಿ ಹಿಡಿಯುತ್ತದೆ. ಕೋಳಿಕಳ್ಳ. ಗಟ್ಟಿಯಾದ ಟೀ.ಯೂ..ಟೀ.ಯೂ.. ಕೂಗು.