54. Indian White-backed Vulture (Gyps bengalensis) R Vulture+ ಬಿಳಿಬೆನ್ನಿನ ರಣಹದ್ದು (ಜಡ್ಡ್ಪದ್ದ್)

90 ಸೆಂಮೀ. ಸಾಧಾರಣವಾಗಿ ಎಲ್ಲೆಡೆ ಕಾಣುವ, ಪರಿಸರವನ್ನು ಚೊಕ್ಕಟವಾಗಿಡುವ ರಣಹದ್ದು. ಕರಿಗಂದು ಮೈಬಣ್ಣ; ಮಣ್ಣು ಬಣ್ಣದ, ಗರಿಗಳಿಲ್ಲದ ತಲೆ, ಕತ್ತು; ಕೊರಳಿನ ಬುಡದಲ್ಲಿ ಬಿಳಿ ಮಕ್ಮಲ್ ಕಂಠಾಭರಣ; ಬಿಳಿ ಪೃಷ್ಠ; ಹಾರುವಾಗ ರೆಕ್ಕೆಗಳಲ್ಲಿ ಅಗಲವಾದ ಕ್ಪ ಅಂಚು ಮತ್ತು ಬಿಳಿಬೆನ್ನು. ಸತ್ತ ಪ್ರಾಣಿಗಳ, ಕಸಗುಂಡಿಗಳ ಸುತ್ತ ಗುಂಪಾಗಿ, ಅರಚುತ್ತಾ, ಕಿತ್ತಾಡುವುದನ್ನು ಕಾಣಬಹುದು. ಎತ್ತರವಾದ ಮರದ ಮೇಲೆ ಬೃಹತ್ತಾದ ಅಟ್ಟಣಿಗೆ ಗೂಡು.