Falcons  (Falconidae)

 

ಚಾಣಗಳು

 

ಸರ ದೇಹದ, ಚೂಪಾದ, ಉದ್ದ ರೆಕ್ಕೆಯ, ಹಗಲು ಹೊತ್ತು ಬೇಟೆಯರಸುವ, ಶುದ್ಧ ಮಾಂಸಾಹಾರಿ ಹಿಂಸ್ರ ಹಕ್ಕಿಗಳು. ಅದಕ್ಕೆ ತಕ್ಕುದಾದ ಶಕ್ತಿಯುತ, ಚೂಪಾದ, ಕೊಕ್ಕೆಯಂತಹ ಸಣ್ಣ ಕೊಕ್ಕು ಹಾಗೂ ಕಾಲುಗುರುಗಳು. ಹೆಣ್ಣು ಗಾತ್ರದಲ್ಲಿ ತುಸು ದೊಡ್ಡದು. ವೇಗವಾಗಿ, ಹಾರುತ್ತಲೇ ಬೇಟೆಯನ್ನು ಹಿಡಿಯುವುದು. ಸಣ್ಣ ಪ್ರಾಣಿ-ಹಕ್ಕಿಗಳು, ಇಲಿ-ಹೆಗ್ಗಣಗಳು, ಕೀಟಗಳೇ ಆಹಾರ. ಕಮರಿಗಳ ಕೊರಕಲುಗಳಲ್ಲಿ ಕಸ-ಕಡ್ಡಿಗಳನ್ನು ತುಂಬಿದ ಗೂಡು.

 

58. Common Kestrel (Falco tinnunculus) Kestrel R Pigeon+/- ಚೋರೆ ಚಾಣ

36 ಸೆಂಮೀ. ಕೆಂ ಬೆನ್ನಿನಲ್ಲಿ ಕ್ಪ ಗೀರುಗಳು; ಬೂದುಬಣ್ಣದ ತಲೆ, ನೆತ್ತಿ, ಕೆನ್ನೆ; ತಿಳಿ ಕೆಳಮೈ ಮೇಲೆ ಕಂದು ಗೀರು-ಮಚ್ಚೆಗಳು; ಬಿಳಿಯಂಚಿನ ಬೂದುಬಾಲದ ತುದಿಯಲ್ಲಿ ಕ್ಪ ಪಟ್ಟಿ. ಹೆಣ್ಣಿಗೆ, ಬೂದು ಬಣ್ಣವಿಲ್ಲ. ಒಂಟಿಯಾಗಿ, ಆಕಾಶದಲ್ಲಿ ಒಂದಿಷ್ಟೂ ರೆಕ್ಕೆ ಬಡಿಯದೇ, ನಿಂತಲ್ಲೆ ನಿಂತು ಅಥವಾ ಬಯಲುಗಾಡುಗಳಲ್ಲಿ ಬೇಟೆಯರಸುವುದು. ನಿಶ್ಶಬ್ದವಾಗಿ ಎರಗಿ ಬೇಟೆ ಹಿಡಿಯುವುದು. ಹಾರುವಾಗ ಟಿ.ಟ್ವೀ.. ಕೂಗು.