6. Indian Pond-Heron (Ardeola grayii) Paddybird R ಕೊಳದ ಬಕ (ಳೆ) 46 ಸೆಂಮೀ. ಅತಿ ಸಾಮಾನ್ಯವಾದ ಬಕ. ಬೆನ್ನು ಬೂದುಗಂದು, ಕಂದು ಉದ್ದ-ಗೀರುಗಳು; ಕ್ಪ ತುದಿಯುಳ್ಳ ಹಳದಿ ಕೊಕ್ಕು; ಬೇಟೆಯರಸುತ್ತಿರುವಾಗ, ಮರೆಮಾಚುವ ಮೈಬಣ್ಣದಿಂದಾಗಿ ಕಾಣುವುದೇ ಇಲ್ಲ; ಆದರೆ, ಹಾರಲು ಮೇಲೆದ್ದೊಡನೆ, ಅಚ್ಚಬಿಳಿ ರೆಕ್ಕೆಗಳು! ಕೊಳ, ಕೆರೆ, ಗದ್ದೆ ಮುಂತಾದ ಪ್ರದೇಶಗಳಲ್ಲಿ ಒಂಟಿಯಾಗಿ, ತದೇಕಚಿತ್ತದಿಂದ ಬೇಟೆಯರಸುವುದನ್ನು ಕಾಣಬಹುದು. ಹಾರುವಾಗ ಕತ್ತನ್ನು ಒಳಗೆಳೆದುಕೊಂಡು, ಕಾಲುಗಳನ್ನು ಹಿಂದಕ್ಕೆ ಚಾಚುತ್ತದೆ.