Pheasants, Partridges and Quails (Phasianidae)

 

ಕವುಜುಗ (ಗೌಜಲಕ್ಕಿ), ಬುರ್ಲಿ, ಕೋಳಿ (ಕೋಳಿ) ಮತ್ತು ನವಿಲುಗಳು (ಮೈಲ್)

 

 

ಮರಗಳಲ್ಲಿ ವಾಸ ಮಾಡುವ, ದಪ್ಪ ಕೊಕ್ಕಿನ, ಕ್ಕವಿಲ್ಲದ-ಸಧೃಢ ಕಾಲಿನ ಹಕ್ಕಿಗಳು. ಗಟ್ಟಿಮುಟ್ಟಾದ ಕಾಲ್ಬೆರಳುಗಳು; ಕಾಲುಗಳಲ್ಲಿ ಗೊರಸುಗಳು; ಆಹಾರಕ್ಕಾಗಿ ನೆಲವನ್ನು ಕೆದಕಿ, ಕ್ರಿಮಿ-ಕೀಟಗಳನ್ನರಸಲು ಬಲವಾದ, ಚಿಕ್ಕ, ಬಾಗಿದ ಉಗುರುಗಳು; ಸಮರ್ಥವಾಗಿ, ವೇಗವಾಗಿ, ಪಟಪಟನೆ ರೆಕ್ಕೆ ಬಡಿತ್ತ ಹಾರಿದರೂ, ಹೆಚ್ಚುದೂರ ಹಾರಲಾರದ ಚಿಕ್ಕದಾದ, ದುಂಡಾದ ರೆಕ್ಕೆಗಳು. ಗಾಬರಿಯಾದಾಗ ಹಾರುವುದಕ್ಕಿಂತ ಓಡಿಯೇ ಅವಿತುಕೊಳ್ಳುತ್ತವೆ. ಬಹು ನಾಚಿಕೆ ಸ್ವಭಾವ; ಎಚ್ಚರಿಕೆಯಿಂದ ಓಡಾಡುವುದರಿಂದ ಕಣ್ಣಿಗೆ ಕಾಣುವುದಕ್ಕಿಂತ ಅವುಗಳ ಕೂಗು ಕೇಳುವುದೇ ಹೆಚ್ಚು. ಕಾಳು-ಬೀಜಗಳು, ಕ್ರಿಮಿ-ಕೀಟಗಳು, ಎಲೆಚಿಗುರು, ಹಣ್ಣುಗಳು ಆಹಾರ. ಹುಲ್ಲು, ಕಸಕಡ್ಡಿಗಳಿಂದಾವೃತವಾದ ಸ್ಥಳದಲ್ಲಿ ನೆಲದ ಮೇಲೇ ಮೊಟ್ಟೆಯಿಟ್ಟು, ಕಾವು ಕೊಡುವುವು.

 

61. Grey Francolin (Francolinus pondicerianus) Grey Partridge R Small hen ಬೂದು ಕವುಜುಗ (ಗೌಜಲಕ್ಕಿ)

33 ಸೆಂಮೀ. ಹೇಂಟೆಕೋಳಿಯಂತೆ, ತಿಳಿ ಬೂದುಗಂದು ಬಣ್ಣದ ಮೈಮೇಲೆ, ಉದ್ದುದ್ದ-ಅಡ್ಡಡ್ಡ ಗೀರುಗಳು; ಕ್ಪ ಆವರಣದಲ್ಲಿ, ಅಚ್ಚ ಹಳದಿ-ಕಂದು ಗಂಟಲು; ತಿಳಿಗಂದು ಕೆಳಮೈ ಮೇಲೆ ಕ್ಪ ಅಡ್ಡ-ಉದ್ದ ಗೀರುಗಳು; ತುಂಡು ಬಾಲ; ಗಂಡಿಗೆ ಕಾಲಿನಲ್ಲಿ ಒಂದು ಗೊರಸು. ಉದುರೆಲೆಕಾಡು, ಹುಲ್ಲು, ಮುಳ್ಳು, ದೆ, ಕುರುಚಲು ಕಾಡು ಪ್ರದೇಶಗಳಲ್ಲಿ, ನೆಲವನ್ನು ಕೆರೆದು, ಆಹಾರ ಹುಡುಕುವುದನ್ನು ಕಾಣಬಹುದು. ವೇಗದ ಓಟಗಾರ. ಗಂಡಿನ ಪ.ಟೀ.ಲಾ.. ಕೂಗು.