62. Red Spurfowl (Galloperdix spadicea) R Partridge+ ಕೆಂ ಚಿಟ್ಟುಕೋಳಿ (ಕೆದಕೋಳಿ)

36 ಸೆಂಮೀ. ನಾಚಿಕೆ ಸ್ವಭಾವ. ಗಂಡಿಗೆ ಕೆಂಗಂದು ಮೈಬಣ್ಣ; ಕಡುಗಂದು ನೆತ್ತಿ; ಕೆಂ ನಗ್ನ ಕಣ್ಣುಪಟ್ಟಿ ಹಾಗೂ 2-4 ಗೊರಸುಗಳಿರುವ ಕೆಂ ಕಾಲು. ಹೆಣ್ಣಿಗೆ ತಿಳಿ ಕೆಂಗಂದು ಮೇಲ್ಮೈ ಮೇಲೆ ಅಡ್ಡ ಪಟ್ಟಿಗಳು. ಕುರಚಲು, ಬಿದಿರುಕಾಡುಗಳಲ್ಲಿ ಮುಂಜಾನೆ ಮತ್ತು ಸಂಜೆಯ ವೇಳೆ ಕಾಣಬಹುದು. ಒಂಟಿಜೀವಿ; ವೇಗದ ಓಟಗಾರ; ಮರದಲ್ಲಿ ತಂಗುವುವು. ಕ್ರ್.ಕ್ವೆಕ್.ಕ್ರ್.ಕ್ವೆಕ್.. ಕೂಗು.