63. Jungle Bush-Quail (Perdicula asiatica) R Dove+ ಕಾಡು ಬುರ್ಲಿ (ಕಾಡ್ ಕ್ರ್ಕೋಳಿ)

17 ಸೆಂಮೀ. ಗಂಡಿಗೆ ಕಂದು ಮೇಲ್ಮೈ; ಕೆಂಗಂದು ಹುಬ್ಬು; ಅಚ್ಚ ಕೆಂಗಂದು ಗಂಟಲು; ಬಿಳಿ ಕೆಳಮೈ ಮೇಲೆ ಒತ್ತಾದ ಕ್ಪ ಗೀರುಗಳು. ಸಣ್ಣ ಗುಂಪಾಗಿ, ಕಾಡಂಚಿನಲ್ಲಿ, ಬೆಟ್ಟದ ತಪ್ಪಲಿನಲ್ಲಿ ವಾಸ; ಸರದಿಯ ಸಾಲಿನಲ್ಲಿ ನಡೆ; ತುರ್ತು ಪರಿಸ್ಥಿತಿ ಬಂದಾಗ ಅಥವಾ ಗಾಬರಿಗೊಂಡಾಗ ರ್ರ್.. ಎಂದು ಒಮ್ಮೆಲೇ ಚೆಲ್ಲಾಪಿಲ್ಲಿಯಾಗಿ ಹಾರಿ, ನಃ ಎಲ್ಲಾ ಒಟ್ಟು ಸೇರುತ್ತವೆ. ವ್ಹಿ.ವ್ಹಿ.ವ್ಹಿ.. ಎಂಬ ಮೂರು ಶಿಳ್ಳೆಯ ಸಂಪರ್ಕ ಕೂಗು. ಸಾಲಾಗಿ ಸಂಜೆ ಹಳ್ಳಗಳಲ್ಲಿ ನೀರು ಕುಡಿಯಲು ಹೋಗುತ್ತವೆ.