65. Grey Junglefowl (Gallus sonneratii) R Hen ಕಾಡುಕೋಳಿ (ಕಾಡ್ಕೋಳಿ)

60-80 ಸೆಂಮೀ. ಹುಂಜಕ್ಕೆ ಹಿಂದೆ, ಕತ್ತಿಯಂತೆ ಕೆಳಕ್ಕೆ ಬಾಗಿರುವ ಬಾಲದ ಗರಿಗಳು; ತಲೆ-ಗಲ್ಲದ ಮೇಲೆ ಅಚ್ಚ ಕೆಂ ಮಾಂಸಲ; ಮಣಿಗಳಂತಹ ಕಡುಬೂದು ಕತ್ತು, ಬೆನ್ನು; ಕಂದು ರೆಕ್ಕೆಗಳು. ಹೇಂಟೆಕೋಳಿಯದು ಚಿಕ್ಕ ಗಾತ್ರ; ಮೊಂಡು ಬಾಲ ಮತ್ತು ತಲೆ-ಗಲ್ಲದಲ್ಲಿ ಸಣ್ಣ ಮಾಂಸಲ. ಸದಾಹಸಿರು, ಉದುರೆಲೆ ಮತ್ತು ಕುರುಚಲುಕಾಡುಗಳಲ್ಲಿ ಲಾಂಟಾನ ದೆ, ಬಿದಿರು ಮೆಳೆಗಳಿರುವೆಡೆ ವಾಸ. ಸಕ್ಕನೆ ಕಾಡು ಸೇರಿಕೊಳ್ಳುವ ಸ್ವಭಾವ. ಕರ್ಕಶ ಕುಕ್.ಕಯಾ.ಕುಕ್.. ಕೂಗು ಮತ್ತು ರೆಕ್ಕೆ ಬಡಿದು ಶಬ್ದ ಮಾಡುತ್ತವೆ..