66. Indian Peafowl (Pavo cristatus) Common Peafowl R Vulture+ ನವಿಲು (ಮೈಲ್)

92-122 ಸೆಂಮೀ. ನಮ್ಮ ರಾಷ್ಟ್ರಪಕ್ಷಿ. 1-1.5 ಮೀಟರು ಉದ್ದದ ಅಂದವಾದ ಕಣ್ಣುಗಳಿರುವ ಬಾಲದ ಮೇಲ್ಭಾಗದ ಮಡಚು ಗರಿಗಳು; ಗೊರಸುಗಳಿರುವ ಉದ್ದ ಕಾಲು; ಹೊಳೆಯುವ ಕಡುಹಸಿರು ಕತ್ತು, ಎದೆ; ಬಿಳಿ ಕೆನ್ನೆಗೆ ಕ್ಪ ಕಣ್ಣುಪಟ್ಟಿ; ಸಣ್ಣ ಹೂ ಗುಚ್ಛದಂತಿರುವ ಕಿರೀಟ. ಹೆಣ್ಣಿಗೆ, ಬೂದುಗಂದು ದೇಹಕ್ಕೆ, ಬಿಳಿ ಕೆಳಮೈ; ಅಂದವಾದ ಬಾಲವಿಲ್ಲ. ಒತ್ತಾದ ಶೀತಗಾಡುಗಳಲ್ಲಿ ಬಹು ಎಚ್ಚರದಿಂದ ತಿರುಗಾಡುವುದನ್ನು ಕಾಣಬಹುದು. ಹಲ್ಲಿ, ಹಾವುಗಳೂ ಆಹಾರ. ಗಟ್ಟಿಯಾದ ಮೇ.ಆ..ಮೇ.ಆ.. ಧ್ವನಿ. ತನ್ನ ಸೊಬಗು, ಬಣ್ಣ ಮತ್ತು ನರ್ತನಕ್ಕೆ ಪ್ರಸಿದ್ಧಿ. ನಡೆದಾಡುವಾಗ, ಹಾರುವಾಗ ಅದರ ಬಾಲ ದೇಹಕ್ಕೆ ಭಾರವಿಲ್ಲ.