Buttonquails / BustardQuails (Turnicidae)

 

ಗುಡುಗಾಡು ಹಕ್ಕಿಗಳು (ತೊರ್ಪೆಕೊಟ್ಟ)

 

ಗೌಜಲು ಹಕ್ಕಿಗಳಂತೆ ಕಂಡರೂ, ಹಿಂಬದಿಯ ಕಾಲ್ಬೆರಳು ಇಲ್ಲ; ಹಾಗಾಗಿ ಮೂರೇ ಬೆರಳುಗಳು. ಕೀಟ, ಬೀಜ, ಚಿಗುರು ಮುಂತಾದ ಆಹಾರಕ್ಕಾಗಿ ನೆಲವನ್ನಾಶ್ರಯಿಸುತ್ತವೆ. ತನ್ನ ಗಡಿಪ್ರದೇಸವನ್ನು ಗುರುತಿಸಿ, ಅದಕ್ಕಾಗಿ ಹೋರಾಡುತ್ತಾ, ಬಹುಪತಿತ್ವವನ್ನನುಸರಿಸುವ, ಗಾತ್ರದಲ್ಲಿ ತುಸು ಹಿರಿದಾದ ಹೆಣ್ಣುಹಕ್ಕಿಯೇ ಹೆಚ್ಚು ಆಕರ್ಷಕ. ಭರ್ರನೇ ಹಾರಿ, ಸಕ್ಕನೆ ದೆಗಳ ಮಧ್ಯೆ ಅವಿತುಕೊಳ್ಳುವ ಸ್ವಭಾವ. ಹುಲ್ಲು-ಧಾನ್ಯಗಳ ಬೀಜ, ಚಿಗುರು-ಕಾಂಡ ಮತ್ತು ಕೀಟಗಳೇ ಆಹಾರ. ನೆಲದ ಗುಳಿಯಲ್ಲಿ ಗೂಡು; ಕಾವು, ಗುಟುಕು ನೀಡುವುದು ಎಲ್ಲ ಗಂಡುಹಕ್ಕಿಯ ಕೆಲಸ.

 

67. Common Buttonquail (Turnix suscitator) Common or Blue-legged Bustard Quail R Quail- ಗುಡುಗಾಡುಹಕ್ಕಿ (ತೊರ್ಪೆಕೊಟ್ಟ)

15 ಸೆಂಮೀ. ತಿಳಿ ಬೂದುಗಂದು ಮೈಮೇಲೆ ಬಿಳಿ-ಕ್ಪ ಅಡ್ಡಗೀರುಗಳು; ಬೂದು ಕೊಕ್ಕು-ಕಾಲುಗಳು; ಹಳದಿ ಕಣ್ಣು. ಜೋಡಿಯಾಗಿ ಕುರುಚಲು, ಬಿದಿರುಗಾಡುಗಳಲ್ಲಿ ವಾಸ. ಹೆಣ್ಣಿಗೆ ಎದೆ-ಗಲ್ಲದ ಮೇಲೆ ಕ್ಪ ಪಟ್ಟಿಗಳು. ಗಂಡಿಗಾಗಿ ಹೇಂಟೆಗಳು ಕಾದಾಡುತ್ತವೆ. ಮೊಟ್ಟೆಯಿಟ್ಟ ನಂತರ ಉಳಿದೆಲ್ಲ ಕೆಲಸ ಗಂಡಿನದೇ! ಡ್ರ್ರ್ರ್ರ್ರ್ರ್ರ್…. ಹೆಣ್ಣಿನ ಕೂಗು.