Rails, Moorhens and Coots (Rallidae)

 

ಜೌಗುಕೋಳಿ, ಹುಂಡುಕೋಳಿ, ಜಂಬುಕೋಳಿಗಳು (ಮೋರಂಗೋಳಿ)

 

ಮಧ್ಯಮಗಾತ್ರದ, ನೀರಿನ ಅಂಚಿನಲ್ಲಿ ವಾಸಮಾಡುವ, ನೋಡಲು ಹೇಂಟೆ ಕೋಳಿಯ ತರಹ ಕಾಣುವ ಜೌಗು ಹಕ್ಕಿಗಳು. ಉದ್ದ ಕಾಲುಗಳು; ಗಟ್ಟಿಮುಟ್ಟಾದ ಕೊಕ್ಕು; ಹೆಚ್ಚುದೂರ ಹಾರಲಾರದ, ಗುಂಡಾದ, ಸಣ್ಣ ರೆಕ್ಕೆಗಳು; ಚಿಕ್ಕ ಬಾಲ. ಕಾಲುಗಳನ್ನು ಇಳಿಬಿಟ್ಟುಕೊಂಡು ಪಟಪಟ ರೆಕ್ಕೆ ಬಡಿದುಕೊಂಡು ಹಾರುವ ಸ್ವಭಾವ. ಕೀಟ, ಹುಳ-ಹುಪ್ಪಟ, ಕಾಳು, ಭತ್ತದ ಎಳೆಕಾಂಡ, ಮತ್ತು ಜೌಗು ಸಸ್ಯಗಳೇ ಮುಂತಾದ ಸಸ್ಯ-ಪ್ರಾಣಿಜನ್ಯ ಆಹಾರ. ನೆಲದ ಮೇಲೆ, ಜೊಂಡುಗಳ ಎಡೆಗಳಲ್ಲಿ ಗೂಡು.

 

70. Blue-breasted Rail (Gallirallus striatus) Slaty-breasted Rail R Partridge- ಕೆನ್ನೆತ್ತಿಯ ಜೌಗುಕೋಳಿ

27 ಸೆಂ.ಮೀ. ಸೋಮಾರಿಯಂತೆ ಜೌಗು ಪ್ರದೇಶಗಳ್ಳಿ ಅಲೆದಾಡುವ ಈ ಹಕ್ಕಿಗೆ ಕಡುಗಂದು ಮೇಲ್ಮೈ ಮೇಲೆ ಬಿಳಿ ಚುಕ್ಕೆ ಮತ್ತು ಉದ್ದ ಗೀರುಗಳು; ಕೆಂಗಂದು ತಲೆ, ಹಿಂಗತ್ತು; ಕೆಂ ಕೊಕ್ಕು, ಕಣ್ಣುಗಳು; ಬಿಳಿ ಗಲ್ಲ; ಬೂದು-ನೀಲಿ ಎದೆ; ನಸುಗ್ಪ ಕೆಳಮೈ ಮೇಲೆ ಬಿಳಿ ಪತ್ತೆಗಳು; ತಿಳಿ ಹಸಿರುಗಂದು ಕಾಲುಗಳು. ಹೆಣ್ಣು ಮಾಸಲು ಮೇಲ್ಮೈಗೆ ಬಿಳಿ ಕೆಳಮೈ. ಜೊಂಡುಹುಲ್ಲು, ಗದ್ದೆಗಳೆಡೆಯಲ್ಲಿ, ಕೆರೆ-ಕೊಳಗಳ ಸುತ್ತ ಒಂಟಿಯಾಗಿ ತಲೆಯೆತ್ತಿಕೊಂಡು, ಬಾಲವನ್ನು ಕುಣಿಸುತ್ತಾ ಅಡ್ಡಾಡುವುದನ್ನು ಕಾಣಬಹುದು; ಸ್ವಲ್ಪವೇ ಸಂಶಯ ಬಂದರೂ ಸಕ್ಕನೆ ಹುಲ್ಲಿನ ನಡುವೆ ಮಾಯವಾಗುತ್ತದೆ; ಕಾಲುಗಳನ್ನು ಹಿಂದಕ್ಕೆ ಇಳಿಬಿಟ್ಟುಕೊಂಡು ಹಾರುತ್ತವೆ. ಗಟ್ಟಿಯಾದ ಎರಡು ಸ್ವರಗಳ ಸಿಳ್ಳೆ ಕೂಗು. ಜೊಂಡುಗಳ ಮಧ್ಯೆ, ಮರೆಯಲ್ಲಿ, ಎಲೆ-ನಾರುಗಳಿಂದ ಕೂಡಿದ ಗೂಡು.