71. White-breasted Waterhen (Amaurornis phoenicurus) R Partridge+/- ಹುಂಡುಕೋಳಿ (ಮೋರಂಗೋಳಿ)

32 ಸೆಂಮೀ. ನೀರಿನ ಬಳಿ ವಾಸಿಸುವ ಸುಪರಿಚಿತ ಹಕ್ಕಿ. ಬಿಳಿ ಮುಖ, ಎದೆ, ಕೆಳಮೈ; ಕಡುಬೂದು ನೆತ್ತಿ, ಬೆನ್ನು; ಕಿಬ್ಬೊಟ್ಟೆ ಮತ್ತು ಬಾಲದ ಬುಡ, ಕೆಂಗಂದು. ಒಂಟಿಯಾಗಿ, ಜೌಗು, ಗದ್ದೆ, ತೋಡು, ಕೊಳಗಳ ಅಂಚುಗಳಲ್ಲಿ ವಾಸ. ಮೊಂಡುಬಾಲವನ್ನು ಆಗಾಗ ಮೇಲಕ್ಕೂ-ಕೆಳಕ್ಕೂ ಆಡಿಸುವ ಸ್ವಭಾವ. ಸಂತಾನ ಋತುವಿನಲ್ಲಿ ಕ್ರ್..ಕ್ವಕ್.ಕ್ವಕ್.ಕ್ವಕ್. ಕೂಗಾಟ.