72. Common Coot (Fulica atra) Coot RM Duck- ನಾಮದಕೋಳಿ (ಕರ್ತ ಮೋರಂಗೋಳಿ)

42 ಸೆಂಮೀ. ಸ್ಲೇಟುಕ್ಪ ದೇಹಕ್ಕೆ, ದಪ್ಪನಾದ, ಚೂಪಾದ, ಬಿಳಿ ಕೊಕ್ಕು; ಹಣೆಯ ಮೇಲೆ ದೂರದಿಂದಲೂ ಎದ್ದು ಕಾಣುವ ಬಿಳಿ ನಾಮ; ಈಜಾಡಲು ಅನುಕೂಲವಾದ, ಅಗಲ ಜಾಲಪಾದ. ಸಣ್ಣ ಗುಂಪಿನಲ್ಲಿ ಕೆರೆ-ತೊರೆಗಳಲ್ಲಿ, ನೀರಿನಲ್ಲಿ ವಾಸ. ಗಾಬರಿಯಾದಾಗ ಪಟಪಟನೆ ರೆಕ್ಕೆ-ಕಾಲು ಬಡಿದುಕೊಂಡು ನೀರಿನ ಮೇಲೇ ಓಡುತ್ತವೆ. ಹಾರುವಾಗ ನೀರಿನಿಂದ ಏಳಲು ಪರದಾಟವಾದರೂ, ನಂತರ ಸಮರ್ಥವಾಗಿ ಹಾರಬಲ್ಲದು. ಏರು ಧ್ವನಿಯ ಸ್ಪಷ್ಟ, ಕಹಳೆಯ ಕೂಗು.