Janas (Jacanidae)

 

ದೇವನಕ್ಕಿಗಳು

73. Bronze-winged Jana  (Metopedius indicus) R ಬಿಳಿಹುಬ್ಬಿನ ದೇವನಕ್ಕಿ

30 ಸೆಂ.ಮೀ. ಜೊಂಡು, ಕೊಳದಾವರೆ ಮುಂತಾದ ಜಲಸಸ್ಯಗಳಿಂದಾವೃತವಾದ ಜೌಗು-ಹೂಳು ಪ್ರದೇಶದಲ್ಲಿ ವಾಸಿಸುವ ಹಕ್ಕಿ. ಹೊಳೆಯುವ ಕಂಚು-ಹಸಿರು ಮೇಲ್ಮೈ; ಕಡುಗ್ಪ ನೆತ್ತಿ, ಕತ್ತು ಮತ್ತು ಎದೆ; ಕಣ್ಣಿನ ಮೇಲೆ ಅಗಲವಾದ ಬಿಳಿ ಹುಬ್ಬು; ಮೊಂಡು ಕಂದು ಬಾಲ. ಅಪ್ರಾಪ್ತ ಹಕ್ಕಿಗಳಿಗೆ ಕೆಂಗಂದು ನೆತ್ತಿ; ಬಿಳಿ ಕೆಳಮೈ; ಕ್ಪ ಬಾಲದ ತುದಿ. ಜೇಡರ ಹುಳುವಿಗಿರುವಂತೆ ಉದ್ದ, ಸರವಾದ ಕಾಲ್ಬೆರಳುಗಳು; ನಡೆಯುವಾಗ ದೇಹದ ಭಾರ ಉದ್ದ-ಬಲಿಷ್ಠ ಕಾಲು ಹಾಗೂ ಬೆರಳುಗಳ ಮೇಲೆ ಹಂಚಿಹೋಗುವುದರಿಂದ ಕೊಳದಲ್ಲಿ ಬೆಳೆದ ತಾವರೆ ಮುಂತಾದ ಜಲಸಸ್ಯಗಳ ಮೇಲೆ ನಿರಾಯಾಸವಾಗಿ ಓಡಾಡುತ್ತವೆ. ಬಹುಪತಿತ್ವವನ್ನು ಅನುಸರಿಸುವ ಹೆಣ್ಣು ಹಕ್ಕಿ ಗಾತ್ರದಲ್ಲಿ ತುಸು ದೊಡ್ಡದು. ಸ್ವಲ್ಪ ಆಪತ್ತಿನ ಸೂಚನೆ ಕಂಡುಬಂದರೂ ಓಡಿ ಜೊಂಡುಹುಲ್ಲಿನ ನಡುವೆ ಅವಿತುಕೊಳ್ಳುತ್ತದೆ. ನೇರವಾಗಿ ಆಕಾಶಕ್ಕೆ ಚಿಮ್ಮಿ ಹಾರುತ್ತದೆಯಾದರೂ ಹೆಚ್ಚು ದೂರ ಹಾರಲಾರದು. ಸದ್ದಿಲ್ಲದೆ, ಸಣ್ಣ ಗುಂಪಿನಲ್ಲಿ ನಿಧಾನವಾಗಿ ಚಲಿಸುತ್ತ ಆಹಾರವನ್ನು ಅರಸುತ್ತವೆ. ಗೆಡ್ಡೆ-ಬೀಜ, ಕೀಟ-ಮೃದ್ವಂಗಿಗಳೇ ಆಹಾರ. ಕೊಳವೆಯಲ್ಲಿ ಊದಿದಂತೆ ಸೀಕ್..ಈಕ್.. ಸೀಕ್.. ಈಕ್.. ಕೂಗು. ನೀರ ಮೇಲೆ ಅಥವಾ ಕರೆಗಳಲ್ಲಿ ಎಲೆ-ಕಡ್ಡಿಗಳಿಂದ ಕೂಡಿದ ತೇಲುವ ಗೂಡು.