Plovers and Lapwings (Charadriidae)

 

ಟಿಟ್ಟಿಭಗಳು (ಉ್ಪತೀತಿ)

 

ಮಧ್ಯಮ ಗಾತ್ರದ ಜಲವಾಸಿಗಳು. ಅಗಲವಾದ ತಲೆಗೆ ದೊಡ್ಡ ಕಣ್ಣುಗಳು; ಚಿಕ್ಕ, ಗಟ್ಟಿಮುಟ್ಟಾದ ಕೊಕ್ಕು; ಮೊಂಡು ಬಾಲ; ದೂರದ ಹಾರಾಟಕ್ಕೆ ತಕ್ಕುದಾದ ಉದ್ದ-ಚೂಪಾದ ರೆಕ್ಕೆಗಳು; ಈ ರೆಕ್ಕೆಗಳು ಒಂದರ ಮೇಲೊಂದು ಆವರಿಸಿಕೊಂಡಿರುತ್ತವೆ. ಆಕಾಶದಲ್ಲಿ ವೇಗದ ಹಾರಾಟ. ನೇರವಾದ ನಡೆ. ಅಕಶೇರುಕ, ಮೃದ್ವಂಗಿ, ಕೀಟ, ಮಣ್ಣಿನೊಳಗಿನ ಸಸ್ಯಜನ್ಯಗಳು ಆಹಾರ. ನೆಲದ ಮೇಲೆ ಗೂಡು. ಮೊಟ್ಟೆ-ಮರಿಗಳು ಸುತ್ತಲ ನೆಲದೊಂದಿಗೆ ಒಂದಾಗಿ, ಗುರುತಿಸುವುದು ಬಹಳ ಕಷ್ಟ. ನೈಸರ್ಗಿಕ ಛದ್ಮವೇಷದಿಂದ ಸುಳುಹು ಮರೆ ಮಾಡುವುದಕ್ಕೆ ಉತ್ತಮ ಉದಾಹರಣೆ.

 

74. Red-wattled Lapwing (Vanellus indicus) R Partridge+ ಕೆಂ ಟಿಟ್ಟಿಭ (ಉ್ಪತೀತಿ)

33 ಸೆಂಮೀ. ಕ್ಪ ತಲೆ, ಕತ್ತು, ಎದೆ, ರೆಕ್ಕೆ ಮತ್ತು ಬಾಲದ ಅಂಚು; ತಿಳಿಗಂದು ಬೆನ್ನು; ಕಿವಿ-ಹಿಂಗತ್ತಿನಿಂದ ಹಿಡಿದು ಕೆಳಮೈ ಬಿಳಿ; ಕ್ಪತುದಿಯ ಕೆಂ ಕೊಕ್ಕು; ಕಣ್ಣಿನ ಮುಂಭಾಗದಲ್ಲಿ ಅಚ್ಚಗೆಂ ಮಾಂಸಲ; ಹಳದಿ ಕಾಲು. ಹುಲ್ಲುಗಾವಲು, ಮೈದಾನ, ಕೃಷಿ ಪ್ರದೇಶ, ಕೊಳದ ದಂಡೆ, ನೀರು, ಗದ್ದೆಗಳ ಬಳಿ ವಾಸ. ನಿರಂತರ ಜಾಗರೂಕತೆಯಿಂದ, ನೆಲದ ಮೇಲಿಡುವ ಮೊಟ್ಟೆ-ಮರಿಗಳನ್ನು ಸಾಕುತ್ತದೆ. ಸ್ವಲ್ಪ ಅಪಾಯದ ಸೂಚನೆ ಕಂಡುಬಂದರೂ ತಕ್ಷಣ ಕೂಗಾಡಿ, ಗುಲ್ಲೆಬ್ಬಿಸಿ ಇತರ ಹಕ್ಕಿಗಳನ್ನೂ ಎಚ್ಚರಗೊಳಿಸಿಬಿಡುತ್ತದೆ. ಕತ್ತಲಾದ ನಂತರವೂ ಡಿಡ್.ಯಿ.ಡೂ.ಇಟ್. ಕೂಗು.