Sandpipers, and Snipes (Scolopacidae)

 

ಗದ್ದೆಗೊರವಗಳು (ಬಂಡ್ಕೊತ್ತಿ) ಮತ್ತು ಉಲ್ಲಂಕಿಗಳು

 

 

ತೆಳುವಾದ, ಉದ್ದ ಕೊಕ್ಕಿನ, ನೀಳ-ಸರ ಕಾಲಿನ, ಮಧ್ಯಮ ಗಾತ್ರದ ವಲಸೆಹಕ್ಕಿಗಳು. ವೇಗದ, ದೂರದ ಹಾರಾಟಕ್ಕೆ ತಕ್ಕುದಾದ, ಚೂಪಾದ ರೆಕ್ಕೆಗಳು; ಗದ್ದೆ ಮತ್ತು ನೀರ ಸುತ್ತಮುತ್ತ ವಾಸ. ನಿಂತರೆ, ನೆಲಕ್ಕೆ ಸಮಾನಾಂತರ ದೇಹ, ನೇರ ನಡೆ. ನೇರ, ವೇಗವಾದ ಹಾಗೂ ಸಮರ್ಥ ಹಾರಾಟ ವಲಸೆಗೆ ಸಹಕಾರಿ. ಅಕಶೇರುಕ, ಕೀಟ, ಮೃದ್ವಂಗಿ, ಹುಳು-ಹುಪ್ಪಟೆ ಮತ್ತು ಮಣ್ಣಿನೊಳಗಿನ ಸಸ್ಯಜನ್ಯ ಆಹಾರ. ಪಶ್ಚಿಮ ಹಿಮಾಲಯ ಮತ್ತು ಕಾಶ್ಮೀರದಿಂದ ಚಳಿಗಾಲದ ವಲಸೆಗಾರ.

 

75. Common Sandpiper (Actitis hypoleucos) M Quail+ ಗದ್ದೆಗೊರವ (ಬಂಡ್ಕೊತ್ತಿ)

21 ಸೆಂಮೀ. ಸಣ್ಣ ಕಂದು ಗೀರುಗಳಿರುವ ತಿಳಿ ಹಸಿರುಗಂದು ಮೇಲ್ಮೈ; ಬಿಳಿ ತಲೆ, ಹುಬ್ಬು, ಕತ್ತು; ಬಿಳಿ ಎದೆ ಮತ್ತು ಕೆಳಮೈ; ತಿಳಿಗಂದು ಕಾಲುಗಳು. ಹಾರುವಾಗ ಎದ್ದುಕಾಣುವ ಬಿಳಿ ರೆಕ್ಕೆಪಟ್ಟಿಗಳು ಮತ್ತು ಕಂದು ಪೃಷ್ಠ. ಮೊಂಡು ಬಾಲವಾಡಿಸುತ್ತ, ಅತ್ತಿಂದಿತ್ತ ಓಡಾಟ. ಜೌಗು, ನೀರಿನ ಅಂಚಿನಲ್ಲಿ ವಾಸ. ನೀರಿನ ಮೇಲೆ ಕೆಳಮಟ್ಟದಲ್ಲಿ ಹಾರಾಡುತ್ತಾ ಟ್ವೀ.ಟ್ಸ್.ಟ್ಸ್.. ಕೂಗು. ಚಳಿಗಾಲದ ವಲಸೆಗಾರ.