Terns, Gulls and Noddies (Laridae)

 

ರೀವಗಳು

 

ಗುಂಪಾಗಿ ವಾಸಿಸುವ, ಉದ್ದನಾದ, ಸರ, ಚೂಪಾದ ರೆಕ್ಕೆಗಳು, ಜಾಲಪಾದವಿರುವ ಗಿಡ್ಡ ಕಾಲುಗಳು ಮತ್ತು ಕವಲು ಬಾಲವಿರುವ ಸ್ಥೂಲಕಾಯದ ಜಲಪಕ್ಷಿಗಳು. ಮೀನು, ಸತ್ತ ಜೀವಿಗಳು ಮತ್ತು ನೀರಬಳಿಯಿರುವ ಸಸ್ಯಜನ್ಯಗಳು ಆಹಾರ. ಸಂಜೀವನದಲ್ಲಿ ತಂಗುವುದು, ಗೂಡುಕಟ್ಟುವುದು. ನೆಲ, ಬಂಡೆ, ಮರಗಳ ಮೇಲೆ ಅಥವಾ ನೀರಿನ ಮೇಲೆ ತೇಲುವ ಗೂಡುಗಳು.

 

79.  River Tern (Sterna aurantia) Indian River Tern R Slim Pigeon ನದಿ ರೀವ

38-46 ಸೆಂಮೀ. ತಿಳಿ ಬೂದು ಮೇಲ್ಮೈ; ತಲೆ, ಕತ್ತು, ಕೆಳಮೈ ಬಿಳಿ; ಅಚ್ಚಗ್ಪ ಟೊಪ್ಪಿ, ಹಿಂಗತ್ತು; ಹಳದಿ ಕೊಕ್ಕು; ಗಿಡ್ಡ ಕೆಂ ಕಾಲುಗಳು; ಬಿಳಿಯಾದ ಸೀಳುಬಾಲ. ಹಾರುವಾಗ ಚೂಪಾದ ರೆಕ್ಕೆಯಂಚುಗಳು ಮತ್ತು ಸೀಳುಬಾಲ ಎದ್ದು ಕಾಣುತ್ತವೆ. ಗುಂಪಾಗಿ, ಹರಿವ ನೀರ ಬಳಿ, ಬಂಡೆಗಳಿರುವೆಡೆ, ಏರಿ, ಕೆರೆಯ ತೀರಗಳಲ್ಲಿ ವಾಸ. ಏಡಿ, ಗೊದಮೊಟ್ಟೆ, ನೀರಿನ ಕೀಟಗಳು ಆಹಾರ. ಹಾರುತ್ತಿರುವಾಗಲೇ ನೀರಿನಿಂದ ಮೀನು ಹಿಡಿದು, ಹಾರುತ್ತಲೇ ಆ ಮಿಕವನ್ನು ಬಿಸಾಡಿ, ಗಾಳಿಯಲ್ಲೇ ಗುಳುಂ ಎಂದು ನುಂಗುತ್ತದೆ! ಅಪರೂಪಕ್ಕೆ ಕೀರಲು ಧ್ವನಿಯಲ್ಲಿ ಅರಚುವಿಕೆ. ಮರಳದಂಡೆ ಅಥವಾ ನೆಲದ ಮೇಲೆ ಮೊಟ್ಟೆಯಿಡುವುದು.