ಪಾರಿವಾಳಗಳು (ಪಾರ್ಯೋಳ) ಮತ್ತು ಕತಗಳು (ತೋರೆ)

 

ಚಿಕ್ಕ ತಲೆ, ಗಿಡ್ಡ ಕತ್ತಿನ, ಆಹಾರಕ್ಕಾಗಿ ಮರ ಹಾಗೂ ನೆಲವನ್ನು ಆಶ್ರಯಿಸುವ, ಮಧ್ಯಮಗಾತ್ರದ ಹಕ್ಕಿಗಳು. ಪಾರಿವಾಳಗಳು ಗಾತ್ರದಲ್ಲಿ ಹಿರಿಯವಾದರೆ, ಕತಗಳು ಚಿಕ್ಕವು. ಒತ್ತಾದ, ಮೃದುವಾದ ಕ್ಕಗಳು; ಕಾಳು-ಬೀಜಗಳು, ಹಣ್ಣುಗಳು ಆಹಾರ. ಬಾಯಾರಿದಾಗ ಕೊಕ್ಕನ್ನು ನೀರಿನಲ್ಲಿರಿಸಿ, ತಲೆಯೆತ್ತದೆ, ನೇರವಾಗಿ ತಡೆಯಿಲ್ಲದೆ ನೀರು ಹೀರುತ್ತವೆ. ಪಟಪಟನೆ ರೆಕ್ಕೆ ಬಡಿದುಕೊಂಡು ವೇಗದ, ನೇರವಾದ ಹಾರಾಟ. ಮರದ ಮೇಲೆ, ಕಡ್ಡಿಗಳಿಂದ ತಯಾರಾದ ಹರುಕು-ಮುರುಕು ಅಟ್ಟಣಿಗೆ ಗೂಡು. ಮನೆಗೆ ಹಿಂದಿರುಗುವ ಸ್ವಭಾವವಿರುವ ಹಕ್ಕಿಗಳಾದ್ದರಿಂದ ಹಿಂದೆ ಈ “ಅಂಚೆ”ಗಳನ್ನೇ ಸಂದೇಶ ರವಾನೆಗೆ ಬಳಸುತ್ತಿದ್ದರು. ದೇಹದಲ್ಲಿ ತಯಾರಾಗುವ ಹಾಲಿನಂತಹ ವಿಶಿಷ್ಟ ದ್ರವವನ್ನು ಮರಿಗಳಿಗೆ ಉಣಿಸುತ್ತವೆ.

 

80. Blue Rock Pigeon (Columba livia) R Pigeon+ ಪಾರಿವಾಳ (ಕಾಡ್ ಪಾರ್ಯೋಳ)

33 ಸೆಂಮೀ. ಬೂದು ಮೈ; ಕೆಳಮೈ ತುಸು ತಿಳಿ; ಕತ್ತು, ಎದೆಯ ಮೇಲೆ ಹೊಳೆಯುವ ಹಸಿರು-ನೇರಿಳೆ-ಕಡುಗೆಂ ವರ್ಣ; ಕೆಂ ಕಣ್ಣು, ಕಾಲುಗಳು; ಕ್ಪ ಬಾಲದ ತುದಿ ಮತ್ತು ರೆಕ್ಕೆಗಳ ಮೇಲೆ ಎರಡು ಕ್ಪ ಪಟ್ಟಿಗಳು. ಕತ್ತನ್ನು ತಿರುಗಿಸದೇ 300? ವಿಸ್ತಾರದ ದೃಶ್ಯವನ್ನು  ನೋಡಬಲ್ಲದು. ಗುಂಪಾಗಿ, ಜನವಾಸವಿಲ್ಲದ ಹಳೆ ಕಟ್ಟಡದ ಮೇಲೆ, ರೈಲ್ವೆ ನಿಲ್ದಾಣ, ಉಗ್ರಾಣಗಳಲ್ಲಿ, ಬಂಡೆಗಳ ಸಂದುಗಳಲ್ಲಿ ವಾಸ. ಗಂಟಲನ್ನು ಉಬ್ಬಿಸಿ, ಆಳವಾದ ಗುಟ್ರ್.ಗೂ…ಗುಟ್ರ್.ಗೂ… ಕೂಗು.