82. Mountain Imperial-Pigeon (Ducula badia) Maroon-backed Imperial Pigeon R Pigeon+ ಗುಮ್ಮಾಡಲು (ಕೋಂಬಕ್ಕಿ)

51 ಸೆಂಮೀ. ಕಂಚುಗಂದು ಬಣ್ಣದ ಬೆನ್ನು; ಬೂದು ತಲೆ, ಕುತ್ತಿಗೆ, ಕೆಳಮೈ; ಬಿಳಿ ಗಂಟಲು. ಸಣ್ಣ ಗುಂಪಾಗಿ, ಎತ್ತರದ ಮರದ ಮೇಲೆ ಎಲೆಗಳ ನಡುವೆ ಕಾಣಬಹುದು. ಅತ್ತಿ-ಆಲ, ಜಾಯಿಕಾಯಿ ಹಣ್ಣುಗಳಿರುವ ಮರಗಳೆಂದರೆ ಪಂಚಪ್ರಾಣ. ಆಳವಾದ ಉಲ್.ಊಕ್..ಊಕ್.. ಕೂಗು.