89. Spotted Dove (Streptopelia chinensis) R Myna+ ಚೋರೆಹಕ್ಕಿ (ಮಣಿತೋರೆ)

30 ಸೆಂಮೀ. ತಿಳಿಗಂದು ಮೈ; ಬೂದುಗಂದು ರೆಕ್ಕೆಗಳು; ಹಿಂಗತ್ತಿನಲ್ಲಿ ಚದುರಂಗದ ಹಾಸು; ಬಿಳಿ ಕೆಳಹೊಟ್ಟೆ. ಸಣ್ಣ ಗುಂಪಿನಲ್ಲಿ, ಸದಾಹಸಿರು, ಉದುರೆಲೆ, ಕುರುಚಲುಕಾಡು, ಕೃಷಿಭೂಮಿ, ಜನವಸತಿ ಪ್ರದೇಶಗಳಲ್ಲಿ ಮರ-ದೆಗಳಲ್ಲಿ ವಾಸ. ಸಾಮಾನ್ಯವಾಗಿ ಹೊಲ-ಗದ್ದೆಗಳಲ್ಲಿ, ಹಾದಿಗಳ ಮೇಲೆ, ಕಾಳು-ಕೀಟಗಳನ್ನು ಹೆಕ್ಕುವುದನ್ನು ಕಾಣಬಹುದು. ಸುಪರಿಚಿತ, ನಿರಂತರವಾದ, ವಿಷಾದದ ಉಕ್.ಕ್ರು.ಕ್ರೂ..ಕ್ರೂ..ಕ್ರೂ… ಕೂಗು.