9. Grey Heron (Ardea cinerea) R Vulture+ ಬೂದು ಬಕ (ಬೂದ್ ಳೆ) 97 ಸೆಂಮೀ. ನೋಡಲು 6ರಂತಿದ್ದರೂ ಗಾತ್ರದಲ್ಲಿ ಅದಕ್ಕಿಂತ ದೊಡ್ಡದು; ಬೂದು ಮೈ, ಕ್ಪ ಕಣ್ಣುಪಟ್ಟಿ, ನೆತ್ತಿ ಮತ್ತು ಜುಟ್ಟು; ಕತ್ತಿನ ಮುಂಭಾಗದಲ್ಲಿ ಕ್ಪ ಚುಕ್ಕೆಗಳು; ಭರ್ಜಿಯಂತಹ ಬಲಿಷ್ಠ ಹಳದಿ ಕೊಕ್ಕು; ಹಳದಿ ಕಾಲುಗಳು; ಮೊಂಡಾದ ಬೂದು ಬಾಲ. ಪ್ರಜನನ ಕಾಲದಲ್ಲಿ ನೆತ್ತಿಯ ಮೇಲೆ ಎರಡು ನೀಳ ಬಿಳಿ ಗರಿಗಳು ಮೂಡುತ್ತವೆ. ನೀರು-ಜೌಗು ಪ್ರದೇಶಗಳಲ್ಲಿ, ಒಂಟಿಯಾಗಿ ಕಾಣಬಹುದು. ಮುಂಜಾನೆಯ ವೇಳೆ ಬೇಟೆ; ಉಳಿದ ಸಮಯ ಮರದ ಮೇಲೆ ನೆರಳಿನಲ್ಲಿ ವಿಶ್ರಾಂತಿ. ಕತ್ತು ಮಡಿಸಿಕೊಂಡು, ನಿಧಾನವಾಗಿ ರೆಕ್ಕೆ ಬಡಿದುಕೊಂಡು ಹಾರಾಟ; ಹಾರುವಾಗ ಒರಟಾದ ಕ್ರಾಂಕ್ ಕೂಗು. ಉಳಿದೆಲ್ಲ 6ರಂತೆ.