Parakeets and Hanging Parrots (Psittacidae)

 

ಗಿಳಿಗಳು (ಗ್ಣಿ)

 

 

ಗಿಳಿಹಸಿರು ಬಣ್ಣದ, ಸರ ದೇಹದ, ನೀಳವಾದ ಬಾಲವುಳ್ಳ, ಸುಪರಿಚಿತ ಹಕ್ಕಿಗಳು. ಗುಂಡಾದ ತಲೆ; ಸಣ್ಣ, ಬಾಗಿದ, ಬಲವಾದ ಕೊಕ್ಕು; ಕಾಲಿನಲ್ಲಿ ಎರಡು ಬೆರಳುಗಳು ಮುಂದೆ, ಎರಡು ಹಿಂದೆ. ಕೊಕ್ಕಿನ ಮೇಲ್ದವಡೆ ಅಲುಗಾಡಬಲ್ಲದು. ಬೆಳೆದು ನಿಂತ ಪೈರಿರುವ, ರೈತರ ಹೊಲ-ಗದ್ದೆಗಳಲ್ಲಿ, ದಾಂಧಲೆ ಎಬ್ಬಿಸುವುದಲ್ಲದೆ, ತೋಟಗಳಲ್ಲಿ ಹಣ್ಣುಗಳನ್ನು ತಿನ್ನುವುದಕ್ಕಿಂತ, ಅವುಗಳನ್ನು ತಮ್ಮ ಕೊಕ್ಕಿನಿಂದ ಕುಕ್ಕಿ, ಕುಕ್ಕಿ, ನಾಶಪಡಿಸುವುದೇ ಹೆಚ್ಚು! ಇದಲ್ಲದೆ, ರಾತ್ರಿವೇಳೆ, ಮರಗಳಲ್ಲಿ ಕುಳಿತು ಕಚ-ಪಿಚ ಅರಚಾಟ ಬೇರೆ. ಇಷ್ಟಾದರೂ, ತಮ್ಮ ಆಕರ್ಷಕ ನಿಲುವು, ಗುಂಪಾಗಿ ಹಾರಾಡುವ ವೇಗ, ಲಾಲಿತ್ಯ, ಕರಾರುವಾಕ್ಕಾದ ರೆಕ್ಕೆ ಬಡಿತ, ಇವೆಲ್ಲವುಗಳಿಂದ ಗಿಳಿಗಳು ಚಿತ್ತಾಕರ್ಷಕ ಮತ್ತು ಮನಸ್ಸಿಗೆ ಮುದನೀಡುವ ಹಕ್ಕಿಗಳು. ಮರದ ಒಣ ಕಾಂಡಗಳಲ್ಲಿ ಅಥವಾ ಹಳೆಯ ಗೋಡೆಗಳಲ್ಲಿ, ಕೊರೆದ ತೂತುಗಳೊಳಗೆ ಗುಂಪಾಗಿ ಗೂಡು ಕಟ್ಟುತ್ತವೆ.

 

93. Rose-ringed Parakeet (Psittacula krameri) R Myna+ ಗುಲಾಬಿಕೊರಳಿನ ಗಿಳಿ (ಗ್ಣಿ)

42 ಸೆಂಮೀ. ನೀಳದೇಹಕ್ಕೆ ಕೆಂ ಕೊಕ್ಕು; ಗಂಡಿಗೆ ಕತ್ತಿನ ಮೇಲೆ ಗುಲಾಬಿ ಮತ್ತು ಕ್ಪ ಸರ. ಉದುರೆಲೆ, ಕುರುಚಲುಕಾಡು, ಕೃಷಿಭೂಮಿ, ಎಸ್ಟೇಟು, ತೋ ಮತ್ತು ಜನವಸತಿಯಿರುವೆಡೆ ವಾಸ. ನೆಲದ ಮೇಲೆ ಓಲಾಡುವ ನಡೆ; ಪಂಜರದ ಪಕ್ಷಿ; ಹತ್ತಾರು ಪದಗಳನ್ನೂ ಕಲಿತೀತು, ಈ ಗಿಳೀರಾಮನ ಶಾಸ್ತ್ರವನ್ನು ಜನರೂ ಕೇಳಿಯಾರು. ಗಟ್ಟಿಯಾದ ಕೀ.ಕೀ.ಕೀಕ್..ಕೀಕ್.. ಕಿರುಚಾಟ.