Cuckoos, Malkohas and Coucals (Cuculidae)

 

ಕೋಗಿಲೆಗಳು (ಕೋಗಿಲೆ) ಮತ್ತು ಕೆಂಬೂತಗಳು (ಚೊಂಬುಕ)

 

ಆಹಾರಕ್ಕಾಗಿ ಮತ್ತು ತಂಗಲು, ನೆಲ ಮತ್ತು ಮರಗಳನ್ನಾಶ್ರಯಿಸುವ ಮಧ್ಯಮ ಗಾತ್ರದ ಹಕ್ಕಿಗಳು. ಗಟ್ಟಿಮುಟ್ಟಾದ, ಸ್ವಲ್ಪ ಬಾಗಿದ ಕೊಕ್ಕು; ಚಿಕ್ಕ ಕಾಲುಗಳು; ಕಾಲ್ಬೆರಳುಗಳು ಎರಡು ಮುಂದೆ, ಎರಡು ಹಿಂದೆ; ಪಟ್ಟೆಗಳುಳ್ಳ, ಉದ್ದವಾದ, ದೇಹಕ್ಕೆ ಭಾರವೆನಿಸುವ ಬಾಲ. ಅಪ್ರಾಪ್ತ ಹಕ್ಕಿಗಳು ಸಾಧಾರಣವಾಗಿ, ಗೀರುಗಳಿರುವ ಕಂದುಬಣ್ಣದ ದೇಹವನ್ನು ಹೊಂದಿರುತ್ತವೆ. ಮೃದ್ವಂಗಿ, ಹಾವು-ಹಲ್ಲಿಗಳು, ಸಣ್ಣ ಅಕಶೇರುಕಗಳು, ಹಣ್ಣುಗಳು ಆಹಾರ. ಪ್ರಜನನ ಕಾಲದಲ್ಲಿ ಉತ್ಸಾಹಭರಿತ ಗಾನ; ಸರಿಸುಮಾರು ಎಲ್ಲ ಪ್ರಭೇದಗಳೂ ತಮ್ಮ ಹಾಡಿನ ಸ್ವರಗಳನ್ನು ಅವರೋಹಣ ಗತಿಯಲ್ಲಿ ಹಾಡುವುದು ಒಂದು ವಿಶೇಷ. ಯಾವುದೇ ಗೂಡು ಕಟ್ಟುವ ಗೋಜಿಲ್ಲದೆ, ಮೊಟ್ಟೆಗಳಿಗೆ ಕಾವು, ಗುಟುಕು ನೀಡದೇ, ಇತರ ಹಕ್ಕಿಗಳ ಗೂಡಿನಲ್ಲಿ ತಮ್ಮ ಮೊಟ್ಟೆಯನಿಟ್ಟು ಕೈತೊಳೆದುಕೊಳ್ಳುವ ಪಕ್ಷಿಗಳು. ಆ ಹಕ್ಕಿಯದೇ ಮೊಟ್ಟೆಯ ಗಾತ್ರ, ಆಕಾರ, ಬಣ್ಣಗಳಿರುವ ಮೊಟ್ಟೆಗಳನ್ನು ತಾನೂ ಇಡುತ್ತದೆ.

98. Indian Cuckoo (Cuculus micropterus) R Pigeon+/- ಪಟ್ಟೆಬಾಲದ ಕೋಗಿಲೆ (ಬೂದ್ ಕೋಗಿಲೆ)

33 ಸೆಂಮೀ. ತಿಳಿ ಬೂದುಗಂದು ಮೇಲ್ಮೈ, ತಲೆ, ಕತ್ತು, ಎದೆ; ಬಿಳಿ ಕೆಳಮೈ ಮೇಲೆ ಅಡ್ಡಡ್ಡಲಾದ ಕ್ಪ ಗೀರುಗಳು; ಕ್ಪ ಪಟ್ಟೆ ತುದಿಯ ಬೂದು ಬಾಲ. 4 ಸ್ವರದ ಬೂಕೋ.ಟಾಕೋ ಅಥವಾ ಈಚು.ಪೀಚು ಕೂಗು. ಒಂಟಿಯಾಗಿ ಮರಗಳ ಮೇಲೆ ಕಾಣಬಹುದು. ಕಳಿಂಗ, ಸುವರ್ಣ ಮುಂತಾದ ಪಕ್ಷಿಗಳೊಂದಿಗೆ ಪರತಂತ್ರ ಜೀವನ.