ಗೆಳೆಯನ ಮೇಲೆ ಸಿಟ್ಟು ಬಂತು
ಒದರಿಬಿಟ್ಟೆ. ಸಿಟ್ಟು ಹೋಯ್ತು
ವೈರಿ ಮೇಲೆ ಸಿಟ್ಟು ಬಂತು
ಬಚ್ಚಿಟ್ಟುಕೊಂಡೆ; ಬೆಳೀತ ಹೋಯ್ತು
ಭಯದ ನೀರೆರೆದೆ;
ಕಂಬನಿಯಲ್ಲಿ ಕಾಪಾಡಿದೆ
ಹುಸಿ ನಗೆಯಲ್ಲಿ ಅರಳಿಸಿದೆ
ಹಗಲೂ ರಾತ್ರಿಯೂ ಹೀಗೇ
ಅದು ಬೆಳೀತಾನೇ ಹೋಯ್ತು
ಬೆಳೀತ ಬೆಳೀತ ಫಲ ಬಿಡ್ತು
ಮಾದಕ ಕೆಂಪಿನ ಒಂದು ಸೇಬಿನ ಹಣ್ಣು.
ನನ್ನ ವೈರಿ ಕಣ್ಣಿಗೆ ಅದು ಬಿತ್ತು
ತನ್ನ ವೈರಿ ಬಾಳಿಸಿ ಬೆಳೆಸಿದ
ಅದರ ಮಾದಕ ಹೊಳಪಿಗೆ ಮರುಳಾಗಿಬಿಟ್ಟ
ಕತ್ತಲಿಗೆ ಕಾದು ಒಳಹೊಕ್ಕು
ವೈರದಲ್ಲಿ ಬೆಳೆದದ್ದು ಬಲುರುಚಿ ಎನ್ನಿಸಿ
ಕದ್ದು ತಿಂದ
ಅಂಗಾತ ಬಿದ್ದು ಸತ್ತವನನ್ನ ಕಂಡೆ
ಎದ್ದವನೇ ಬೆಳಿಗ್ಗೆ
(ವಿಲಿಯಂ ಬ್ಲೇಕ್ನ ‘ಎ ಪಾಯ್ಸನ್ ಟ್ರೀ’ ಕವಿತೆಯ ಅನುವಾದ)
Leave A Comment