ಇಡೀ ಜಗತ್ತನ್ನು ಏನಕೇನ ಗೆದ್ದು

ತನ್ನ ಅಧೀನದಲ್ಲಿಟ್ಟುಕೊಳ್ಳಲು ಶ್ರಮಿಸಿದ
ತೈಮೂರನ ಹಠ ತಮಾಷೆ ಎನ್ನಿಸತ್ತೆ
ನೋಡಿ, ಕಟುವಾದ ಮತ್ತಿನ ಸಾರಾಯಿ ಕುಡಿದು
ಈ ಜಗತ್ತೇ ಇಲ್ಲವೆಂದು ತಿಳಿಯೋದು ಕೂಡ ಸಾಧ್ಯ
ಅಲ್ಲವೆ?

ಅಲೆಕ್ಸಾಂಡರ್: ನಾನವನ ಮಾತು ಎತ್ತಲ್ಲ ಬಿಡಿ.
ಸದ್ಯದ ಈ ಕಾಲದಲ್ಲಿ ಬದುಕಿ ಉಳಿದಿರೋದೆ
ಇನ್ನೂ ಹೆಚ್ಚಿನ ಸೋಜಿಗ ನನಗೆ

ಘನವಂತರು ಅಂತ ನಾವು ಅಂದುಕೊಳ್ಳುವ ಮಂದಿ
ಸದಾ ಬೆವರುತ್ತ ಬದುಕಿರಬೇಕಾಗುತ್ತೆ
ಅದೇ ತಮ್ಮ ಪಾಡಿಗೆ ತಾವು ತಣ್ಣಗೆ ಇದ್ದುಬಿಡೋರು
ಬೀಡಿ ಸೇದುತ್ತ ಮರದ ಕೆಳಗೆ ಬಿಸಿಲು ಕಾಯೋರು
ಕಳ್ಳಿನ ಸುಖ ಕಂಡೋರು
ತಮ್ಮ ಹೆಣ್ಣುಗಳ ಜೊತೆ ಸುಮ್ಮನೇ ಕಾಲು ಚಾಚಿ ಕೂತೋರು
ಸದಾ ಬೆವರುವ ಮಹಿಮರಿಗೆ ಬೇವರ್ಸಿಗಳು ಅನ್ನಿಸುತ್ತೆ

ಅದೇನು ಮಹಾ? ಅನ್ನಿಸಲಿ ಬಿಡಿ

(ಬರ್ಟೋಲ್ಟ್ ಬ್ರೆಕ್ಟ್ ಪದ್ಯವೊಂದರ ಪ್ರೇರಣೆ)