‘ಬರೆಯುವುದು ಎಷ್ಟು ಕಷ್ಟವೋ ಬರೆಯದಿರುವುದು ಅಷ್ಟೇ ಕಷ್ಟ’ ಎಂಬುದು ರಾಮಾನುಜನ್ ಮಾತೆಂದು ನೆನಪು.
ನನಗೆ ಅಚ್ಚರಿಯಾಗುವಂತೆ ಕೆಲವೊಮ್ಮೆ ಏನೋ ಹೊಳೆದು ನಾನು ಬರೆದುಬಿಡುವುದುಂಟು. ಇದು ಪದ್ಯವೋ, ಕಥೆಯೋ, ಪ್ರಬಂಧವೋ ನನಗೆ ಮುಖ್ಯವಲ್ಲ. ಅಣ್ಣಾ ಹಜಾರೆಗೆ ಸ್ಪಂದಿಸುವುದು ಕೂಡ ಒಂದು ಸೃಜನ ಕ್ರಿಯೆಯೇ. ನನ್ನನ್ನು ನಾನು ಮರೆತು ಎದುರಾದ್ದನ್ನು ದಿಟ್ಟಿಸಿ ನೋಡುವ ತ್ರಾಣ ಉಳಿದಿದೆ ಎಂಬ ಸಂತೋಷ ಕೊಟ್ಟ ಕೆಲವು ಈಚಿನ ಬರಹಗಳು ಇಲ್ಲಿವೆ.
ಇಲ್ಲಿಯ ಬರಹಗಳನ್ನು ಪ್ರಕಟಿಸಿದ ಪತ್ರಿಕೆಗಳಿಗೆ ಮತ್ತು ಸಂಪಾದಕರಿಗೆ ಋಣಿ.
ನಾನೇ ಮರೆತ ನನ್ನ ಬರಹಗಳನ್ನು ಒಟ್ಟು ಮಾಡಿ, ಕಾಪಾಡಿ, ಪ್ರಕಟಿಸಿರುವ ರವಿಕುಮಾರ್ ಗೆ ನಾನು ಕೃತಜ್ಞ.
ಯು.ಆರ್. ಅನಂತಮೂರ್ತಿ
Leave A Comment