ಆಡಿ ತೋರಬಾರದು ಪ್ರೀತೀನ
ತೋರದಂತೆ ಅದು ಇರೋದು
ತಂಗಾಳಿ ಹಾಗೆ

ನಾನು ಹೃದಯ ತೋಡಿಕೊಂಡೆ
ಹಲವು ಮಾತಲ್ಲಿ
ಅವಳು ದಿಗಿಲುಗೊಂಡು
ಕಾಣೆಯಾದಳು

ಅವಳನ್ನ ಒಬ್ಬ ಚುರುಕು ಕಣ್ಣಿನ ದಾರಿಹೋಕ ಕಂಡು
ಬಾಯಿ ಕಟ್ಟಿದಂತಾಗಿ
ನಿಡಿಸುಯ್ದ

ಪಡೆದ.

(ವಿಲಿಯಂ ಬ್ಲೇಕ್‌ನ `Love’s Secret’ ಕವಿತೆಯ ಅನುವಾದ)