ಗಗನ ಚಾರಿ : ನೋಡಿ ಆಕಾಶಚಾರಿ

ಗತಿ : ನಡಿಗೆಯ ಕ್ರಮ, ತಾಳದ ಓಟ (ತ್ರಿಶ್ರ, ಚತುರಶ್ರ, ಖಂಡ, ಮಿಶ್ರ, ಸಂಕೀರ್ಣ) (ಹತ್ತು ವಿಧ) (ಅಭಿದ. ೩೦೫, ೩೦೬) (ನಾಸಂಮ.) (ನರ್ತನಿ. ೭೦೦)

ಗತಿಭೇದ (ತಾ) : ನೃತ್ಯದಲ್ಲಿ ನಡೆಯುವ ವಿಧಾನ, ತಾಳದಲ್ಲಿ ನಡೆಭೇದ. ಗತಿ ನೋಡಿ.

ಗಮಕ : ಶ್ರೋತೃಗಳಿಗೆ ಆನಂದವನ್ನು ಕೊಡುವ ಧ್ವನಿ ಕಂಪನ (ಭರಕೋ.ಪು. ೧೭೪) (ಸಂಸಸಾ. ೪೭) (ಸಂಸಸಾ. ೪೮) (ಸದ್ರಾಗ. ೧೨)

ಗಾನ : ಧಾತು ಮಾತುಗಳನ್ನು ಶಾಸ್ತ್ರೋಕ್ತ ಲಕ್ಷಣಗಳನ್ನೊಳಗೊಂಡು ದೇಶೀರಾಗ ಮೊದಲಾದವುಗಳಲ್ಲಿ ರಚಿತವಾದ ಹಾಡು (ನರ್ತನಿ. )
ಯತ್ತು ವಾಗ್ಗೇಯಕಾರೇಣ ರಚಿತಂ ಲಕ್ಷಣಾನ್ವಿತಮ್ |
ದೇಶೀ ರಾಗಾಧಿಭಿಃ ಪ್ರೋಕ್ತಂ ತದ್ಗಾನಂ ಜನರಂಜನಂ – ಸಂಗೀಸಾ
ಆದಿಪು. ೧೨೨, ಮಹಾನೇ. ೭ವ, ಚಂದ್ರಪು. ೧೨೧೭೬ .

ಗಾನ ಪಾಠ್ಯ : ಗಾಯನದಲ್ಲಿ ಬಳಸುವ ಸಂಗೀತ, ಸ್ವರಗಳ ಗುಚ್ಛ.

ಗಾರ : ಪ್ರಬಂಧಗಳಲ್ಲಿ ಒಂದು. (ಸಂಸಸಾ. ೭೦)

ಗೀತಾ : ಸ್ವರ, ಪದ, ತಾಲಗಳ ಸಮನ್ವಯವಿರುವ ಹಾಡು. (ಸಂಗೀದಾ. ಪು. ೧೬) (ಮಾನಸ) ಹರಿವಂ ೨೯ ಕಂ..ವಿ. ೬೧

ಗೀತಜತಿ : ಗೀತದ ನಡುವೆ ಸಣ್ಣ ಸಣ್ಣ ಪಾಠಾಕ್ಷರಗಳ ಜೋಡಣೆ.

ಗೀತಾನುಗ : ಗೀತವನ್ನು ಅನುಸರಿಸಿ ವಾದ್ಯಗಳನ್ನು ನುಡಿಸುವ ಕ್ರಮ.

ಗೀತಿ : ಮಾರ್ಗಸಂಗೀತ, ಆರ್ಯವೃತ್ತದ ಒಂದು ವಿಧ.

ಗುಂಡಲ : ಉರುಪು, ಮಂಡಿಗಳಿಂದ ತೀವ್ರವಾಗಿ ಸುತ್ತುವುದು.

ಗುಂಡಾಲ () : ದೇಶೀ ನೃತ್ಯ. ಅನಿಬಂಧ ಉರುಪು ಕ್ರಮಗಳಲ್ಲಿ ಒಂದು. ತಾಲವನ್ನು ಅನುಸರಿಸುವಂತೆ ಮೊಳಕಾಲಿನಿಂದ ವೇಗವಾಗಿ ಬಾಹ್ಯಭ್ರಮರಿಗಳನ್ನು ಮಾಡಿದರೆ ಆಗ ಅದು ಗುಂಡಾಲ ಎಂದು ಹೇಳಿದೆ. (ನರ್ತನಿ. ೪-೮೮೨)

ಗುಣಾನಿ > ಗುಣಣೆ > ಗುಣಾನೆ : ನಾಟಕಶಾಲೆ ಅಥವಾ ಸಂಗೀತ ಶಾಲೆ. ನರ್ತನ, ಕುಣಿದಾಟ.

ಗುರು : ತಾಳದ ಷಡಂಗಗಳಲ್ಲಿ ಒಂದು, ಕಾಲ ಪ್ರಮಾಣ ೨ ಮಾತ್ರೆಗಳು ಅಥವಾ ೮ ಅಕ್ಷರ ಕಾಲ. (ಸಂಗೀದಾ. ಪುಟ ೬೦)

ಗುರು ಲಘು ಸಂಚಯ (ತಾ): ಅವನದ್ಧ ವಾದ್ಯದಲ್ಲಿ ಗುರು ಲಘುವಿನ ಪ್ರವೃತ್ತಿ, ದ್ರುತಲಯ. (ನಾಟ್ಯಶಾ. ೩೩೧೧೯)

ಗುರುಸಂಚಯ (ತಾ) : ಗುರು ಅಕ್ಷರಗಳು, ವಿಲಂಬಿತಲಯ, ಓಘಪ್ರವೃತ್ತಿ. (ನಾಟ್ಯಶಾ. ೩೩೧೧೭)

ಗೇಯ : ಗೇಯಪದ; ಹಾಡುವ ಪ್ರಬಂಧ ರಚನಾ ವಿಶೇಷ, ೧೨ ಲಾಸ್ಯಾಂಗಗಳಲ್ಲಿ ಒಂದು. (ನೃತ್ತರ. ೬೦)

ಗೊಂಡಂಗೊಂಡಿ (ಗುಂಥಾಗುಂಥಿ?) (ಸಂ): ಸ್ಥಾಯಿ ಹೆಸರುಗಳಲ್ಲಿ ಒಂದು. (ಸಪ್ತಸ್ವರಗಳು ನಿರಂತರವಾಗಿ ಬರುವುದು) (ಸಂಸಸಾ. ೫೮)

ಗೊಂದಳ > ಗೊಂದಣ : ಸಾಮೂಹಿಕ ನೃತ್ಯ.

ಗೊಂದಳ ವೆಕ್ಕಣ : ಸಮೂಹ ನೃತ್ಯದ ದೃಶ್ಯ.

ಗ್ರಾಮ (ಸಂ) : ಸಂಗೀತದ ಆರೋಹಣ ಕ್ರಮದಲ್ಲಿ. ಕ್ರಮವಾಗಿ ಸಪ್ತಸ್ವರ ನಿರ್ಮಾಣ ಅಥವಾ ರಾಗವು ಆರಂಭವಾಗುವ ಸ್ವರ ಸ್ಥಾನ. ಇವು ಮೂರು – ಷಡ್ಜ, ಮಧ್ಯಮ, ಗಾಂಧಾರ. (ಸಂಗೀದಾ. ಪು.ಸಂ. ೩೩)

ಗ್ರಾಮರಾಗ : ಸಂ.ಶಾ.ಚಂ. ಪು.ಸಂ. ೧೯, ಮಲ್ಲಿಪು. ೧೬

ಗ್ರೀವಾಭೇದ : ನರ್ತನದಲ್ಲಿ ಕುತ್ತಿಗೆಯ ಚಲನಾಭೇದ (ನಾಟ್ಯಶಾ. ೧೭೦, ೭೧) (ಸಂಗೀರ. ೩೩೧) (ಅಭಿದ. ೮೦) (ಲಾಸ್ಯರಂ. ೧೧೪)

ಗ್ರೀವಾಭಂಗಿ : ನೋಡಿ ಗ್ರೀವಾ ಭೇದ.

ಘನ : ಚತುರ್ವಿಧ ವಾದ್ಯಗಳಲ್ಲಿ ಒಂದು. ಲೋಹದಿಂದ ತಯಾರಾದುದು. ಉದಾ. ತಾಳ, ಕಾಂಸ್ಯತಾಳ, ಘಂಟೆ ಇತ್ಯಾದಿ. (ಸಂಗೀರ. ) (ಸಂಗೀರ. ) (ಮಾನಸ. ೧೬೫೭೧) (ಸಂ..ಸಾ. ) (ಸಂ..ಸಾ. )

ಘಂಟಾ ಘನವಾದ್ಯ : (ಸಂಗೀರ. ೧೧೮೩) (ಮಾನಸ. ೧೬೮೩೦) (ಶಿತರ. ೧೮೮)

ಚಂಚಪುಟ (ತಾ) : ಮಾರ್ಗತಾಳ, ಚತುರಶ್ರತಾಳ (ಎರಡು ಗುರು, ಒಂದು ಲಘು, ಒಂದು ಪ್ಲುತ) (ನಾಟ್ಯಶಾ. ೩೧) (ಸಂಗೀರ. ೧೯) (ಸಂ..ಸಾ. ೨೧)

ಚಂಡಣಿ (ವಾ) : ವಾದ್ಯ ಪ್ರಬಂಧ. (ಸಂಗೀರ. ೧೮೮) (ಸಂ..ಸಾ. ೧೪೦)

ಚತುರ : ಅಸಂಯುತ ಹಸ್ತಗಳಲ್ಲಿ ಒಂದು, ಹುಬ್ಬಿನ ಚಲನೆಯ ಭೇದ. (ನೋಡಿ ಅನುಬಂಧ ಆ. ಸಂ. ೨೦, ಅಸಂಯುತ ಹಸ್ತ) (ನಾಟ್ಯಶಾ. ೧೩) (ಅಭಿದ. ೧೬೪) (ಸಂಗೀರ. ೪೪೧) (ಮಾನಸ. ೧೬೧೦೩೧) (ಲಾಸ್ಯರಂ. ೪೭)

ಚತುಷಷ್ಟ ವಿಧ ಹಸ್ತ ವಿಸ್ತಾರ : ೬೪ ಹಸ್ತಗಳು. (ಮಾನಸ. ೧೬೧೧೫೭)

ಚಮತ್ಕಾರ: ನೃತ್ತ, ಅಕ್ಷರ ಪ್ರಧಾನವಾದ ನೃತ್ತ. (ಸಂಗೀದ. ೧೯೨)

ಚರ್ಚರಿ (ತಾ) : ಮಾರ್ಗೀತಾಳ, ಆರ್ವತಕ್ಕೆ ೧೮ ಅಕ್ಷರ.
ಅಂಗ – OOU | OOU | OOU | OOU |
OOU | OOU | OOU | OOU |

ಚರ್ಚರಿ > ಚಚ್ಚಾರಿ : ದೇಶೀ ನೃತ್ತ. ಚಚ್ಚಾರಿ (ಚರ್ಚರಿ) ತಾಳದಲ್ಲಿ ೪ ಆವರ್ತನ ನೃತ್ತ. (ವೇಸಂಮ. ಪು. ಸಂ. ೨೫)

ಚರಣ : (ಚರಣ ಗತಿ, ಚರಣ ನ್ಯಾಸ, ಚರಣ ಸಂಚಾರ) ಪಾದಭೇದ, ಪಾದಗಳ ಅಭಿನಯ. (ನಾಟ್ಯಶಾ. ೩೬೫, ೩೬೬) (ಸಂಗೀರ. ೩೧೪) (ಸಂಗೀರ. ೩೧೫) (ಲಾಸ್ಯರಂ. ೧೦೦, ೧೦೨) (ಅಭಿದ. ೨೬೨)

ಚಲ್ಲಿ ಚಲನೆ : ಚಲ ಎನ್ನುವ ಧಾತು ರೂಪ.

ಚಾರಿ ಚಲನೆ : ಚಲನೆ; ಪಾದ, ತೊಡೆ, ಜಂಘಾ ಮತ್ತು ಸೊಂಟಗಳು ಒಂದೇ ರೇಖೆಯಲ್ಲಿದ್ದು ಪಾದದ ಪ್ರಚಾರ. (ನಾಟ್ಯಶಾ. ೧೦,) (ಸಂಗೀರ. ೧೦೪) (ನೃತ್ತರ , , )

ಚಾರಿ ಭೇದ : ಚಾರಿಗಳಲ್ಲಿನ ಭೇದ – ನಾಲ್ಕು ವಿಧ. ಮಾರ್ಗ ಭೌಮ ಚಾರಿ, (೧೬ ವಿಧ), ಮಾರ್ಗ ಆಕಾಶ ಚಾರಿ (೧೬ ವಿಧ), ದೇಶೀ ಭೌಮ ಚಾರಿ (೩೫ ವಿಧ),  ದೇಶೀ ಆಕಾಶ ಚಾರಿ (೧೯ ವಿಧ)

ಭೌಮಚಾರಿ ಭೂ ಸಂಬಂಧವಾದ ಚಾರಿಗಳು.

ಆಕಾಶಚಾರಿ ಭೂ ಸಂಬಂಧವಿಲ್ಲದೆ ಆಕಾಶದಲ್ಲಿ ಮಾಡುವ ಚಾರಿಗಳು. (ಸಂಗೀರ. ೭-೧೦೯)

ಚಾಲಿ : ದೇಶೀ ಲಾಸ್ಯಾಂಗದಲ್ಲಿ ಮೊದಲನೆಯದು, ವಾದನ ಕ್ರಮದ ಒಂದು ವಿಧ. (ಅತಿ ಧೃತವಲ್ಲದ, ಅತಿ ವಿಳಂಬವಲ್ಲದ (ನೃತ್ತಕರ್ಮಗಳು) ಪಾದ, ತೊಡೆ, ಸೊಂಟ, ತೋಳುಗಳಲ್ಲಿ ತ್ರಸ್ಯಾಕಾರವಾಗಿ ನಡೆದರೆ ಆಗುವ ಚಾಲನವು ಚಾಲಿ) (ನರ್ತನಿ, ೫೮೨) (ನೃತ್ತರ. ೧೨೯, ಅಲ್ಲದೆ ನೋಡಿ. ನೃತ್ಯಾಯ. ೧೪೧೫೧೮, ೧೯)

ಚಾಳೆಯ : ಲಯಾನುಸಾರಿಯಾದ ಚಾಲನೆ. (..ಮಂ. ೩೮೨)

ಚಿಂದು : ದ್ರಾವಿಡ ದೇಶದ ದೇಶೀ ನೃತ್ಯ -ಆರು ಬಗೆ- ಶುದ್ಧ ಚಿಂದು, ವಿಡು ಚಿಂದು, ತಿರುವಣ ಚಿಂದು, ಮಾಲಾ ಚಿಂದು, ಕೋಲಾಚಾರಿ ಚಿಂದು, ಗೀತಾಮುದ್ರ ಚಿಂದು, (ನರ್ತನಿ, ೮೨೧, ೮೨೨, ೮೨೩) (ವೇಸಂಮ.) (ನೃತ್ತರ. ೧೧೩೧೧೬) (ಸಂಗೀದ. ೨೩೯, ೪೦)

ಚಿತ್ರ ನಟನ (ಚಿತ್ರ ನಾಟ್ಯ) : ಪಾದಗತಿಗಳಲ್ಲಿ ಚಿತ್ರವನ್ನು ಬಿಡಿಸುವುದು. ಒಂದು ವಿಶೇಷ ಬಗೆಯ ನಾಟ್ಯ.

ಚುಬುಕವಿಕಾರ : (ಸಂಗೀರ. ೫೧೩) (ನೃತ್ತರ.೪೯) (ನಾಟ್ಯಶಾ. ೧೪೭)

ಚೆಂಗು (ವಾ) : ಒಂದು ಅವನದ್ಧ ವಾದ್ಯ. ಕುಡುಪಿನಿಂದ ಬಾರಿಸುವ ವಾದ್ಯ, ನಗಾರಿ ತರಹದ ವಾದ್ಯ (ಮಾರ್ಗ್ ಸಂ. ೧೨೧೯೬೦)

ಛಲ್ಲಿ : ನೋಡಿ ಚಲ್ಲಿ.

ಛುರಿಕಾ : ದೇಶೀ ನೃತ್ಯ. ಕೈಗಳಲ್ಲಿ ಚೂರಿಯನ್ನು ಹಿಡಿದು ನರ್ತಿಸುವ ನೃತ್ಯ.

ಜಂಕೆ (ಝಂಕೆ) : ದೇಶೀಯ ಲಾಸ್ಯಾಂಗಗಳಲ್ಲಿ ಒಂದು. (ನೃತ್ಯಾಯ. ೧೫೫೦) (ಸಂ..ಸಾ. ೨೦೧, ೨೦೨)

ಜಂತ್ರ (ವಾ) (ಜಂತ್ರ ಸ್ವರ ಮಂಡಲ) : ತಂತಿ ವಾದ್ಯ. (೩ ತಂತಿಗಳನ್ನು ಹೊಂದಿರುವುದು) (ಸಂಗೀಸಾ. ವಾದ್ಯ ಪ್ರಕರಣ ೧೨೨)

ಜಕ್ಕಿಣಿ > ಜಕ್ಕಡೀ > ಜಕ್ಕರೀ : ದೇಶೀ ನೃತ್ತ. (ಸಂಗೀದ. ೭-೨೬೮-೭೧), ಅಲ್ಲದೆ ನೋಡಿ ನರ್ತನಿ. ೪-೮೯೩, ೮೯೬

ಜತಿ > ಯತಿ : ನೃತ್ಯ ಹಾಗೂ ವಾದ್ಯಗಳ ವಾದನ ಕ್ರಮದಲ್ಲಿ ಬಳಸಲಾಗುವ ಕ್ಲಿಷ್ಟಕರ ಪಾಟಾಕ್ಷರಗಳು, ವಾದ್ಯ ಪ್ರಬಂಧ. (ಸಂ..ಸಾ. ೧೩೪)

ಜವನಿಕೆ > ತೆರೆ : ಪಾತ್ರದ ಮುಂದೆ ಹಿಡಿಯಲಾಗುವ ಪರದೆ. ಪಾತ್ರ ಪ್ರವೇಶಕ್ಕೆ ಬಳಸಲಾಗುವ ತೆರೆ.

ಜಾತಿ : ೧) ಪ್ರಾಚೀನ ಪದ್ಧತಿಯಲ್ಲಿ ರಾಗ. ಸಪ್ತಸ್ವರಗಳೂ ಆರೋಹ, ಅವರೋಹ ಕ್ರಮದಲ್ಲಿ ಸಂಚಾರ. ೨) ತಾಳದ ದಶಪ್ರಾಣಗಳಲ್ಲಿ ಒಂದು.

ಜಾಯಾನುಜಾಯಿ (ಸಂ) : ಜಾಯಿ+ಅನುಜಾಯಿ – ರಾಗದ ಅವಯವ ವಾದ ‘ಸ್ಥಾಯ’ದ ಒಂದು ವಿಧ, ಒಂದು ಸ್ವರದ ಸ್ಥಾನದಲ್ಲಿ ಸದೃಶವಾದ ಸ್ವರವನ್ನು ತರುವದು. (ಸಂಸಸಾ. ೪೦೪೧)

ಜೀವಾಳ (ವಾ) : ತಂಬೂರಿಯಲ್ಲಿ ನಾದದ ಝೇಂಕಾರವನ್ನು ಹೆಚ್ಚಿಸಲು ಸೇರಿಸುವ ನೂಲಿನ ಎಳೆ.

ಜೋಕೆ : ಚಾತುರ್ಯ, ಕೌಶಲ. ಅವಧಾನತೆ (ಹಲವು ಕಾರ್ಯಗಳನ್ನು ಒಮ್ಮೆಲೇ ನಿರ್ವಹಿಸುವುದು)

ಝಂಪೆತಾಳ : ದೇಶೀ ತಾಲ, ಸಪ್ತ ಸೂಳಾದಿ ತಾಲಗಳಲ್ಲಿ ಒಂದು. (ಅಲಂಕಾರ ತಾಳಗಳಲ್ಲಿ ಒಂದು) (ನರ್ತನಿ. ೩೫೦)

ಠವಣೆ (ವಾ) : ಮೃದಂಗ ವಾದನದ ಪ್ರಕಾರ. ಬೋನವಿಲ್ಲದೇ ಮೃದಂಗವನ್ನು ಇಂಪಾಗಿ ನುಡಿಸಬಲ್ಲಾತ.

ಠಾಯ (ಸಂ) : ಆಲಾಪನಾ ಕ್ರಮ. (ಸದ್ರಾಗ ಚಂದ್ರೋದಯ ೨೯)

ಡಿಮ : ದಶರೂಪಕಗಳಲ್ಲಿ ಒಂದು. ನಾಲ್ಕು ಅಂಕಗಳ ರೂಪಕ. (ನಾಟ್ಯಶಾ. ೧೦) (ದಶರೂ. ೫೭೫೯)

ಡಿಳ್ಳಾಯಿ : ದೇಶೀಲಾಸ್ಯಾಂಗ. ನರ್ತಕಿಯ ಬಳ್ಳಿಯಂತಹ ಲಾಲಿತ್ಯಮಯವಾದ ಚಲನೆ. (ಸಂ..ಸಾ. ೨೦೬) (ನತ್ತರ. ೧೪೨)

ಡೊಕ್ಕರಮಡಿ ಮಂಡಿ : ಅನಿಬಂಧ ಉರುಪು ಕ್ರಮಗಳಲ್ಲಿ ಒಂದು, (ದೇಶೀ ಅಡವು).

ಢಕ್ಕೆ (ಢಕ್ಕಾ) (ವಾ) : ಚರ್ಮವಾದ್ಯದ ಒಂದು ವಿಧ. (ಭರಕೋ. ಪು.ಸಂ. ೨೩೮)

ಢಾಲ > ಢಾಳ :
೧) ದೇಶೀ ಲಾಸ್ಯಾಂಗ.
೨) ಏಳು ವಿಧ ಸ್ಥಾಯಿಗಳಲ್ಲಿ ಒಂದು.
ನರ್ತಕಿಯ ರಸಪೂರ್ಣ ಚಿತ್ರದ ನರ್ತನ. (ಸಂ..ಸಾ. ೧೦೫) (ನೃತ್ತರ. ೧೨೮) (ನೃತ್ಯಾಯ. ೧೫೪೩) (ನರ್ತನಿ. ೧೨೩)

ತತಕಾರ > ತತ್ತಕಾರ : ನಟುವಾಂಗದ ತತ್ತ ಶಬ್ದ. ಈ ಶಬ್ದಗಳಿಗೆ ತಕ್ಕಹಾಗೆ ಪಾದಗಳ ತಾಡನ. (ನರ್ತನಿ. ಪು. ಸಂ. ೨೭೦ .ಟಿ. )

ತನ್ನವಣೆ > ತತ್ತವಣೆ : ಸ್ಥಾಯಿಗಳಲ್ಲಿ ಒಂದು. (ಠಾಯದಲ್ಲಿ ಪ್ರಮಾಣ ಬದ್ಧವಾಗಿ ಕೋಮಲವಾದ ಆಲಪ್ತಿ ಗೀತದ ಮೇಲೆ ಇರುವುದು) (ಸಂಸಸಾ. ೬೨)

ತರಹರ : ದೇಶೀ ಲಾಸ್ಯಾಂಗ, ಭುಜ ಹಾಗೂ ಕುಚಗಳ ತ್ವರಿತವಾದ ಚಲನೆ. (ಸಂಸಸಾ. ೨೦೯) (ನೃತ್ಯಾಯ. ೧೬೬೪)

ತಾಂಡವ : ಉದ್ಧತವಾದ ಕರಣ, ಅಂಗಹಾರ, ಚಾರಿಗಳಿರುವ ಶುದ್ಧ ನೃತ್ತ, ನರ್ತನ ಭೇದ, ಶಿವನಿಂದ ತಂಡುವಿಗೆ ಭೋದಿಸಲ್ಪಟ್ಟು ತಾಂಡವ ಎಂದು ಪ್ರಸಿದ್ಧಿ ಪಡೆಯಿತು. (ಸಂಗೀದ. ೫೨) (ಭರಕೋ. ಪು. ೨೪೩) (ಸಂಗೀರ. , ೩೦೩೧) (ಮಾನಸ. ೧೬೧೫೯, ೧೬೩ ಪೂ) (ಲಾಸ್ಯರಂ. ೬೬ ಪೂ.)

ತಾಂಡವ ಭೇದ : ಪೇರಣೆ, ಬಹುರೂಪ ನೃತ್ತಗಳು. (ಸಂಗೀದಾ. . )

ತಾನ (ಗಾನ) : ತಾನ (ಸಂ) ಸ್ವರಗಳ ವಿಸ್ತರಣೆ. ನಾದತರಂಗ (ಭರಕೋ. ಪು. ಸಂ. ೨೪೪)

ತಾರ : ಮೂರು ಸ್ಥಾಯಿಗಳಲ್ಲಿ ಒಂದು. ಮೇಲಿನ ಷಡ್ಜದಿಂದ ಆರೋಹ ಕ್ರಮದಲ್ಲಿ ಬಂದು ಇನ್ನೂ ಮೇಲಿನ ಷಡ್ಜವನ್ನು ಸೇರುವ ಸಪ್ತಸ್ವರ ಸಮುದಾಯ (ನಾಟ್ಯಶಾ. ೯೪) (ಸಂಗೀರ. ೪೪೯, ೪೫೭) (ಸಂಗೀರ. ೧೧೭೮) (ವಿವೇಕ. ಪು. ಸಂ, ೧೯೦), ತಾಳಪ್ರಕ್ರಿಯೆ. ವಿವೇಕ. ಪು. ೧೯೧ (ಸಾಸಂಭ. ಪು.ಸಂ. ೧೫೫)

ತಾಳದಾವುಜ : ತಾಳವಾದ್ಯ, ಅನವದ್ಧ ಹಾಗೂ ಘನವಾದ್ಯ

ತಾಲಧರ > ತಾಳಧರ : ಲಕ್ಷ್ಯ, ಲಕ್ಷಣಗಳೆರಡರಲ್ಲೂ ಪೂರ್ಣಜ್ಞಾನ ಉಳ್ಳವನೂ, ಪ್ರತಿಭಾ ಸಂಪನ್ನನೂ, ಒಳ್ಳೆಯ ಹಾಡು, ನೃತ್ಯಗಳಲ್ಲಿರುವ ಕಾಲವನ್ನು ತಿಳಿದವನು ತಾಳಧಾರ (ರಿ) ವಾದ್ಯಕ್ಷರಗಳನ್ನು ಹೇಳುವ ಪಾಟೀ. (ನರ್ತನಿ. )

ತಿತ್ತಿ : ಒಂದು ಗಾಳಿವಾದ್ಯ.

ತಿತ್ತಿರಿ (ವಾ): ಗಾಳಿವಾದ್ಯ. (ತುತ್ತೂರಿಯ ಮಾದರಿ)

ತಿರಿಪ : ಹೃದಯವನ್ನು ರಂಜಿಸುವ ಸ್ವರ ಕಂಪನವಾದ ಗಮಕ ಭೇದಗಳಲ್ಲಿ ಒಂದು. ದ್ರುತದ  ಕಾಲು ಭಾಗದಿಂದ ವೇಗದಲ್ಲಿ ಕಂಪಿಸುವುದು ತಿರಿಪ.

ತಿರುಪ (ತಿರಿಪ ಭ್ರಮರಿ)  : ಎರಡೂ ಪಾದಗಳ ಎದುರಿಗೆ ಸ್ವಸ್ತಿಕಾಕಾರದಲ್ಲಿ ಎರಡೂ ಪಾದಗಳಿಂದ ಓರೆಯಾಗಿ ತಿರುಗುವುದು. (ನರ್ತನಿ. ೭೯೧)

ತ್ರಿದಶ ತಾಳಧರ : ಅಲಂಕಾರ, ಕವಿತಾ, ಸಂಚುಗಳನ್ನು ಬಲ್ಲ ತಾಳಧರರು. ಅಲಂಕಾರ – ಪಾಟಾಕ್ಷರಗಳನ್ನು ವಿಚಿತ್ರವಾಗಿ ವಿನ್ಯಾಸಗೊಳಿಸುವುದು.

ಕವಿತಾ ಮನೋಹರವಾದ ವಾದ್ಯಾ ಪ್ರಬಂಧಗಳನ್ನು ರಚಿಸುವಾತ

ಸಂಚು ಎರಡು ತಾಳಗಳಲ್ಲಿ ಶಕ್ತಿಯಿರುವಂತೆ ಪರಸ್ಪರವಾಗಿ ಸಂಚರಿಸುವುದು.

ತ್ರಿಪತಾಕ : ಅಸಂಯುತ ಹಸ್ತಗಳಲ್ಲಿ ಒಂದು. (ಚಿತ್ರ ನೋಡಿ ಅಸಂಯುತ ಹಸ್ತ) (ಅಭಿದ. ೧೧೪) (ನಾಟ್ಯಶಾ. ೨೮) (ಸಂಗೀರ. ೧೧೧)

ತ್ರಿಪುಟತಾಳ : ದೇಶೀತಾಳ. ಸಪ್ತ ಸೂಳಾದಿ ತಾಳಗಳಲ್ಲಿ ಒಂದು. ಒಂದು ಲಘು ಎರಡು ದೃತಗಳಿರುವ ತಾಳ.

ತ್ರಿಭಂಗ ತ್ರಿಭಂಗಿ : ಮೂರು ಕಡೆ ಬಾಗಿದ ಶರೀರ ಸೌಷ್ಠವ ತಲೆ, ಸೊಂಟ ಹಾಗೂ ಮೊಣಕಾಲುಗಳು ಬೇರೆ ಬೇರೆ ಕೋಣದಲ್ಲಿ ಬಾಗಿರುವ ಭಂಗಿ. (ಚಿತ್ರ ನೋಡಿ ಭಂಗಗಿಳು ಅಧ್ಯಾಯ ೩) (ಸಂ..ಸಾ. ೧೪೧) (ನರ್ತನಿ. ()-೪೯)

ತ್ರಿಮಾರ್ಗಗೀತಂಗಳ್ : ಜೈನ ಧರ್ಮದ ಮೂರು ಮಾರ್ಗಗಳು ವಸ್ತುಗೀತ, ರೂಪಗೀತ, ಪ್ರಬಂಧ ಗೀತ.

ತ್ರಿವಳಿ : ಒಂದು ಅವನದ್ಧವಾದ್ಯ. ಗೌಂಡಲೀ ನರ್ತಕಿ ಇದನ್ನು ಹೆಗಲಿನಿಂದ ಇಳಿಬಿಟ್ಟುಕೊಂಡು ನುಡಿಸುತ್ತಾ ನರ್ತಿಸಬೇಕೆಂದು ಶಾಸ್ತ್ರಕಾರರ ಮತ. (ಅಜಿಪು. ೫.೩೨)

ತ್ರಿಶ್ರ್ಯ : ಸಂಗೀತದಲ್ಲಿ ಮೂರು ಅಕ್ಷರಗಳ ಕಾಲ ಪ್ರಮಾಣ.

ತ್ರಿಸ್ಥಾನ : ಶಾರೀರದ ಮಂದ್ರ, ಮಧ್ಯ ಹಾಗೂ ತಾರ ಸ್ಥಾಯಿಗಳು. (ಸಂಶಾಚಂ. ೧೮)

ತುಡುಂಕು > ತುಡುಕ್ಕಾ : ವಾದ್ಯ ಪ್ರಬಂಧ. ಶುದ್ಧ ಕೂಟಗಳಿಂದ ನಿರ್ಮಿತವಾಗಿ ವರ್ಣಸರದ ಖಂಡಗಳಿಂದ ಕೂಡಿ ದೀಪ್ತ ನರ್ತನದಲ್ಲಿ ದ್ರುತಗತಿಯಲ್ಲಿ ನುಡಿಸುವಂತಹ ವಾದ್ಯ ಪ್ರಬಂಧ. (ಸಂಗೀರ. ೧೮೯) (ಮೇಮ. ಉದೃತಿ. ಭರಕೋ. ಪು.ಸಂ. ೩೫೩) (ಸಂ..ಸಾ. ೧೪೯)

ತೂಕ (ತೂಕವಣೆ > ತೂಕಲಿ) : ದೇಶೀ ಲಾಸ್ಯಾಂಗ. ಒಂದು ಸುಂದರವಾದ ಭಂಗಿಯಲ್ಲಿ ನಿಂತು ತಾಳಕ್ಕೆ ತಕ್ಕಂತೆ ದೇಹವನ್ನು ಆಂದೋಲನಗೊಳಿಸುವುದು. (ಸಂ.ಸ.ಸಾ. ೬-೧೯೯)

ತೂರ್ಯ : ವಾದ್ಯ. (ಚತುರ್ವಿಧ ವಾದ್ಯಗಳು) ಗಾಳಿವಾದ್ಯ, ಅವನದ್ಧವಾದ್ಯ, ಘನವಾದ್ಯ. (ನರ್ತನಿ. ೯೪) (ಮಾನಸ. ವಾದ್ಯ ವಿನೋದ ೫೬೮೬೯)

ದಂಡಭ್ರಮರಿ : ಮೂವತ್ತೆರಡು ಭ್ರಮರಿಗಳಲ್ಲಿ ಒಂದು. ಕೈಗಳಲ್ಲಿ ಶಿಖರ ಹಸ್ತಗಳನ್ನು ತಲೆ ಹಾಗೂ ವಕ್ಷಸ್ಥಳದಲ್ಲಿ ಇಟ್ಟು ಕುಂಚಿತ ಪಾದವನ್ನು ಮೇಲಕ್ಕೆ ಎತ್ತಿ ಸುತ್ತುವುದು. (ಸಾಸಂಭ. ಪು. ೨೩೭)

ದಂಡರಾಸಕ : ಲೋಕ ಪ್ರಸಿದ್ಧ ನೃತ್ಯಗಳಲ್ಲಿ ಒಂದು. ಎಂಟು, ಹದಿನಾರು ಅಥವಾ ಮೂವತ್ತೆರಡು ಪಾತ್ರಗಳು ಒಟ್ಟಾಗಿ ಸುಂದರವಾದ ಚಾರಿಗಳಿಂದಲೂ, ಭ್ರಮರಿಗಳಿಂದಲೂ, ಮಂಡಲಾಕಾರವಾಗಿ ಹಾಡು, ತಾಳ, ಲಯಗಳನ್ನು ಅನುಸರಿಸಿ, ಮುರಜ ಮೊದಲಾದ ವಾದ್ಯಗಳ ಹಿನ್ನೆಲೆಯಲ್ಲಿ ಕೈಗಳಲ್ಲಿ ಹೆಬ್ಬೆರಳಿನಷ್ಟು ದಪ್ಪವಾದ ೧೬ ಅಂಗುಲ ಉದ್ದ ಕೋಲುಗಳನ್ನು ಹಿಡಿದು ವಿವಿಧ ಮಾದರಿಗಳನ್ನು ನಿರ್ಮಿಸುತ್ತ ನರ್ತಿಸುವ ನೃತ್ಯ ಪ್ರಕಾರ. ಭರತಾರ್ಣವಕಾರ ಇದನ್ನು ಲಾಸ್ಯ ಪದ್ಧತಿಗೆ ಸೇರಿಸುತ್ತಾನೆ. (ವೇಸಂಮ.ಹಸ್ತ ಪ್ರತಿ. ಪು. ಸಂ. ೨೩) (ಸಂಸಸಾ ೧೨೭೨೮) (ಸಂಸಸಾ. ೨೩೮) (ಸಂ.ಸಾ.-) (ಭರತಾ. ೭೪೫೪೬) (ನೃತ್ತರ. ೧೦೧೧೦೭) ನರ್ತನಿ. ೮೯೬೯೯, ೯೦೨

ದಂಡಿಗೆ (ವಾ) : ಆಧಾರ ಶ್ರುತಿಗೆ ಬಳುಸುವ ತಂತಿ ವಾದ್ಯ.

ದರು > ಧರು : ದೇಶೀ ನೃತ್ಯ, ಕಟ್ಟಣೆ ನೃತ್ಯದ ಒಂದು ವಿಧ. (ನರ್ತನಿ. ೪-೮೪೪-೪೫)

ದರ್ಪಣಾ : ದೇಶೀತಾಲಗಳಲ್ಲಿ ಒಂದು. (ಸಂಗೀರ. ೫-೨೩೯) (ಸಂಗೀರ. ೫-೨೬೨)

ದಶರೂಪಕ : ನಾಟಕವೇ ಮೊದಲಾದ ಹತ್ತು ರೂಪಕಗಳು. (ನಾಟ್ಯಶಾ. ೧೮-೨, ೩) (ದಶರೂ. ೧-೮)

ದಕ್ಷಿಣಾವೃತ್ತಿ : (i) ಗೀತ ಪ್ರಧಾನವಾದ ವಾದ್ಯ ಗುಣ. (ಭರಕೋ. ಪು. ಸ. ೨೬೫)

ದಾಳವಾಳ : ದಾಳ ಒಂದು ವಾದ್ಯ ವಿಶೇಷ.

ದಿಕ್ಕನ್ನಿಕಾ ನಾಟ್ಯ : ಒಂದು ಮಾದರಿಯ ಸಮೂಹ ನೃತ್ಯ.

ದಿಳ್ಳಾಯಿ > ಡಿಳ್ವಾಯಿ : ದೇಶೀ ಲಾಸ್ಯಾಂಗಗಳಲ್ಲಿ ಒಂದು. ನರ್ತಕಿಯು ನಿಂತಾಗ ಅಥವಾ ನಿಧಾನವಾಗಿ ಚಲಿಸುತ್ತಿರುವಾಗ ಕಾಣುವ ಲಾಲಿತ್ಯವನ್ನು ದಿಲ್ಲಾಯಿ ಎನ್ನುತ್ತಾರೆ. (ಸಂಸಸಾ. ೬-೨೦೬) (ನೃತ್ಯಾಯ. ೧೪-೧೫೩೦) (ಪಂಡಿತಾ. ಪು.ಸಂ. ೪೬೦)

ದುಂದುಭಿ : ಅವನದ್ಧ ವಾದ್ಯ. ಗಾತ್ರದಲ್ಲಿ ಬೃಹತ್ತಾಗಿದ್ದು, ಮಹಾಧ್ವನಿಯನ್ನು ಮಾಡುವಂತಹುದು. ಚರ್ಮದಿಂದ ಮುಚ್ಚಲ್ಪಟ್ಟು ತಾಮ್ರದ ಭಾಂಡವನ್ನು ಹೊಂದಿರುವಂತಹುದು. ಕೈಗಳಲ್ಲಿ, ಕೋಣ (ಕುಡುಪ) ದಿಂದಲೂ ನುಡಿಸಬಹುದಾದ ಈ ವಾದ್ಯವನ್ನು ಮಂಗಲ ಸಂದರ್ಭಗಳಲ್ಲಿ ನುಡಿಸಲಾಗುವುದು. (ಸಂಗೀರ. ೬, ೧೧೪೫-೪೭) (ಮಾನಸ. ವಿ. ೪, ೬-೭೮೧-೭೮೪)

ದೂಷಿ > ದೂಸಿ : ದೇಶೀ ಶೃಂಖಲವಾದ ದುವಾಡ ನೃತ್ಯಗಳಲ್ಲಿ ಒಂದು. (ವೇದ. ಹಸ್ತಪ್ರತಿ, ಪು.ಸಂ. ೩೬)

ದೇಂಕಾರ : ವಾದ್ಯ ಪ್ರಬಂಧ. ವಾದನಾಂತ್ಯದಲ್ಲಿ ಸ್ತೋಕ. ಸ್ತೋಕ ಶಬ್ದಗಳು ಇರುವುದು. (ಸಂಸಸಾ. ೫-೧೫೨)

ದೇವಸಿದ್ಧಿ : ಭಾವಯುಕ್ತವೂ, ಸತ್ತ್ವದಿಂದ ತುಂಬಿರುವುದು, ನಟನೆ, ರಂಗಸಜ್ಜಿಕೆ, ಭಾವಾಭಿವ್ಯಕ್ತಿ ಮುಂತಾದ ಎಲ್ಲ ದೃಷ್ಟಿಗಳಿಂದಲೂ ಪ್ರಯೋಗವು ಪರಿಪೂರ್ಣವಾಗಿರುವುದು. (ನಾಟ್ಯಶಾ. ೨೭, ೧೫-೧೭)

ದೇಶಿ : ಮಾರ್ಗವಲ್ಲದ್ದು, ಆಯಾ ದೇಶಗಳಲ್ಲಿ ಜನರ ಅಭಿರುಚಿಗೆ ತಕ್ಕಂತೆ ಇರುವ ಆಚಾರ, ವ್ಯವಹಾರ, ಉಡುಪು, ಭಾಷೆ, ನೃತ್ಯ ಹಾಗೂ ಸಂಗೀತ. ದೇಶೀ ಸಂಗೀತವು ವ್ಯತ್ಯಾಸಶೀಲವೂ ಆಯಾ ದೇಶ್ಯ ಜನರ ಹೃದಯ ರಂಜಕವೂ ಆಗಿರುವುದು. (ಉದೃತಿ, ಭ.ಕೋ., ಪು.ಸಂ. ೨೮೯) (ನೃತ್ತರ. ೫-೪, ೫)

ಮಾರ್ಗವೇ ಕಾಲದೇಶಗಳಿಗೆ ತಕ್ಕಂತೆ ಮಾರ್ಪಟ್ಟು ಭಿನ್ನ ಭಿನ್ನ ಕ್ರಮಗಳಲ್ಲಿ ಪ್ರಚಲಿತರವಾಗಿರುವುದೇ ದೇಶೀ | (ಲಾಸ್ಯರಂ. ಉಪೋದ್ಘಾತ x-i) (ಶಿತರ. ೬-೩-೧೫) (ಭಸಾಸಂ., ಗೀತಾಧ್ಯಾಯ ೩)

ಪಾರ್ಶ್ವದೇವನು ದೇಶೀ ನೃತ್ಯಗಳನ್ನು ಲೋಕ ಪ್ರಸಿದ್ಧ ನೃತ್ಯಗಳೆಂದು, ಪೇರಣೆ, ಪೆಕ್ಕೆಣ, ಗುಂಡಲಿ, ದಂಡರಾಸಕಗಳನ್ನು ಹೇಳಿ ಅವುಗಳ ಲಕ್ಷಣ, ವಾದ್ಯವೃಂದಗಳನ್ನು ಹೇಳುತ್ತಾನೆ. (ಸಂ.ಸ.ಸಾ. ೬-೧೨೭, ೧೨೮)

ಚತುರ ದಾಮೋದರನು ಇವುಗಳನ್ನು ನರ್ತನ ಭೇದದಲ್ಲಿ ಹೇಳುತ್ತಾನೆ. ಅಲ್ಲದೇ ಆತ ದೇಶೀ ನೃತ್ಯಗಳಾದ ಸ್ವರ ಮಂಠನ ನೃತ್ಯ, ಚಿಂದುನ ನೃತ್ಯ, ದೇಶೀ ಕಟ್ಟರೀ ವಿಧಿ, ವೈಪೋತಾಖ್ಯ, ಬಂಧ ನೃತ್ಯ, ಕಲ್ಪನೃತ್ಯ, ಜಕ್ಕರಿ, ಶಬ್ದಲ್ಕಿ ನೃತ್ತ, ಸಾಲಗಸೂಡ ನೃತ್ತ, ಯತಿ ನೃತ್ತ, ಉಡುಪುಗಳು ಧರು ನೃತ್ಯ ಮುಂತಾದವುಗಳನ್ನು ವಿವರಿಸುತ್ತಾನೆ.

ಜಾಯ ಸೇನಾಪತಿಯು ತನ್ನ ಗ್ರಂಥ ನೃತ್ತ ರತ್ನಾವಲಿಯಲ್ಲಿ ಐದನೆಯ ಅಧ್ಯಾಯದಿಂದ ದೇಶೀನೃತ್ತದ ವಿಧಾನ, ತಂತ್ರ, ಅದರ ಬಂಧಗಳನ್ನು ಏಳನೇ ಅಧ್ಯಾಯದವರೆಗೆ ವಿವರಿಸುತ್ತಾನೆ. ಸಾಮಾನ್ಯವಾಗಿ ನಾಟ್ಯಶಾ. ಹಾಗೂ ಅಭಿದ. ನಂತರ ಬರುವ ಶಾಸ್ತ್ರ ಗ್ರಂಥಗಳೆಲ್ಲವೂ ದೇಶೀ ನೃತ್ಯ ಪದ್ಧತಿಯತ್ತ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ. ಉದಾ : ಶುಭಂಕರನ ಸಂಗೀತ ದಾಮೋದರ, ತುಳಜನ ಸಂಗೀತ ಸಾರಾಮೃತ, ಪಂಡರೀಕ ವಿಠಲನ ನರ್ತನ ನಿರ್ಣಯ ಇತ್ಯಾದಿ ಗ್ರಂಥಗಳು.

ಕಾವ್ಯಗಳಲ್ಲಿಯೂ ಜನ್ನನಿಂದ ದೇಶೀ ನೃತ್ಯಗಳ ಸರಣಿ ಆರಂಭವಾಗುತ್ತದೆ. ಇವುಗಳಲ್ಲಿನ ವರ್ಣನೆಯಿಂದಲೂ, ಶಾಸ್ತ್ರಾಧಾರಗಳಿಂದಲೂ ಈಗ ಕಣ್ಮರೆಯಾಗುತ್ತಿರುವ, ಕಣ್ಮರೆಯಾದ ದೇಶೀ ನೃತ್ಯಗಳನ್ನು ಪುನರ್ ನಿರ್ಮಾಣ ಮಾಡಬಹುದು. ಈ ದೇಶೀ ನೃತ್ಯಗಳು ಜನಮನದ ರಂಜನೆಯ ಉದ್ದೇಶವನ್ನೂ, ವ್ಯತ್ಯಾಸ ಶೀಲ ಗುಣವನ್ನು ಹೊಂದಿರುವುದರಿಂದಲೂ ಇವು ಅತ್ಯಂತ ಆಕರ್ಷಕವೂ ಆಪ್ತವೂ ಆಗಿ ಪರಿಣಮಿಸಿದೆ.

ದೇಶೀ ನೃತ್ಯದ ಬೇರು ಭರತನಲ್ಲೇ ಕಂಡರೂ ಅವುಗಳಿಗೆ ಕಟ್ಟುಪಾಡನ್ನು ಆತನೇ ವಿಧಿಸಿದ್ದಾನೆ. ಹೇಗೆಂದರೆ ಆತ ಭರತ ಖಂಡವನ್ನು ನಾಲ್ಕು ಭಾಗವಾಗಿಸಿ ಆವಂತೀ, ಮಾಗಧಿ, ಓಡ್ರ ಮಾಗಧಿ ಹಾಗೂ ದಾಕ್ಷಿಣಾತ್ಯ ಎಂದು ವಿಂಗಡಿಸಿ ಆಯಾ ಪ್ರಾಂತ್ಯದ ವ್ಯವಹಾರ, ಭಾಷೆ, ಆಚಾರ ವಿಚಾರಗಳಿಗೆ ತಕ್ಕ ಉಡುಪು, ಆಂಗಿಕಾಭಿನಯ ಹಾಗೂ ವಾಚಕವನ್ನು ಬಳಸಬಹುದಾದ ಸ್ವಾತಂತ್ರ್ಯವನ್ನು ಕೊಡುತ್ತಾನೆ. ಇವನ್ನು ಆತ ಪ್ರವೃತ್ತಿ ಎಂದು ಕರೆದಿದ್ದಾನೆ. (ನಾಟ್ಯಶಾ. ಅ. ೧೪) ಒಂದು ವಿಧದಲ್ಲಿ ನೋಡಿದರೆ ಈಗ ಪ್ರಸಿದ್ಧವಾದ ಹೆಸರುಗಳನ್ನು ಹೊಂದಿರುವ ಭರತನಾಟ್ಯ, ಕಥಕ್ಕಳಿ, ಕಥಕ್, ಮಣಿಪುರಿ, ಕೂಚ್ಚುಪುಡಿ, ಮಯೂರ್‌ಭಂಜ್, ಮೋಹಿನಿ ಅಟ್ಟಂ ಮುಂತಾದವುಗಳನ್ನು ದೇಶೀ ನೃತ್ಯವೆಂದೇ ಪರಿಗಣಿಸಬಹುದು.

ದೇಶೀಕರಣ : ಭರತೋಕ್ತವಾದ ೧೦೮ ಕರಣಗಳಿಗಿಂತ ಭಿನ್ನವಾದುದು. (ಭರಕೋ), ನೃತ್ತರನಲ್ಲಿ ೧೪ ತರಹ (೫-೪೦-೪೪)

ದೇಶಿ ತಾಳ : ಮಾರ್ಗವಲ್ಲದು, ರೂಢಿಯಿಂದ ಬಂದ ಪ್ರಸಿದ್ಧವಾದ ತಾಳಗಳು, ಲಘು, ದ್ರುತಗಳ ಮಾತ್ರಾ ಕಾಲವನ್ನು ಮಾರ್ಗತಾಳಕ್ಕಿಂತ ಭಿನ್ನವಾಗಿ ಹೊಂದಿರುವಂತಹ ತಾಳಗಳು ಇವು. ೧೨೦. (ಸಂಗೀರ. ೫-೨೩೭-೨೫೩)

ದೃಕ್ಪ್ರಸರಣ : ಕಣ್ಣಿನ ಚಲನೆ. (ನೋಡಿ ದೃಷ್ಟಿ ಭೇದ)

ದೃಷ್ಟಿಭೇದ : ಕಣ್ಣಿನ ಚಲನಾಭೇದ. ರಸದೃಷ್ಟಿ -೮ ಸ್ಥಾಯಿಭಾವ ದೃಷ್ಟಿ -೮ ವ್ಯಭಿಚಾರಿ ಭಾವ ದೃಷ್ಟಿ-೨೦ = ೩೬ (ನಾಟ್ಯಶಾ. ೪, ೪೧-೪೫) (ಅಭಿದ. ೬೮) ಅಲ್ಲದೇ ನೋಡಿ ಲಾಸ್ಯರಂ. ೩ ಪು. ೪-೮, ಸಂಗೀರ. ೭ ಅ. ೩೮೦-೮೪

ದೃಷ್ಟಿವಿಕಲ್ಪ : ನೋಡಿ ದೃಷ್ಟಿಭೇದ

ದ್ವಾವಿಂಶಶಿ ಶ್ರುತಿ : ಪ್ರಾಚೀನ ಶಾಸ್ತ್ರಕಾರರು ಶ್ರುತಿಯಲ್ಲಿ ಮಾಡುವ ಒಂದು ಕ್ರಮವಾದ ವಿಭಜನೆ. ಶ್ರುತಿ ಅಂತರಗಳು ಇವು ಒಟ್ಟು ೨೨.

ದ್ರುತ : (i) ತಾಳದ ಅವಯವಗಳಲ್ಲಿ ಒಂದು. ಎರಡು ಅಕ್ಷರ ಕಾಲ ಬೆಲೆ ಉಳ್ಳದ್ದು. ಸಂಶಾಚಂ. ಪು. ೫೪ (ii) ಮೂರು ಲಯಗಳಲ್ಲಿ ಒಂದು. ಶೀಘ್ರವಾದ ಓಟ. (ಸಂಗೀರ. ೫-೪೪)

ದ್ರುತಲಯ : ನೋಡಿ ದ್ರುತ.

ಧಸಕ : ಲಲಿತಹಸ್ತವನ್ನು ಕುಚಗಳ ಕೆಳಗೆ ಒಯ್ದಾಗ ಧಸಕ ಎಂಬ ದೇಶೀಲಾಸ್ಯಾಂಗವಾಗುವುದು. (ನೃತ್ಯಾಯ. ೧೫೩೮)

ಧರ್ಮಿಗಳು : ಅಭಿನಯವನ್ನು ವ್ಯಕ್ತಪಡಿಸುವ ಎರಡು ಪಂಥಗಳು, ನಾಟ್ಯಧರ್ಮಿ, ಲೋಕಧರ್ಮಿ. (ನರ್ತನಿ. ೪-೪೧)

ಧ್ರುವತಾಳ : ಸೂಳಾದಿ ಸಪ್ತ ತಾಳಗಳಲ್ಲಿ ಮೊದಲನೆಯದು ಮೂರು ಲಘು ಹಾಗೂ ಒಂದು ದ್ರುತ ಇದರ ಅಂಗ.

ಧುತ : ಶಿರೋಭೇದಗಳಲ್ಲಿ ಒಂದು. ಮೆಲ್ಲನೆ ತಲೆಯನ್ನು ಎರಡೂ ಬದಿಗಳಿಗೆ ಅಲುಗಾಡಿಸುವುದು. (ನಾಟ್ಯಶಾ. ೮-೩೪) (ಅಭಿದ. ೫೯) (ಲಾಸ್ಯರಂ. ಪ್ರ. ೧, ೭೯ ಪೂ.)

ನಟ : ಚತುರ್ವಿಧಾಭಿನಯಗಳನ್ನು ಬಲ್ಲಾತ. (ಅಭಿದ. ೩೩) (ಸಂಗೀರ. ೭-೧೩೩೯)

ನಟ್ಟುವ > ನಟ್ಟುವಿಗ : ನೃತ್ಯ, ಗೀತಗಳಲ್ಲಿ ಪಾಂಡಿತ್ಯವನ್ನು ಪಡೆದಾತ.

ನಟುವಾಂಗ : ನೃತ್ಯದಲ್ಲಿ ನರ್ತಕಿಯ ಹೆಜ್ಜೆಗಳನ್ನು ನಿರ್ದೇಶಿಸಲು ಬಳಸುವ ತಾಳ. ನೋಡಿ ಚಿತ್ರ ಘನವಾದ್ಯಗಳು.

ನಯ : ಹತ್ತು ವಿಧವಾದ ರಾಗಗಳಲ್ಲಿ ಒಂದು. (ಉದ್ಧೃತಿ. ಭರಕೋ. ಪು. ೩೦೮)

ನರ್ತಕ : ದೇಶ, ಭಾಷೆ, ಕಲೆ, ಭಾವ, ರಸ, ವೃತ್ತಿಗಳನ್ನು ಅರಿತು ನರ್ತನದ ಪ್ರಯೋಗ, ಶಾಸ್ತ್ರಗಳನ್ನು ತಿಳಿದು ನರ್ತಿಸುವವನು. (ನರ್ತನಿ. ೪-೧-೧) (ಸಾಸಂಭ. ಪು. ೧೮೮) (ಸಂಗೀರ. ೭-೧೩೩೯) (ಮಾನಸ. ಅ.೧೬-೪, ವಿಂ. ೯೬೮-೯೭೦ ಪೂ.)

ನರ್ತಕಿ : ರೂಪವತಿಯೂ, ತಾಳ-ಲಯಗತಿಗಳನ್ನು ಅರಿತವಳೂ, ಅತಿ ದಪ್ಪಗೂ ಅಲ್ಲದೇ, ಅತಿ ಸಣ್ಣಗೂ ಅಲ್ಲದೇ, ಅತಿ ಎತ್ತರವಾಗಿರದವಳೂ, ತೀರ ಕುಳ್ಳಾಗಿಯೂ ಇರದವಳು. (ಮಾನಸ. ಅ. ೧೬. ವಿಂ. ೪-೯೬೭) (ಲಾಸ್ಯರಂ. ೧-೪೩, ೪೪)

ನರ್ತನ : ನಟನ ಅಂಗಗಳ ವಿಶೇಷ ಚಲನೆಯಿಂದ ಜನರ ಚಿತ್ತವನ್ನು ರಂಜಿಸುವ ಚಲನಾ ವಿಶೇಷ. (ನರ್ತನಿ. ೪-೧-೨, ನೇಮಿಜಿ. ೧೫)

ನರ್ತನ ಪೂರ್ವರಂಗ : ನೃತ್ಯದ ಮೊದಲು ಆಚರಿಸಲಾಗುವ ಪೂರ್ವರಂಗವಿಧಿ.

ನಾಂದಿ, ನಾಂದಿಪೂಜಾ, ನಾಂದೀವಿಧಿ : ನಾಟ್ಯಾರಂಭದಲ್ಲಿ ಸೂತ್ರಧಾರನಿಂದ ದೇವತೆಗಳಿಗೆ ಸಲ್ಲುವ ಸ್ತುತಿ. (ನಾಟ್ಯಶಾ. ೫-೨೩, ೨೪)

ನಾಟಕ : ದಶರೂಪಕಗಳಲ್ಲಿ ಒಂದು. ಕಥೆ. ಪ್ರಖ್ಯಾತವಾದ ವಸ್ತು ಹಾಗೂ ಧೀರೋದಾತ್ತ ನಾಯಕನಿದ್ದು, ಚತುರ್ವಿಧ ಪುರುಷಾರ್ಥಗಳಲ್ಲಿ ಅರ್ಥ, ಕಾಮಗಳ ವೈಭವವಿರಬೇಕು. ಸುಖ-ದುಃಖಗಳ ಬೆಳವಣಿಗೆಯ ಕಥೆಯನ್ನು ಹೊಂದಿ, ಅಂಕ ಹಾಗೂ ಪ್ರವೇಶಕಗಳು ಇರುವ ಪ್ರಕಾರ. (ನಾಟ್ಯಶಾ. ೬-೧೮-೧೦-೧೧)

ನಾಟ್ಯ : ಮೂರು ಲೋಕದ ಭಾವದ ಅನುಕರಣವನ್ನು ಚತುರ್ವಿಧಾಭಿನಯಗಳಿಂದ ಅನುಕರಿಸುವುದು. ಇದು ಬ್ರಹ್ಮನ ಸೃಷ್ಟಿ ಎಂದು ಪ್ರತೀತಿ. (ನಾಟ್ಯಶಾ. ೧-೧೦೭) (ದಶರೂ. ೧-೬ ಪೂ.) (ಅಭಿದ. ೧೦) (ಸಂಗೀರ. ೭, ೧೭-೧೮) (ವಿಧಪು. ೩-೨೦-೧) (ಲಾಸ್ಯರಂ. ೧-೫೬) (ಸಾಸಂಭ. ಪು. ೨೦೪)