ಭಾಷೆ ಕೇವಲ ಸಂವಹನ ಮಾಧ್ಯಮವಷ್ಟೇ ಅಲ್ಲ. ಅದು ಆ ಭಾಷಿಕರ ಸಮಗ್ರ ಜೀವನ ಮೌಲ್ಯಗಳ ಪ್ರತಿನಿಧಿಯೂ ಆಗಿರುತ್ತದೆ. ಒಂದು ಭಾಷೆಯನ್ನು ಬಳಸುವ ಪ್ರದೇಶದ ಜನರ ಆಚಾರ, ವಿಚಾರ, ಸಂಸ್ಕೃತಿ ಬಹುತೇಕ ಒಂದೇ ಆಗಿರುತ್ತದೆ. ಈ ಹಿನ್ನೆಲೆಯಲ್ಲೆ ೧೯೫೬ರಲ್ಲಿ ಭಾಷಾವಾರು ಪ್ರಾಂತಗಳು ರಚನೆಗೊಂಡಿದ್ದು, ಇದು ಸರಿ ಕೂಡ. ಆದರೆ ಹೀಗೆ ಒಂದೇ ಭಾಷೆಯನ್ನು ಬಳಸುವ ಪ್ರದೇಶದಲ್ಲಿ ಆ ಭಾಷಿಕರ ಆಚಾರ, ವಿಚಾರ ಸಂಸ್ಕೃತಿಗಳನ್ನು ಸೂಕ್ಷ್ಮವಾಗಿ ನೋಡಿದರೆ ಅವುಗಳು ಮತ್ತೆ ಭಿನ್ನವಾಗಿರುವುದನ್ನೂ ಕೂಡ ನೋಡಬಹುದು. ಏಕೆಂದರೆ ಅನೇಕ ಸಂದರ್ಭದಲ್ಲಿ ಒಂದೇ ಭಾಷೆ ಹಲವಾರು ಭಿನ್ನರೂಪ ತಾಳಿರುತ್ತವೆ. ಆದ್ದರಿಂದಲೇ ಉತ್ತರ ಕರ್ನಾಟಕದ ಕನ್ನಡಿಗರ ಕನ್ನಡ, ದಕ್ಷಿಣ ಕನ್ನಡದ ಕನ್ನಡಿಗರ ಕನ್ನಡ ಹೀಗೆ ಅರ್ಥವಾಗದೇ ಇರಲು ಅನೇಕ ಕಾರಣಗಳಿವೆ. ಈ ಭಿನ್ನತೆಗೆ ಇರುವ ಕಾರಣಗಳನ್ನು ಸಾಮಾಜಿಕವಾಗಿ ಮತ್ತು ಭೌಗೋಳಿಕವಾಗಿಯೂ ಗುರುತಿಸಲು ಸಾಧ್ಯವಿದೆ.
ಈ ‘ಪದವಿನ್ಯಾಸ’ ಟಿಪ್ಪಣಿಯಲ್ಲಿ ‘ಹುಚ್ಚೆಳ್ಳು’ ಧಾನ್ಯಕ್ಕಿರುವ ಭಿನ್ನರೂಪಗಳನ್ನು ಗುರುತಿಸಲು ಯತ್ನಿಸಲಾಗಿದೆ. ಹುಚ್ಚೆಳ್ಳು ಎನ್ನುವ ಪದ ಕರ್ನಾಟಕದಲ್ಲಿ ೨೨ ಬಗೆಯಲ್ಲಿ ಬಳಕೆಯಾದರೂ ಏಳು ಭಿನ್ನ ರೂಪಗಳನ್ನು ಕಾಣಬಹುದಾಗಿದೆ. ಇದರಲ್ಲಿ ಇನ್ನೂ ಮೂಖ್ಯವಾಗಿ ಮೂರು ಭಿನ್ನರೂಪಗಳನ್ನು ಗುರುತಿಸಲು ಸಾಧ್ಯವಿದೆ. ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಲ್ಲೆಗಳಲ್ಲಿ ಅಂದರೆ (ಬೀದರ್, ಗುಲಬರ್ಗಾ, ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ತಾಲೂಕು) ೧೨ ಜಿಲ್ಲೆಗಳಲ್ಲಿ ಕರಿಎಳ್ಳು, ಕರೇಳ್ಳು, ಕರಿ ಎಳ್, ಕರೇಳ್ಳ, ಕಾರೇಳ್ಳ, ಕಾರೆಳ್ಳು, ಗುರೆಳ್ಳ, ಗುರೇಳ್ಳು ಗುರಾಳ್, ಕಪ್ಪೆಲ್ಲು ರೂಪದ ಬಳಕೆಯಿದೆ.
ದಕ್ಷಿಣ ಕರ್ನಾಟಕದ ಸುಮಾರು ೮ ಜಿಲ್ಲೆಗಳಲ್ಲಿ ಹುಚ್ಚೆಳ್ಳು, ವುಚ್ಚೆಳ್ಳು ರೂಪದ ಬಳಕೆಯಿದೆ. (ಚಾಮರಾಜನಗರ, ಮೈಸೂರು, ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಕೊಡಗು, ಹಾಸ ತಾಲೂಕು) ಮಧ್ಯ ಕರ್ನಾಟಕದ ೪ (ನಾಲ್ಕೂ) ಚಿತ್ರದುರ್ಗ ೯, ದಾವಣಗೆರೆ ತಾಲೂಕು ಮತ್ತು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕುರೇಸಾಣೆ, ಕುರೇಶಣ್ಣಿ, ಕುರ್ಶಣಿ ಪದದ ರೂಪ ಕಂಡುಬಂದಿವೆ.
ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಒಂದೊಂದು ತಾಲೂಕಿನಲ್ಲಿ ಮರೆಳ್ಳು ಮರಿಯಳ್ಳು ರೂಪ ಇದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕಿನಲ್ಲಿ ಮಾತ್ರ ಎಳ್ಳು ರೂಪ ಇದೆ. ಶಿವಮೊಗ್ಗ ಜಿಲ್ಲೆಯ ಒಂದು ತಾಲೂಕಿನಲ್ಲಿ ಚಗಳಿಯಳ್ಳು ಒಂದು ತಾಲೂಕಿನಲ್ಲಿ ಹನಿವೆಳ್ಳ ರೂಪ ಇರುವುದು ತಿಳಿದು ಬಂದಿದೆ.
ಉತ್ತರ ಕರ್ನಾಟಕದಾದ್ಯಂತ ಬಳಕೆಯಲ್ಲಿರುವ ಕಾರೆಳ್ಳು, ಗುರೆಳ್ಳು ರೂಪ ಮೈಸೂರು ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಕಂಡುಬಂದಿರುವುದು ವಿಶೇಷ. ದಕ್ಷಿಣ ಕನ್ನಡದ ಎರಡು ತಾಲೂಕಿನಲ್ಲಿ ಕೂಡ ಈ ರೂಪ ಕಂಡುಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮತ್ತು ಮೈಸೂರಿನ ಒಂದು ತಾಲೂಕಿನಲ್ಲಿ ಕೂಡ ಈ ರೂಪ ಕಂಡುಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮತ್ತು ಮೈಸೂರಿನ ಕೆಲವು ತಾಲೂಕಿನಲ್ಲಿ ಈ ರೂಪದ ಬಗ್ಗೆ ಮಾಹಿತಿ ದೊರೆತಿಲ್ಲ. ಉತ್ತರ ಕರ್ನಾಟಕದಲ್ಲಿನ ರೂಪ ದಕ್ಷಿಣ ಕರ್ನಾಟಕದಲ್ಲಿ ಅಲ್ಲಲ್ಲಿ ದೊರೆತಿರಲು ಬಹುಶಃ ಬೇರೆ ಕಾರಣಗಳೇ ಇರಬಹುದು. ಉತ್ತರ ಕರ್ನಾಟಕದವರು ಈ ಪ್ರದೇಶಕ್ಕೆ ವಲಸೆ ಬಂದಿರುವ ಸಾಧ್ಯತೆಯೂ ಇರಬಹುದು. ಉಳಿದಂತೆ ಈ ಭೇದಗಳಿಗೆ ಬಹುತೇಕ ಭೌಗೋಳಿಕ ಕಾರಣಗಳಿರುವುದನ್ನು ನೋಡಬಹುದು.
ಹುಚ್ಚೆಳ್ಳು ಪದದ ಬಳಕೆಯ ಬೇರೆ ಬೇರೆ ವಿವರಗಳನ್ನು ಮುಂದಿನ ಐದು ಕೋಷ್ಟಕಗಳಲ್ಲಿ ವಿವರವಾಗಿ ನೀಡಲಾಗಿದೆ. ಅದನ್ನು ಕರ್ನಾಟಕದ ನಕ್ಷೆಯಲ್ಲಿ ಬಿಂಬಿಸಲು ಪ್ರಯತ್ನಿಸಲಾಗಿದೆ.
ಕೋಷ್ಟಕ ೧ – ಹುಚ್ಚೆಳ್ಳು ಪದದ ಪರ್ಯಾಯ ಮತ್ತು ಧ್ವನಿವ್ಯತ್ಯಾಸ ಇರುವ ರೂಪಗಳ ಒಟ್ಟು ವಿವರ
೧. ಹುಚ್ಚೆಳ್ಳು
೨. ವುಚ್ಚೆಳ್ಳು
೩. ಉಚ್ಚೆಳ್ಳು
೪. ಕರಿ ಎಳ್ಳು
೫. ಕರೆಳ್ಳು
೬. ಕರಿ ಎಳ್
೭. ಕರೇಳ್ಳು
೮. ಕಾರೆಳ್ಳ
೯. ಕಾರೆಳ್ಳು
೧೦. ಗುರೆಳ್ಳ
೧೧. ಗುರೇಳ್ಳು
೧೨. ಗುರಾಳ್
೧೩. ಕಪ್ಪೆಲ್ಲು
೧೪. ಕುರೆಸಾಣಿ
೧೫. ಕುರೆಶಣ್ಣಿ
೧೬. ಕುರ್ಶೆಣೆ
೧೭. ಮರೆಳ್ಳು
೧೮. ಮರಿಯಳ್ಳು
೧೯. ಚಗಳಿಯಳ್ಳು
೨೦. ಹನಿವೆಳ್ಳ
೨೧. ಎಳ್ಳು
ಕೋಷ್ಟಕ ೨ – ಹುಚ್ಚೆಳ್ಳು ಪದದ ಪರ್ಯಾಯ ರೂಪಗಳು ಮತ್ತು ಅವುಗಳ ಧ್ವನಿವ್ಯತ್ಯಾಸ ರೂಪಗಳ ವಿವರ
೧. ಹುಚ್ಚೆಳ್ಳು | ಹುಚ್ಚೆಳ್ಳು |
ವುಚ್ಚೆಳ್ಳು | |
ಉಚ್ಚೆಳ್ಳು | |
೨. ಕರಿಎಳ್ಳು | ಕರಿ ಎಳ್ಳು |
ಕರೆಳ್ಳು | |
ಕರಿ ಎಳ್ | |
ಕರೇಳ್ಳು | |
ಕಾರೆಳ್ಳ | |
ಕಾರೆಳ್ಳು | |
೩. ಗುರೆಳ್ಳು | ಗುರೆಳ್ಳು |
ಗುರೆಳ್ಳ | |
ಗುರಾಳ್ | |
ಗುರೇಳ್ಳು | |
೪. ಮರೆಳ್ಳು | ಮರೆಳ್ಳು |
ಮರಿಯಳ್ಳು | |
೫. ಚಗಳಿಯಳ್ಳು | ಚಗಳಿಯಳ್ಳು |
೬. ಎಳ್ಳು | ಎಳ್ಳು |
ಕೋಷ್ಟಕ ೩ – ಹುಚ್ಚೆಳ್ಳು ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ಕೊಡಗು | ಎಲ್ಲ ತಾಲೂಕುಗಳು |
೨. ಕೋಲಾರ | ಎಲ್ಲ ತಾಲೂಕುಗಳು |
೩. ಚಾಮರಾಜನಗರ | ಎಲ್ಲ ತಾಲೂಕುಗಳು |
೪. ಚಿಕ್ಕಮಗಳೂರು | ೩ |
೫. ತುಮಕೂರು | ಎಲ್ಲ ತಾಲೂಕುಗಳು |
೬. ಬೆಂಗಳೂರು | ಎಲ್ಲ ತಾಲೂಕುಗಳು |
೭. ಮಂಡ್ಯ | ಎಲ್ಲ ತಾಲೂಕುಗಳು |
೮. ಮೈಸೂರು | ಎಲ್ಲ ತಾಲೂಕುಗಳು |
೯. ಹಾಸನ | ಎಲ್ಲ ತಾಲೂಕುಗಳು |
ಕೋಷ್ಟಕ ೪ – ಕರಿ ಎಳ್ಳು, ಕರೆಳ್ಳು, ಕರಿ ಎಳ್, ಕರೇಳ್ಳು, ಕಾರೆಳ್ಳ, ಕಾರೆಳ್ಳು, ಗುರೆಳ್ಳು, ಗುರೆಳ್ಳು, ಗುರೆಳ್ಳ, ಗುರಾಳ್, ಗುರೇಳ್ಳು ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ಉತ್ತರ ಕನ್ನಡ | ಎಲ್ಲ ತಾಲೂಕುಗಳು (ಒಂದು ತಾಲೂಕು ಬಿಟ್ಟು) |
೨. ಕಲಬುರ್ಗಿ | ಎಲ್ಲ ತಾಲೂಕುಗಳು |
೩. ಕೊಡಗು | ೧ |
೪. ಕೊಪ್ಪಳ | ಎಲ್ಲ ತಾಲೂಕುಗಳು |
೫. ಗದಗ | ಎಲ್ಲ ತಾಲೂಕುಗಳು |
೬. ಚಿಕ್ಕಮಗಳೂರು | ೨ |
೭. ದಕ್ಷಿಣ ಕನ್ನಡ | ೨ |
೮. ದಾವಣಗೆರೆ | ೧ |
೯. ಧಾರವಾಡ | ಎಲ್ಲ ತಾಲೂಕುಗಳು |
೧೦. ಬಳ್ಳಾರಿ | ಎಲ್ಲ ತಾಲೂಕುಗಳು |
೧೧. ಬಾಗಲಕೋಟೆ | ಎಲ್ಲ ತಾಲೂಕುಗಳು |
೧೨. ಬೀದರ್ | ಎಲ್ಲ ತಾಲೂಕುಗಳು |
೧೩. ಬೆಳಗಾವಿ | ಎಲ್ಲ ತಾಲೂಕುಗಳು |
೧೪. ರಾಯಚೂರು | ಎಲ್ಲ ತಾಲೂಕುಗಳು |
೧೫. ವಿಜಾಪುರ | ಎಲ್ಲ ತಾಲೂಕುಗಳು |
೧೬. ಶಿವಮೊಗ್ಗ | ೩ |
೧೭. ಹಾವೇರಿ | ಎಲ್ಲ ತಾಲೂಕುಗಳು |
ಕುರೆಸಾಣಿ, ಕುರೆಶಣ್ಣಿ, ಕುರ್ಶೆಣಿ ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ
೧. ಚಿತ್ರದುರ್ಗ | ಎಲ್ಲ ತಾಲೂಕುಗಳು |
೨. ದಾವಣಗೆರೆ | ೫ |
೩. ಶಿವಮೊಗ್ಗ | ೩ |
೪. ಚಿಕ್ಕಮಗಳೂರು | ೧ |
ಮರೆಳ್ಳು ಮತ್ತು ಮರಿಯಳ್ಳು ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ
೧. ಚಿಕ್ಕಮಗಳೂರು | ೨ |
೨. ಶಿವಮೊಗ್ಗ | ೧ |
ಚಗಳಿಯಳ್ಳು ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ
೧. ಶಿವಮೊಗ್ಗ | ೧ |
ಹನಿವೆಳ್ಳು ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ
೧. ಶಿವಮೊಗ್ಗ | ೧ |
ಎಳ್ಳು ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ
೧. ಉತ್ತರ ಕನ್ನಡ | ೧ |
Leave A Comment