ಕರ್ನಾಟಕದಾದ್ಯಂತ ಆಡಳಿತ ಭಾಷೆ ಜನಭಾಷೆ ಕನ್ನಡವೇ ಎಂದು ಹೇಳಿದರೂ ಕೂಡ ಇಲ್ಲಿ ಹತ್ತಾರು ಭಾಷೆಗಳು ಈಗಲೂ ಜೀವಂತವಾಗಿವೆ. ಕರ್ನಾಟಕಕ್ಕೆ ಮುಖ್ಯವಾಗಿ ನಾಲ್ಕು ಭಾಷಾ ಗಡಿಗಳಿವೆ. ಅಲ್ಲದೆ ದಕ್ಷಿಣ ಭಾರತದಲ್ಲೆ ಹುಟ್ಟಿ ಬೆಳೆದ ಉರ್ದು ಇದೆ. ಕೊಂಕಣಿ ಇದೆ. ತುಳು ಇದೆ. ಲಂಬಾಣಿ ಇದೆ. ಇದುವರೆಗೆ ರಾಷ್ಟ್ರ ಭಾಷೆ ಎಂದು ಪರಿಗಣಿಸಿದ ಹಿಂದಿಯೂ ಇದೆ. ಜೊತೆಗೆ ಜಗತ್ತಿನ ಭಾಷೆ ಎಂದು ಪರಿಗಣಿಸಿದ ಇಂಗ್ಲಿಷ್ ಕೂಡ ಇಲ್ಲಿ ಜೀವಂತವಿದೆ. ಈ ಎಲ್ಲ ಭಾಷೆಗಳು ಸತತವಾಗಿ ಕನ್ನಡವನ್ನು ಪ್ರಭಾವಿಸುತ್ತಿವೆ. ಕೆಲವು ಕನ್ನಡದ ಪ್ರಭಾವಕ್ಕೊಳಗಾಗಿವೆ. ಇದರಿಂದ ಕನ್ನಡ ಕಳೆದು ಹೋಗುತ್ತಲೂ ಇದೆ ಎಂದು ಹೇಳಬಹುದು. ಹಾಗೆಯೇ ಬೆಳೆಯುತ್ತಲೂ ಇದೆ ಎನ್ನಬಹುದು.

ಉತ್ತರದಿಂದ ದಕ್ಷಿಣದ ತುದಿಗೆ, ಪೂರ್ವದಿಂದ ಪಶ್ಚಿಮದ ಕೊನೆಯವರೆಗೆ ಕನ್ನಡ ಭಾಷೆಯನ್ನು ಮಾತನಾಡುವವರೇ ಇದ್ದರೂ ಒದೇ ಬಗೆಯಲ್ಲಿ ಬಳಸುವುದಿಲ್ಲ. ಹಾಗಾಗಿ ಕನ್ನಡ ಭಾಷೆಯೊಳಗೆ ಮತ್ತೆ ಕೆಲವು ಗಡಿಗಳು ಇವೆ. ಈ ಗಡಿಗಳನ್ನು ಖಚಿತವಾಗಿ ಗೆರೆ ಹಾಕಿ ಗುರುತಿಸಲು ಸಾಧ್ಯವಿಲ್ಲದಿದ್ದರೂ ಗಡಿರೇಖೆಗಳನ್ನು ಗುರುತಿಸಲು ಸಾಧ್ಯವಿದೆ. ಉದಾಹರಣೆಗೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಒಂದು ಮಾದರಿಯವು. ದಕ್ಷಿಣ ಕರ್ನಾಟಕದ ಹಲವಾರು ಜಿಲ್ಲೆಗಳು ಮತ್ತೊಂದು ಮಾದರಿಯವು. ಇವುಗಳಲ್ಲಿ ಮತ್ತೆ ಸೂಕ್ಷ್ಮವಾದ ಗಡಿರೇಖೆಗಳನ್ನು ಗುರುತಿಸಲು ಸಾಧ್ಯ. ಇಲ್ಲಿ ತುಂಬಾ ಸೂಕ್ಷ್ಮವಾದ ಗಡಿರೇಖೆಗಳನ್ನು ಗುರುತಿಸಲು ಹೋಗಿಲ್ಲ. ಏಕೆಂದರೆ ಒಂದೇ ಭಾಷೆಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಇರುತ್ತದೆ. ಹಾಗೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ಇರುವುದು ಸಹಜ. ಈ ಭಿನ್ನತೆಯನ್ನು ಕೃಷಿ ಸಂಬಂಧಿ ಪದಗಳ ಮೂಲಕ ಕರ್ನಾಟಕದ ನಕ್ಷೆಯಲ್ಲಿ ಗುರುತಿಸುವುದು ಈ ಟಿಪ್ಪಣಿಯ ಮುಖ್ಯ ಉದ್ದೇಶವಾಗಿದೆ. ಈ ‘ಪದವಿನ್ಯಾಸ’ದಲ್ಲಿ ‘ಚಕ್ಕಡಿ’ ಪದವನ್ನು ಗಮನಿಸಲಾಗಿದೆ.

ಚಕ್ಕಡಿ ಕೃಷಿ ಮತ್ತು ಕೃಷಿಯೇತರ ಸಂದರ್ಭದಲ್ಲಿ ಸಾಗಾಣಿಕೆಗಾಗಿ ಬಳಸುವ ಮುಖ್ಯವಾದ ಸಾಧನ. ಆಧುನಿಕತೆಯಿಂದ ಈ ಸಾಧನ ಸಾಕಷ್ಟು ಮಾರ್ಪಾಡು ಹೊಂದಿದೆ. ಕೆಲವೆಡೆ ಕಣ್ಮರೆಯಾಗಿದೆ. ಚಕ್ಕಡಿ ರೂಪ ಹಾಗೇ ಉಳಿಸಿಕೊಂಡು ಚಕ್ರಗಳಿಗೆ ಬದಲಾಗಿ ಟೈರುಗಳ ಜೋಡಣೆ ಬಂದಿವೆ. ಅದರ ಕೆಳರೂಪ ಕೂಡ ಕಟ್ಟಿಗೆ ಹೋಗಿ ಕಬ್ಬಿಣ ಬಂದಿದೆ. ಇನ್ನೂ ಕೆಲವೆಡೆ ಟ್ರಾಕ್ಟರ್ ಈ ಸಾಧನದ ಜಾಗವನ್ನು ಆಕ್ರಮಿಸಿಕೊಂಡಿದೆ.

ಮೂರ‍್ನಾಲ್ಕು ದಶಕಗಳ ಹಿಂದೆ ಕರ್ನಾಟಕದಾದ್ಯಂತ ಸಿಗುವ ಈ ಸಾಧನ ಇಂದು ಅಪರೂಪವಾಗಿದೆ. ಸಾಕಷ್ಟು ಮಾರ್ಪಾಡು ಹೊಂದಿರುವುದರಿಂದ ಅದರ ಬಿಡಿ ಭಾಗಗಳು ಜನರಿಗೆ ಮರತೇ ಹೋಗಿವೆ. ಕೃಷಿಯಲ್ಲಿ ಅತ್ಯಂತ ಪ್ರಮುಖ ಸಾಗಣಿ ಸಾಧನವಾಗಿರುವ ಚಕ್ಕಡಿ ಎನ್ನುವ ಪದಕ್ಕೆ ಮುಖ್ಯವಾಗಿ ೧. ಗಾಡಿ, ೨. ಬಂಡಿ ಎನ್ನುವ ಎರಡು ಪರ‍್ಯಾಯ ರೂಪಗಳು ಸಿಗುತ್ತವೆ. ಆದರೆ ಧ್ವನಿ ವ್ಯತ್ಯಾಸದಲ್ಲಿ ಚಕ್ಕಡಿಗೆ ಮತ್ತೆ ಎರಡು ರೂಪಗಳು ದೊರಕುತ್ತವೆ. ಚಕ್ಕಡಿ ಎನ್ನುವ ರೂಪ ಮುಖ್ಯವಾಗಿ ಕರ್ನಾಟಕದಾದ್ಯಂತ ಮೂರು ರೂಪಗಳಲ್ಲಿ ಕರೆಯುವುದು ಕಂಡುಬರುತ್ತದೆ. ೧. ಚಕ್ಕಡಿ ೨. ಚಕ್ಕಡಿ ಗಾಡಿ, ೩. ಚಕ್ಡಿ, ಗಾಡಿ ಎನ್ನುವ ಪದಕ್ಕೆ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಹಜವಾದ ಬಳಕೆ ಕಂಡುಬರುತ್ತದೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಾಪುರ, ಗುಲಬರ್ಗಾ ಮತ್ತು ಬೀದರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ಬಳಕೆಯಾಗಿದೆ. ಬಂಡಿ ಎನ್ನುವ ಪದ ಉತ್ತರ ಕರ್ನಾಟಕದಲ್ಲಿ ಮತ್ತು ತೆಲಗು ಗಡಿ ಪ್ರದೇಶವಾದ ದಕ್ಷಿಣ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಮತ್ತು ಬೆಂಗಳೂರಿನ ಕೆಲವು ತಾಲೂಕಿನಲ್ಲಿ ಕಂಡುಬರುತ್ತದೆ. ಇದಕ್ಕೆ ತೆಲಗು ಪ್ರಭಾವ ಇದ್ದಂತೆ ಕಾಣುತ್ತದೆ. ಬೆಳಗಾವಿ, ಶಿವಮೊಗ್ಗ ಮತ್ತು ಚಿತ್ರದುರ್ಗದ ಕೆಲವೆಡೆ ಬಳಕೆಯಾಗಿದೆ. ಇದಕ್ಕೆ ಕಾರಣಗಳು ಸ್ಪಷ್ಟವಾಗಿ ತಿಳಿದಿಲ್ಲ. ಚಕ್ಕಡಿ, ಚಕ್ಡಿಗಾಡಿ, ಚಕ್ಡಿ ಪದ ಕೂಡ ಉತ್ತರದ ಗುಲಬರ್ಗಾ, ಶಿವಮೊಗ್ಗ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಾಪುರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಉತ್ತರ ಕನ್ನಡದ ಒಂದು ತಾಲೂಕಿನಲ್ಲಿ, ಶಿವಮೊಗ್ಗದ ಒಂದು ತಾಲೂಕಿನಲ್ಲಿ ಮತ್ತು ಚಿಕ್ಕಮಗಳೂರಿನ ಒಂದು ತಾಲೂಕಿನಲ್ಲಿ ಕಂಡುಬಂದಿರುವುದನ್ನು ಕಾಣಬಹುದು. ಇದು ಸ್ವಲ್ಪ ಅಸಹಜವಾಗಿದೆ. ಇದಕ್ಕೆ ಪರಾಮರ್ಶಿಸಿ ನೋಡಬೇಕಾಗಿದೆ. ಈ ಎಲ್ಲ ವಿವರಗಳನ್ನು ಕೆಳಗಿನ ಕೋಷ್ಟಕಗಳಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಕೋಷ್ಟಕ ೧ ರಲ್ಲಿ ಕರ್ನಾಟಕದಾದ್ಯಂತ ಬಳಕೆಯಾದ ಪದಗಳ ಪಟ್ಟಿ ನೀಡಲಾಗಿದೆ. ಕೋಷ್ಟಕ ೨ರಲ್ಲಿ ಚಕ್ಕಡಿ ಪದಕ್ಕೆ ಸಿಗುವ ಪರ‍್ಯಾಯ ರೂಪಗಳನ್ನು ಆ ರೂಪಗಳಿಗೆ ಆಗುವ ಧ್ವನಿ ವ್ಯತ್ಯಾಸ ರೂಪಗಳನ್ನು ಕೊಡಲಾಗಿದೆ. ಕೋಷ್ಟಕ ೩ ರಲ್ಲಿ ಈ ಎಲ್ಲ ರೂಪಗಳು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬಳಕೆಯಾದ ವಿವರವನ್ನು ನೀಡಿದೆ. ಕೋಷ್ಟಕ ೪ರಲ್ಲಿ ನಕ್ಷೆ ಮೂಲಕ ವಿವರಿಸಿದೆ.

ಕೋಷ್ಟಕ ೧ – ಚಕ್ಕಡಿ ಪದದ ಪರ್ಯಾಯ ಮತ್ತು ಧ್ವನಿವ್ಯತ್ಯಾಸ ರೂಪಗಳ ವಿವರ

೧. ಗಾಡಿ

೨. ಬಂಡಿ

೩. ಚಕ್ಕಡಿ

೪. ಚಕ್ಕಡಿ ಬಂಡಿ

೫. ಚಕ್ಕಿ

ಕೋಷ್ಟಕ ೨ – ಚಕ್ಕಡಿ ಪದದ ಪರ್ಯಾಯ ಮತ್ತು ಧ್ವನಿವ್ಯತ್ಯಾಸ ರೂಪಗಳ ವಿವರ

೧. ಗಾಡಿ ಗಾಡಿ
೨. ಬಂಡಿ ಬಂಡಿ
೩. ಚಕ್ಕಡಿ ಚಕ್ಕಡಿ
ಚಕ್ಡಿ
ಚಕ್ಕಡಿ ಬಂಡಿ

 

ಕೋಷ್ಟಕ – ಗಾಡಿ ರೂಪದ ಬಳಕೆಯ ಜಿಲ್ಲೆ ಮತ್ತು ತಾಲೂಕುವಾರು ವಿವರ

ಕ್ರ.ಸಂ. / ಜಿಲ್ಲೆಗಳು ತಾಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ ೧೧
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ ಇಲ್ಲ
೬. ಕೋಲಾರ
೭. ಗದಗ ಇಲ್ಲ
೮. ಚಾಮರಾಜನಗರ
೯. ಚಿಕ್ಕಮಗಳೂರು
೧೦. ಚಿತ್ರದುರ್ಗ
೧೧. ತುಮಕೂರು ಎಲ್ಲ ತಾಲೂಕು
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ ಇಲ್ಲ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ
೧೯. ಬೆಂಗಳೂರು ಎಲ್ಲ ತಾಲೂಕು
೨೦. ಮಂಡ್ಯ ಎಲ್ಲ ತಾಲೂಕು
೨೧. ಮೈಸೂರು ಎಲ್ಲ ತಾಲೂಕು
೨೨. ರಾಯಚೂರು ಇಲ್ಲ
೨೩. ವಿಜಾಪುರ
೨೪. ಶಿವಮೊಗ್ಗ ಎಲ್ಲ ತಾಲೂಕು
೨೫. ಹಾಸನ ಎಲ್ಲ ತಾಲೂಕು
೨೬. ಹಾವೇರಿ ಇಲ್ಲ

 

ಬಂಡಿ ರೂಪದ ಬಳಕೆಯ ಜಿಲ್ಲಾವಾರು ಮತ್ತು ತಾಲೂಕುವಾರು ವಿವರ

ಕ್ರ.ಸಂ. / ಜಿಲ್ಲೆಗಳು ತಾಲೂಕುಗಳು
೧. ಉಡುಪಿ ಇಲ್ಲ
೨. ಉತ್ತರ ಕನ್ನಡ ಇಲ್ಲ
೩. ಕಲಬುರ್ಗಿ ೧೦
೪. ಕೊಡಗು ಇಲ್ಲ
೫. ಕೊಪ್ಪಳ
೬. ಕೋಲಾರ ೧೦
೭. ಗದಗ
೮. ಚಾಮರಾಜನಗರ ಇಲ್ಲ
೯. ಚಿಕ್ಕಮಗಳೂರು ಇಲ್ಲ
೧೦. ಚಿತ್ರದುರ್ಗ ಇಲ್ಲ
೧೧. ತುಮಕೂರು ಇಲ್ಲ
೧೨. ದಕ್ಷಿಣ ಕನ್ನಡ ಇಲ್ಲ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ ಎಲ್ಲ ತಾಲೂಕು
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ
೧೯. ಬೆಂಗಳೂರು
೨೦. ಮಂಡ್ಯ
೨೧. ಮೈಸೂರು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ ಇಲ್ಲ
೨೬. ಹಾವೇರಿ ಇಲ್ಲ

 

ಚಕ್ಕಡಿ ಮತ್ತು ಅದರ ಧ್ವನಿವ್ಯತ್ಯಾಸ ಇರುವ ರೂಪದ ಬಳಕೆಯ ಜಿಲ್ಲೆ ಮತ್ತು ತಾಲೂಕುವಾರು ವಿವರ

ಕ್ರ.ಸಂ. / ಜಿಲ್ಲೆಗಳು ತಾಲೂಕುಗಳು
೧. ಉತ್ತರ ಕನ್ನಡ
೨. ಗದಗ
೩. ಗುಲಬರ್ಗಾ
೪. ಚಿಕ್ಕಮಗಳೂರು
೫. ಧಾರವಾಡ
೬. ಬಾಗಲಕೋಟೆ
೭. ಬೆಳಗಾವಿ
೮. ವಿಜಾಪುರ
೯. ಶಿವಮೊಗ್ಗ
೪. ಹಾವೇರಿ ಎಲ್ಲ ತಾಲೂಕು

14_365_PV-KUH