ಯಾವುದೇ ಭಾಷೆ ಮುಖ್ಯವಾಗಿ ಮೂರು ನೆಲೆಯಲ್ಲಿ ವೈವಿದ್ಯತೆಯನ್ನು ಪಡೆದು ಕೊಂಡಿರುತ್ತದೆ. ೧. ಚಾರಿತ್ರಿಕವಾಗಿ , ೨. ಪ್ರಾದೇಶಿಕವಾಗಿ ೩. ಸಾಮಾಜಿಕವಾಗಿ. ಕನ್ನಡದ ಸಂದರ್ಭವನ್ನು ಇಟ್ಟುಕೊಂಡು ಚರ್ಚಿಸುವುದಾದರೆ ಚಾರಿತ್ರಿಕವಾಗಿ ಕನ್ನಡ ಬೆಳೆದು ಬಂದ ವೈವಿಧ್ಯತೆ. ಕನ್ನಡ ಭಾಷೆಯ ಚರಿತ್ರೆಯನ್ನು ಬಲ್ಲ ಎಲ್ಲರಿಗೂ ಗೊತ್ತಿದೆ. ಶಾಸನಗಳ ಕಾಲದ ಕನ್ನಡ, ಪಂಪನ ಕಾಲದ ಕನ್ನಡ, ವಚನಕಾರರ ಕಾಲದ ಕನ್ನಡ, ದಾಸರ ಕಾಲದ ಕನ್ನಡ ಕುಮಾರವ್ಯಾಸನ ಕಾಲದ ಕನ್ನಡ, ಬ್ರಿಟೀಶರು ಭಾರತಕ್ಕೆ ಬಂದಾಗ ಇದ್ದ ಕನ್ನಡ, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಕನ್ನಡ ಮತ್ತು ಇಂದಿನ ಕನ್ನಡ ಒಂದೇ ಅಲ್ಲ. ಹಲ್ಮಿಡಿ ಶಾಸನದ ಕಾಲದಿಂದ ಹಿಡಿದು ೨೧ನೇ ಶತಮಾನದ ಕನ್ನಡದವರೆಗೆ ಹಲವಾರು ಕನ್ನಡಗಳನ್ನು ಕಾಣುತ್ತೇವೆ. ಸಾಮಾಜಿಕವಾಗಿಯೂ ಬ್ರಾಹ್ಮಣರು ಆಡುವ ಕನ್ನಡ, ಲಿಂಗಾಯತ, ಗೌಡರು ಆಡುವ ಕನ್ನಡ, ಹಿಂದುಳಿದ ವರ್ಗಗಳು ಆಡುವ ಕನ್ನಡ, ದಲಿತರು ಆಡುವ ಕನ್ನಡ ಕೂಡ ಒಂದೇ ಅಲ್ಲ. ಪ್ರಾದೇಶಿಕವಾಗಿಯೂ ಒಂದೇ ಕನ್ನಡ ಇಲ್ಲ ಎನ್ನುವುದನ್ನು ಭಾಷಾ ತಜ್ಞರು ಈಗಾಗಲೇ ಗುರುತಿಸಿದ್ದಾರೆ.
ಹಾಗಾದರೆ ಕನ್ನಡ ಎಂಬುದು ಒಂದಲ್ಲ, ಕನ್ನಡವೆಲ್ಲ ಒಂದು, ಕನ್ನಡಿಗರೆಲ್ಲ ಒಂದು, ಕರ್ನಾಟಕವೆಲ್ಲ ಒಂದು ಎಂಬ ಮಾತುಗಳು ಮತ್ತೆ ಮತ್ತೆ ಎದುರಾಗುತ್ತದೆ. ಚಾರಿತ್ರಿಕವಾದ, ಸಾಮಾಜಿಕವಾದ ಮತ್ತು ಪ್ರಾದೇಶಿಕವಾದ ಈ ಎಲ್ಲ ಕನ್ನಡಗಳು ಹಲವು ಕನ್ನಡಗಳು ಎಂದು ಚರ್ಚಿಸಲು ಸಾಧ್ಯವಿದ್ದಂತೆ ಇವೆಲ್ಲಕ್ಕೂ ಒಂದು ತಳಹದಿಯನ್ನು ಗುರುತಿಸಲೂ ಕೂಡ ಸಾಧ್ಯವಿದೆ. ಆದ್ದರಿಂದಲೇ ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಈ ಮೂರು ಘಟಕಗಳನ್ನು ಒಂದಾಗಿ ಭಾವನಾತ್ಮಕವಾಗಿ ನೋಡಲು ಸಾಧ್ಯವಿದೆ. ಎನಿಸುತ್ತದೆ.
ಕರ್ನಾಟಕದಾದ್ಯಂತ ಇರುವ ಈ ಒಂದು ಕನ್ನಡದ ಹಲವು ಕನ್ನಡಂಗಳನ್ನು ನೋಡುವುದು ಪದವಿನ್ಯಾಸದ ಮುಖ್ಯ ಉದ್ದೇಶವಾಗಿದೆ. ಸನಿಕೆ ಕೃಷಿಗೆ ಸಂಬಂಧಿಸಿದ ಅತ್ಯಂತ ಪ್ರಮುಖವಾದ ಉಪಕರಣ. ಸನಿಕೆ ರೂಪವನ್ನು ಇಟ್ಟುಕೊಂಡು ಈ ಟಿಪ್ಪಣಿಯಲ್ಲಿ ಅದರ ಗಡಿರೇಖೆಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ.
ಕರ್ನಾಟಕ ಏಕಭಾಷಿಕ ಪ್ರದೇಶ ಅಲ್ಲ ಬಹುಭಾಷಿಕ ಪ್ರದೇಶ ಆಗಿದೆ. ಇಲ್ಲಿ ಕನ್ನಡ ಭಾಷೆಯ ಜೊತೆಗೆ ಉರ್ದು, ತುಳು, ತೆಲುಗು, ಮರಾಠಿ, ತಮಿಳು, ಮಲಯಾಳಿ, ಕೊಂಕಣಿ, ಹಿಂದಿ ಮುಂತಾದ ಭಾಷೆಗಳು ಇವೆ. ಈ ಎಲ್ಲ ಭಾಷೆಗಳಿಂದ ಕನ್ನಡ ಕಾಲಾಂತರದಿಂದಲೂ ಕೊಡು ಕೊಳೆ ಮಾಡುತ್ತ ಬಂದಿದೆ. ಹಾಗಾಗಿ ಕರ್ನಾಟಕದ ಗಡಿ ಭಾಗಗಳಲ್ಲಿ ಪಕ್ಕದ ಭಾಷಿಕ ರೂಪಗಳು ಸೇರಿಕೊಂಡಿರುವ ಸಾಧ್ಯತೆ ಇದೆ. ಆದ್ದರಿಂದಲೇ ಉತ್ತರದ ಬೀದರ್, ಗುಲಬರ್ಗಾ, ವಿಜಾಪುರ, ಬೆಳಗಾವಿ ಜಿಲ್ಲೆಗಳ ಗಡಿಯಲ್ಲಿ ಫೌಡಿ ರೂಪ ದೊರೆಯುತ್ತದೆ. ತೆಲುಗು ಗಡಿ ಪ್ರದೇಶವಾದ ಬೀದರ್ ಗುಲಬರ್ಗಾ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳಿವೆ. ಈ ಜಿಲ್ಲೆಗಳಲ್ಲಿ ಸಹಜವಾಗಿಯೇ ಸನಿಕೆ ಚಲಿಕೆ, ಚಲ್ಕೆ, ಶನ್ಕೆ ರೂಪಗಳು ಕಂಡು ಬಂದಿವೆ.
ಕೃಷಿಯಲ್ಲಿ ಇಂದು ಮಹತ್ತರವಾದ ಬದಲಾವಣೆಗಳಾಗಿವೆ. ಬದಲಾದ ಬದುಕಿನ ವಿಧಾನ ಮತ್ತು ಆಧುನಿಕ ತಂತ್ರಜ್ಞಾನ ಬಂದು ಪಾರಂಪರಿಕ ಕೃಷಿ ಬಹುತೇಕ ಕೊಚ್ಚಿಕೊಂಡು ಹೋಗುತ್ತಿದೆ ಎಂತಲೇ ಹೇಳಬೇಕು. ಮುಂದಿನ ಒಂದೆರಡು ಪೀಳಿಗೆಯ ನಂತರ ಬಹುಶಃ ಪಾರಂಪರಿಕ ಕೃಷಿ ವಿಧಾನ ಬಹುತೇಕ ಕಣ್ಮರೆಯಾಗಬಹುದು. ಹಾಗಾಗಿ ಪಾರಂಪರಿಕ ಕೃಷಿ ವಿಧಾನದಲ್ಲಿ ನಿಧಾನವಾಗಿ ಕೃಷಿ ಉಪಕರಣಗಳು ನಿಷ್ಪ್ರಯೋಜಕವಾಗಬಹುದು. ಅದನ್ನು ಈ ಸನಿಕೆ ರೂಪದಲ್ಲಿ ಕಾಣದೇ ಹೋದರೂ ಕೃಷಿಗೆ ಸಂಬಂಧಿಸಿದ ಅನೇಕ ಉಪಕರಣಗಳ ವಿಷಯದಲ್ಲಿ ಸತ್ಯ ಎಂದೇ ಹೇಳಬೇಕು.
ಸನಿಕೆ ಪದ ಕರ್ನಾಟಕದ ಉದ್ದಗಲಕ್ಕೂ ಎಲ್ಲ ಕೃಷಿಕರೂ ಬಳಸುವುದು ಕಂಡು ಬಂದಿದೆ. ಸನಿಕೆ ಉಪಕರಣ ರೂಪಕ್ಕೆ ಸುಮಾರು ೧೦ ಪರ್ಯಾಯ ರೂಪಗಳು ಕರ್ನಾಟಕದಲ್ಲಿ ಸಿಕ್ಕಿವೆ. ಒಂದೊಂದು ಪರ್ಯಾಯ ರೂಪದ ಧ್ವನಿವ್ಯತ್ಯಾಸವಿರುವ ರೂಪಗಳು ಇಂತಿವೆ. ೧. ಸನಿಕೆ: ಸನಿಕೆ, ಸನ್ಕೆ, ಸನಿಕ, ಶನ್ಕೆ, ಸಲಿಕಿ, ಸಲಿಕೆ, ಸಲ್ಕೆ, ಸಲ್ಕಿ, ಸೆಲ್ಕಿ, ಶಲ್ಕೆ, ಸೆನ್ಕೆ, ಚಲ್ಕೆ, ಚಲಿಕೆ, ಚಲಿಕಿ, ಚನ್ಕೆ, ೨. ಗುದ್ದಲಿ: ಗುದ್ಲಿ, ಗುದ್ಲೆ, ಗುದ್ದುಳಿ, ಎರೆಗುದ್ಲಿ, ಸೋಗುದ್ಲಿ, ೩. ಕೊಟ್ಟು: ಕೊಟ್ರೆ, ಕುಟಾರಿ, ೪. ಎಲ್ಕೋಟು, ೫. ಮಮ್ಟಿ ೬. ಕುಂಟೇಣಿ ೭. ಹಾರೆ ೮. ಗ್ವಾರೆ : ಗ್ವಾರಿ, ಗೋರಿ ೯. ಫೌಡಿ: ಪೌಡ ೧೦. ನೆಳ್ಳಿ
ಸನಿಕೆ ಪದದ ಪರ್ಯಾಯ ರೂಪಗಳು ಮತ್ತು ಅವುಗಳಿಗೆ ಸಿಗುವ ಧ್ವನಿವ್ಯತ್ಯಾಸದ ರೂಪಗಳು, ಅವು ಜಿಲ್ಲಾ ತಾಲೂಕುಗಳಲ್ಲಿ ಬಳಕೆಯಾಗುವ ವಿವರವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.
ಕೋಷ್ಟಕ ೧
೧. ಸನಿಕೆ: ಸನಿಕೆ, ಸನ್ಕೆ, ಸನಿಕ, ಶನ್ಕೆ, ಸಲಿಕಿ, ಸಲಿಕೆ, ಸಲ್ಕೆ, ಸಲ್ಕಿ, ಸೆಲ್ಕಿ, ಶಲ್ಕೆ, ಸೆನ್ನೆ, ಚೆಲ್ಕೆ, ಚಲಿಕೆ, ಚಲಿಕಿ, ಚನ್ಕೆ, ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ಉತ್ತರ ಕನ್ನಡ | ೨ |
೨. ಕಲಬುರ್ಗಿ | ೫ |
೩. ಕೊಪ್ಪಳ | ೨ |
೪. ಕೋಲಾರ | ೩ |
೫. ಗದಗ | ೧ |
೬. ಚಿಕ್ಕಮಗಳೂರು | ೧ |
೭. ಚಿತ್ರದುರ್ಗ | ೨ |
೮. ತುಮಕೂರು | ೨ |
೯. ದಾವಣಗೆರೆ | ೩ |
೧೦. ಧಾರವಾಡ | ೧ |
೧೧. ಬಳ್ಳಾರಿ | ೪ |
೧೨. ಬಾಗಲಕೋಟೆ | ೪ |
೧೩. ಬೀದರ್ | ೧ |
೧೪. ಬೆಳಗಾವಿ | ೨ |
೧೫. ಬೆಂಗಳೂರು | ೪ |
೧೬. ರಾಯಚೂರು | ೨ |
೧೭. ವಿಜಾಪುರ | ೪ |
೧೮. ಶಿವಮೊಗ್ಗ | ೩ |
೨. ಗುದ್ದಲಿ: ಗುದ್ಲಿ, ಗುದ್ಲೆ, ಗುದ್ದುಳಿ, ಎರೆಗುದ್ಲಿ, ಸೋಗುದ್ಲಿ ರೂಪದ ಜಿಲ್ಲಾ ಮತ್ತು ತಾಲೂಕು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲ್ಲೂಕುಗಳು |
೧. ಉತ್ತರ ಕನ್ನಡ | ೧ |
೨. ಕೊಡಗು | ೨ |
೩. ಚಿಕ್ಕಮಗಳೂರು | ೧ |
೪. ತುಮಕೂರು | ೨ |
೫. ಮಂಡ್ಯ | ೧ |
೬. ಮೈಸೂರು | ೧ |
೭. ಹಾಸನ | ೧ |
೩. ಕೊಟ್ಟು: ಕೊಟ್ರೆ, ಕುಟಾರಿ ರೂಪದ ಜಿಲ್ಲಾ ಮತ್ತು ತಾಲೂಕು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ಉಡುಪಿ | ೧ |
೨. ಉತ್ತರ ಕನ್ನಡ | ೨ |
೩. ಕೊಡಗು | ೧ |
೪. ದಕ್ಷಿಣ ಕನ್ನಡ | ೨ |
೪. ಎಲ್ಕೋಟು ರೂಪದ ಜಿಲ್ಲಾ ಮತ್ತು ತಾಲೂಕು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ಮೈಸೂರು | ೧ |
೨. ಚಾಮರಾಜನಗರ | ೧ |
೫. ಮಮ್ಟಿ : ರೂಪದ ಜಿಲ್ಲಾ ಮತ್ತು ತಾಲೂಕು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ದಕ್ಷಿಣ ಕನ್ನಡ | ೧ |
೨. ತುಮಕೂರು | ೧ |
೩. ಮೈಸೂರು | ೧ |
೬. ಕುಂಟೇಣಿ: ರೂಪದ ಜಿಲ್ಲಾ ಮತ್ತು ತಾಲೂಕು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ಹಾಸನ | ೧ |
೭. ಹಾರೆ: ರೂಪದ ಜಿಲ್ಲಾ ಮತ್ತು ತಾಲೂಕು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗುಳು |
೧. ಚಿಕ್ಕಮಗಳೂರು | ೧ |
೨. ದಕ್ಷಿಣ ಕನ್ನಡ | ೧ |
೮. ಗ್ವಾರೆ : ಗ್ವಾರಿ, ಗೋರಿ ರೂಪದ ಜಿಲ್ಲಾ ಮತ್ತು ತಾಲೂಕು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ಉಡುಪಿ | ೧ |
೨. ಉತ್ತರ ಕನ್ನಡ | ೧ |
೩. ಹಾವೇರಿ | ೨ |
೯. ಫೌಡಿ : ಪೌಡಿ, ಪೌಡ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ಉತ್ತರ ಕನ್ನಡ | ೧ |
೨. ಗುಲುಬರ್ಗಾ | ೨ |
೩. ಬೀದರ್ | ೩ |
೪. ವಿಜಾಪುರ | ೧ |
೧೦. ನೆಳ್ಳಿ : ರೂಪದ ಜಿಲ್ಲಾವಾರು ವಿವರ
ಕ್ರ.ಸಂ. / ಜಿಲ್ಲೆಗಳು | ತಾಲೂಕುಗಳು |
೧. ಶಿವಮೊಗ್ಗ |
ಕೋಷ್ಟಕ ೨ – ಸನಿಕೆ ರೂಪ ಒಂದೊಂದು ಜಿಲ್ಲೆಯಲ್ಲಿ ಯಾವ ಯಾವ ರೂಪಗಳಲ್ಲಿ ಬಳಕೆಯಾಗುತ್ತದೆ ಎನ್ನುವುದನ್ನು ಈ ಕೆಳಗಿನಂತೆ ನೋಡಬಹುದು.
೧. ಉಡುಪಿ | ಕೊಟ್ರೆ, ಹಾರೆ ಗೋರಿ |
೨. ಉತ್ತರ ಕನ್ನಡ | ಸಲ್ಕೆ, ಸಲ್ಕಿ, ಗುದ್ಲೆ, ಗ್ವಾರೆ, ಕುಟಾರಿ, ಕುಟಾರಿ, ಪೌಡ |
೩. ಕಲಬುರ್ಗಿ | ಸನಿಕೆ, ಸಲಿಕೆ, ಸಲ್ಕಿ, ಸನಿಕೆ, ಸನಿಕ ಪೌಡ, ಪೌಡಿ |
೪. ಕೊಡಗು | ಗುದ್ದಲಿ, ಗುದ್ಲಿ, ಕೊಟ್ಟು |
೫. ಕೊಪ್ಪಳ | ಚಲಿಕೆ, ಸಲಿಕಿ |
೬. ಕೋಲಾರ | ಸನ್ಕೆ, ಶನ್ಕೆ, ಚನ್ಕೆ |
೭. ಗದಗ | ಸಲಿಕಿ |
೮. ಚಾಮರಾಜನಗರ | ಯಲ್ಕೋಟು |
೯. ಚಿಕ್ಕಮಗಳೂರು | ಚಲ್ಕೆ, ಗುದ್ಲಿ, ಹಾರೆ |
೧೦. ಚಿತ್ರದುರ್ಗ | ಸಲ್ಕೆ, ಚಲ್ಕೆ |
೧೧. ತುಮಕೂರು | ಸಲ್ಕಿ, ಶಲ್ಕೆ, ಗುದ್ಲಿ, ಎಲೆಗುದ್ಲಿ, ಮಮ್ಟಿ |
೧೨. ದಕ್ಷಿಣ ಕನ್ನಡ | ಕೊಟ್ಟು, ಮಮ್ಟಿ, ಕೊಟ್ರೆ, ಹಾರೆ |
೧೩. ದಾವಣಗೆರೆ | ಚಲ್ಕೆ, ಸಲಿಕೆ, ಸಲ್ಕೆ |
೧೪. ಧಾರವಾಡ | ಸಲಿಕೆ |
೧೫. ಬಳ್ಳಾರಿ | ಸಲಿಕೆ, ಸಲಿಕಿ, ಸಿನಿಕೆ, ಚನಿಕೆ |
೧೬. ಬಾಗಲಕೋಟೆ | ಸನಿಕೆ, ಸಲಿಕೆ, ಸನಿಕಿ, ಸಲ್ಕಿ |
೧೭. ಬೀದರ್ | ಸನಿಕೆ, ಪೌಡಿ, ಫೌಡಿ |
೧೮. ಬೆಳಗಾವಿ | ಸಲಿಕಿ, ಸನಿಕಿ |
೧೯. ಬೆಂಗಳೂರು | ಸನ್ಕೆ, ಶನ್ಕೆ, ಸೆನ್ಕೆ, ಚನ್ಕೆ |
೨೦. ಮಂಡ್ಯ | ಗುದ್ಲಿ |
೨೧. ಮೈಸೂರು | ಗುದ್ಲಿ, ಯಲ್ಕೋಟು, ಮಮ್ಟಿ |
೨೨. ರಾಯಚೂರು | ಚಲಿಕಿ, ಸಲಿಕಿ |
೨೩. ವಿಜಾಪುರ | ಸನಿಕೆ, ಸನಿಕಿ, ಸನ್ಕೆ, ಸಲಿಕಿ, ಫೌಡಿ |
೨೪. ಶಿವಮೊಗ್ಗ | ಸಲಿಕೆ, ಸಲ್ಕೆ, ಸಲ್ಕಿ, ಗುದ್ಲಿ, ಸೋಗುದ್ಲಿ, ನೆಳ್ಳಿ |
೨೫. ಹಾಸನ | ಗುದ್ಲಿ, ಕುಂಟೇಣಿ |
೨೬. ಹಾವೇರಿ | ಸಲಿಕಿ, ಗ್ವಾರಿ |
Leave A Comment