ಕರ್ನಾಟಕದಲ್ಲಿ ಕನ್ನಡ ಭಾಷೆಯ ಜೊತೆಗೆ ಇನ್ನೂ ಹಲವಾರು ಭಾಷೆಗಳು ಬಳಕೆಯಲ್ಲಿದೆ. ಇದರಿಂದ ಇಂದು ಕರ್ನಾಟಕದಲ್ಲಿ ಬಹುಭಾಷಿಕ ಸಂದರ್ಭ ಉಂಟಾದರೂ ಹೆಚ್ಚಾಗಿ ಬಳಸುವ ಭಾಷೆ ಕನ್ನಡ. ಇದು ಜನಗಣತಿ ಪ್ರಕಾರವೂ ಸತ್ಯ ಹಾಗಾಗಿ ಕರ್ನಾಟಕ ರಾಜ್ಯವನ್ನು ಭಾಷೆಯ ಆಧಾರದ ಮೇಲೆ ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಲಾಗಿದೆ. ಇದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕನ್ನಡ ಭಾಷೆ ಸುಮಾರು ೨೫೦೦ ವರ್ಷಗಳಿಂದ ಬಳಕೆಯಾಗುತ್ತಿರುವ ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು. ಇಷ್ಟೊಂದು ಸುದೀರ್ಘ ಚರಿತ್ರೆ ಇರುವ ಕನ್ನಡ ಭಾಷೆ ಇಂದು ಅಳಿವಿನ ಅಂಚಿನಲ್ಲಿದೆ ಎಂದು ಸರ್ವೆಗಳು ಹೇಳುತ್ತಿವೆ. ಮುಂದಿನ ಕೆಲವೇ ದಶಕಗಳಲ್ಲಿ ಕನ್ನಡ ನಮ್ಮೆಲ್ಲರಿಂದ ಕಣ್ಮರೆಯಾಗುತ್ತದೆ ಎಂದೂ ಸಹ ಬಿಂಬಿಸಲಾಗುತ್ತಿದೆ. ಇಂಥ ಸುದೀರ್ಘ ಚರಿತ್ರೆ ಇರುವ, ಆದರೆ ಇಂದು ಬಿಕ್ಕಟ್ಟಿನಲ್ಲಿರುವ ಕನ್ನಡ ಭಾಷೆಯ ಅನೇಕ ರೂಪಗಳು ಬಳಕೆಯಾಗುತ್ತಿರುವ ವಿಧಾನವನ್ನು ಮತ್ತು ಅವುಗಳ ಪರ‍್ಯಾಯ ರೂಪಗಳನ್ನು ಮತ್ತು ಅವುಗಳಿಗಿರುವ ಧ್ವನಿವ್ಯತ್ಯಾಸಗಳನ್ನು ಗುರುತಿಸುವ ಹಿನ್ನೆಲೆಯಲ್ಲಿ ಈಚು ಪದವನ್ನು ಪದವಿನ್ಯಾಸ ಟಿಪ್ಪಣಿಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಈಚು ಪದ ಕೂಡ ಕೃಷಿಯಲ್ಲಿ ಬಳಕೆಯಾಗುವ ಮುಖ್ಯವಾದ ಉಪಕರಣಗಳಲ್ಲಿ ಒಂದು. ನೇಗಿಲಿನ ಭಾಗವಾದ ಕಟ್ಟಿಗೆಯ ಉದ್ದನೆಯ ದಿಂಡು. ನೇಗಿಲು ಮತ್ತು ನೊಗವನ್ನು ಜೋಡಿಸುವ ಭಾಗ. ಈ ಉಪಕರಣ ಕೂಡ ಕರ್ನಾಟಕದಾದ್ಯಂತ ಎಲ್ಲ ಕೃಷಿಕರು ಬಳಸುತ್ತಾರೆ. ನಾಡಿನಾದ್ಯಂತ ಎಲ್ಲರೂ ಸಾಮಾನ್ಯವಾಗಿ ಬಳಸಿದರೂ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ, ಪೂರ್ವದ ಆಂದ್ರಪ್ರದೇಶದ ಭಾಗದಿಂದ ಪಶ್ಚಿಮ ಕರಾವಳಿ ಪ್ರದೇಶದವರೆಗೆ ಈಚು ಪದ ಒಂದೇ ರೀತಿಯಲ್ಲಿ ಬಳಕೆಯಾಗಿಲ್ಲ. ಈಚು ಎನ್ನುವ ರೂಪವೇ ಪ್ರಧಾನವಾಗಿ ದೊರೆತರೂ ಅದರ ಜೊತೆಗೆ ಸುಮಾರು ಹದಿನಾಲ್ಕು ಪರ‍್ಯಾಯ ರೂಪಗಳು ದೊರೆತಿವೆ.

ಈಚು ರೂಪದ ಧ್ವನಿವ್ಯತ್ಯಾಸ ಇರುವ ಹನ್ನೊಂದು ಪದಗಳು ದೊರೆತಿವೆ. ಈ ರೂಪ ಬಿಟ್ಟರೆ ಈಯ ರೂಪಕ್ಕೆ ನಾಲ್ಕು ಧ್ವನಿವ್ಯತ್ಯಾಸ ಇರುವ ರೂಪಗಳು, ಈಚ್ ಪಾರು ರೂಪಕ್ಕೆ ಮೂರು ಧ್ವನಿವ್ಯತ್ಯಾಸ ಇರುವ ಪದಗಳು ಮತ್ತು ಮುಣ ರೂಪಕ್ಕೆ ಮೂರು ಧ್ವನಿ ವ್ಯತ್ಯಾಸ ಇರುವ ಪದಗಳು ದೊರೆತಿವೆ. ಉಳಿದಂತೆ ರಿಶಿ, ದಂಡಿಗೆ, ಮಟ್ಗು, ರೂಪಗಳಿಗೆ ಎರಡೆರಡು ಧ್ವನಿವ್ಯತ್ಯಾಸ ಇರುವ ಪದಗಳು ದೊರೆತಿವೆ. ಇನ್ನುಳಿದ ಏಳು ರೂಪಗಳು ಒಂದೊಂದೆ ಪದಗಳು ದೊರೆತಿವೆ. ಇದರ ಪೂರ್ಣ ವಿವರವನ್ನು ಮುಂದಿನ ಕೋಷ್ಠಕಗಳಲ್ಲಿ ನೋಡಬಹುದು.

ಸಿಕ್ಕ ದಾಖಲೆಗಳನ್ನು ಗಮನಿಸಿದರೆ ಈಚು ಮತ್ತು ಈಚಿನ ಧ್ವನಿ ವ್ಯತ್ಯಾಸ ರೂಪಗಳೇ ಬಹುತೇಕ ಕರ್ನಾಟಕದಾದ್ಯಂತ ದೊರೆತಿವೆ. ಒಂದೇ ಜಿಲ್ಲೆಯಲ್ಲಿ ಹಲವು ರೂಪಗಳು ದೊರೆತಿರುವುದು ಉತ್ತರ ಕನ್ನಡ ಜಿಲ್ಲೆ ಮತ್ತು ಬೀದರ್ ಜಿಲ್ಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಸುಮಾರು ಐದು ರೂಪಗಳು ದೊರೆತಿವೆ. ಇದು ಕೂತೂಹಲಕ್ಕೆ ಎಡೆಮಾಡಿ ಕೊಡುತ್ತದೆ. ಹಾಗೆಯೇ ಬೀದರ್ ಜಿಲ್ಲೆಯಲ್ಲೂ ಕೂಡ ನಾಲ್ಕು ಪ್ರತ್ಯೇಕ ರೂಪಗಳು ದೊರೆತಿರುವುದು ವಿಶೇಷಾಗಿದೆ.

ಈಚು ರೂಪಕ್ಕೆ ಸುಮಾರು ಹದಿನೈದು ಪರ‍್ಯಾಯ ರೂಪಗಳು ದೊರೆತಿವೆ. ಆದರೆ ಪರ‍್ಯಾಯ ರೂಪಗಳುತ್ತು ಧ್ವನಿವ್ಯತ್ಯಾಸ ಇರುವ ರೂಪಗಳು ಲೆಕ್ಕ ಹಾಕಿದರೆ ಕರ್ನಾಟಕದಾದ್ಯಂತ ಸುಮಾರು ಮೂವತ್ತೆರಡು ರೂಪಗಳು ದೊರೆತಿದೆ. ಕರ್ನಾಟಕದಲ್ಲಿ ಬಳಕೆಯಾಗುವ ಭಾಷೆ ಪ್ರಧಾನವಾಗಿ ಕನ್ನಡವೇ ಆದರೂ ಕನ್ನಡದ್ದೇ ಆದ ಧ್ವನಿ ವ್ಯತ್ಯಾಸಗಳ ರೂಪಗಳು ಮತ್ತು ಪರ‍್ಯಾಯ ರೂಪಗಳು ದೊರೆತಿರುವುದು ಕನ್ನಡದ ವೈವಿದ್ಯತೆಯನ್ನು ಹೇಳುತ್ತದೆ.

ಈಚು ಪದದ ಬಳಕೆಯ ವಿಧಾನವನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗಲಿ ಎಂದು ಈ ಕೆಳಗೆ ಮೂರು ಕೋಷ್ಟಕಗಳನ್ನು ನೀಡಲಾಗಿದೆ. ಮೊದಲನೇ ಕೋಷ್ಟಕದಲ್ಲಿ ಈಚು ರೂಪದ ಪರ‍್ಯಾಯ ರೂಪಗಳೂ ಮತ್ತು ಪರ‍್ಯಾಯ ರೂಪದ ಜೊತೆಗೆ ಅದರ ಧ್ವನಿವ್ಯತ್ಯಾಸ ಇರುವ ಪದಗಳನ್ನು ನೀಡಲಾಗಿದೆ. ಎರಡನೇ ಕೋಷ್ಟಕದಲ್ಲಿ ಕರ್ನಾಟಕದ ಪ್ರತಿ ಜಲ್ಲೆಯಲ್ಲಿ ಈಚು ಪದ ಮತ್ತು ಅದಕ್ಕೆ ಸಿಕ್ಕುವ ಪರ‍್ಯಾಯ ರೂಪಗಳನ್ನು ವಿವರವಾಗಿ ನೀಡಲಾಗಿದೆ. ಮೂರನೇ ಕೋಷ್ಟಕದಲ್ಲಿ ಈಚು ಪದದ ರೂಪ ಪ್ರತಿ ಜಿಲ್ಲೆಯಲ್ಲಿ ಮತ್ತು ಅದರ ಎಷ್ಟು ತಾಲೂಕುಗಳಲ್ಲಿ ದೊರೆಯುತ್ತದೆ ಎನ್ನುವುದನ್ನು ನೀಡಲಾಗಿದೆ. ಕೋಷ್ಟಕ ೪ ರಲ್ಲಿ ಈಚು ಪದ ಬಳಕೆಯಾದ ಒಟ್ಟು ಪದಗಳ ಪಟ್ಟಿ ನೀಡಿದೆ. ಕೋಷ್ಟಕ ೫ರಲ್ಲಿ ಈಚು ರೂಪ ಪರ‍್ಯಾಯ ರೂಪಗಳುತ್ತು ಧ್ವನಿ ವ್ಯತ್ಯಾಸಗಳನ್ನು ಸೂಚಿಸುವ ನಕ್ಷೆ ಕೊಡಲಾಗಿದೆ.

ಕೋಷ್ಟಕ ೧ – ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಈಚು ಪದ ಬಳಕೆಯಾದ ವಿವರ

೧. ಈಚು : ಈಚು, ಈಚ್, ಹೀಚು, ಈಸು, ಈಸ್, ಈಚ, ಈಸ, ಈಶು, ಈಸಿನ್, ದಬ್ಬೆ, ಈಸಿನ್ ಕಂಬಿ, ಈಸ್ಮಾನು

೨. ಈಯ : ಈಯ, ಈಮು, ಈವು

೩. ಆಸ್ರೆ : ಆಸ್ರೆ

೪. ರಿಶಿ : ರಿಶಿ, ರೀಶ್

೫. ದಂಡಿಗೆ : ದಂಡಿಗೆ, ಜಂಡ್ಗಿ

೬. ಮಟ್ಗು : ಮಟ್ಗು, ಮಟ್ಗೀಸು

೭. ಉದ್ಗಿ : ಉದ್ಗಿ

೮. ಮಣೆ : ಮುಣೆ, ಮೊನೆ

೯. ಇರಾಡ್ : ಇರಾಡ್

೧೦. ನೊಗ : ನೊಗ (ನುಗ)

೧೧. ಕಂಬಿ : ಕಂಬಿ

೧೨. ಮಾನು : ಮಾನು

೧೩. ತಡಿ : ತಡಿ

೧೪. ಅರ‍್ಗೋಡು : ಅರ‍್ಗೋಡು

೧೫. ಈಚ್ ಪಾರು : ಈಚ್ ಪಾರು, ಉಯ್ಯಪಾರು

ಕೋಷ್ಟಕ ೨ – ಜಿಲ್ಲೆಗಳು

೧. ಉಡುಪಿ : ಈಸು, ಈಸ್, ಮುಣೆ

೨. ಉತ್ತರ ಕನ್ನಡ : ಈಸು, ಈಸ್, ಈಸಿನ್, ದಬ್ಬೆ, ಈಸಿನ್, ಕಂಬಿ, ಅಸ್ರೆ, ರಿಶಿ, ಈರಾಡ್, ಕಂಬಿ

೩. ಕಲಬುರ್ಗಿ : ಈಸು, ಈಸ, ಈಸ್ಮಾನು

೪. ಕೊಡಗು : ಈಚು, ಅರ‍್ಗೋಡು, ಈಚ್ ಪಾರು, ಉಯ್ಯ ಪಾರು

೫. ಕೊಪ್ಪಳ : ಈಸ್

೬. ಕೋಲಾರ : ಈಸು

೭. ಗದಗ : ಈಸ್

೮. ಚಾಮರಾಜನಗರ : ಈವು, ತಡಿ

೯. ಚಿಕ್ಕಮಗಳೂರು : ಈಚು, ಈಸು

೧೦. ಚಿತ್ರದುರ್ಗ : ಈಚು, ಈಸು

೧೧. ತುಮಕೂರು : ಈಚು, ಈಸು, ಈಚ

೧೨. ದಕ್ಷಿಣ ಕನ್ನಡ : ಮುಣೆ, ಮೊನೆ, ನೊಗ (ನುಗ)

೧೩. ದಾವಣಗೆರೆ : ಈಚು

೧೪. ಧಾರವಾಡ : ಈಸ್

೧೫. ಬಳ್ಳಾರಿ : ಈಚು, ಈಸ್, ಈಚ್

೧೬. ಬಾಗಲಕೋಟೆ: ಈಸು, ಜಂಡ್ಗಿ, ಉದ್ಗಿ

೧೭. ಬೀದರ್ : ಈಸು, ದಂಡಿಗೆ, ಮುಟ್ಗು, ಮುಟ್ಗೀಸು, ಮಾನು

೧೮. ಬೆಳಗಾವಿ : ಈಸ್

೧೯. ಬೆಂಗಳೂರು : ಈಚು, ಈಸು, ಈಚ

೨೦. ಮಂಡ್ಯ : ಈಚು, ಹೀಚು, ಈಯ

೨೧. ಮೈಸೂರು : ಈಚು, ಈಯ, ಈಮು, ಈವು, ತಡಿ

೨೨. ರಾಯಚೂರು : ಈಸ್

೨೩. ವಿಜಾಪುರ : ಈಸು

೨೪. ಶಿವಮೊಗ್ಗ : ಈಸು, ಈಶು

೨೫. ಹಾಸನ : ಈಚು, ಹೀಚು, ಅರ‍್ಗೋಡು

೨೬. ಹಾವೇರಿ : ಈಸ್

ಕೋಷ್ಟಕ ೩ – ೧. ಈಚು : ಈಚು, ಈಚ್, ಹೀಚು, ಈಸು, ಈಸ್, ಈಚ, ಈಸ, ಈಶ, ಈಸಿನ್ ದಬ್ಬೆ, ಈಸಿನ್ ಕಂಬಿ, ಈಸ್ಮಾನು ರೂಪದ ಬಳಕೆಯ ಜಿಲ್ಲಾವಾರು ವಿವರ

ಕ್ರ.ಸಂ. / ಜಿಲ್ಲೆಗಳು ತಾಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ ೧೧
೪. ಕೊಡಗು
೫. ಕೊಪ್ಪಳ
೬. ಕೋಲಾರ ೧೨
೭. ಗದಗ
೮. ಚಾಮರಾಜನಗರ
೯. ಚಿಕ್ಕಮಗಳೂರು
೧೦. ಚಿತ್ರದುರ್ಗ
೧೧. ತುಮಕೂರು ೧೨
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ ೧೦
೧೯. ಬೆಂಗಳೂರು ೧೧
೨೦. ಮಂಡ್ಯ
೨೧. ಮೈಸೂರು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

. ಈಯ, ಈಮು, ಈವು ರೂಪಗಳು ಜಿಲ್ಲಾ ಮತ್ತು ತಾಲೂಕುವಾರು ಬಳಕೆಯ ವಿವರ

ಕ್ರ.ಸಂ. ಜಿಲ್ಲೆಗಳು ತಾಲೂಕುಗಳು
೧. ಚಾಮರಾಜನಗರ
೨. ಮಂಡ್ಯ
೩. ಮೈಸೂರು

 

. ಈಚ್ ಪಾರು, .ಯ್ಯ ಪಾರು ರೂಪಗಳು ಬಳಕೆಯಾದ ಜಿಲ್ಲೆ ಮತ್ತು ತಾಲೂಕುವಾರು ವಿವರ

ಕ್ರ.ಸಂ. / ಜಿಲ್ಲೆಗಳು ತಾಲೂಕುಗಳು
೪. ಕೊಡಗು

 

. ದಂಡಿಗೆ, ಜಂಡ್ಗಿ ರೂಪದ ಜಿಲ್ಲಾ ಮತ್ತು ತಾಲೂಕುವಾರು ಬಳಕೆಯ ವಿವರ

ಕ್ರ. ಸಂ. / ಜಿಲ್ಲೆಗಳು ತಾಲೂಕುಗಳು
೧. ಬಾಗಲಕೋಟೆ
೨. ಬೀದರ್

 

. ಮಟ್ಗು, ಮಟ್ಗೀಸು ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

ಕ್ರ.ಸಂ. / ಜಿಲ್ಲೆಗಳು ತಾಲೂಕುಗಳು
೧. ಬೀದರ್

 

. ಮುಣೆ ಮತ್ತು ಮೊನೆ ರೂಪದ ಬಳಕೆಯಾದ ಜಿಲ್ಲಾ ಮತ್ತು ತಾಲೂಕುವಾರು ವಿವರ

ಕ್ರ.ಸಂ. / ಜಿಲ್ಲೆಗಳು ತಾಲೂಕುಗಳು
೧. ಉಡುಪಿ
೨. ದಕ್ಷಿಣ ಕನ್ನಡ

ಈ ಕೆಳಗಿನ ೭ ರಿಂದ ೧೫ರ ಸಂಖ್ಯೆಯ ಎಲ್ಲ ರೂಪಗಳು ಬಳಕೆಯಾದ ಜಿಲ್ಲೆ ಮತ್ತು ತಾಲೂಕುವಾರು ವಿವರ

ಬಳಕೆಯಾದ ರೂಪ ಬಳಕೆಯಾದ ಜಿಲ್ಲೆ ಬಳಕೆಯಾದ ತಾಲೂಕುಗಳು
೭. ಅಸ್ರಿ ಉತ್ತರಕನ್ನಡ
೮. ಉದ್ಗಿ ಬಾಗಲಕೋಟ
೯. ಇರಾಡ್ ಉತ್ತರ ಕನ್ನಡ
೧೦. ಕಂಬಿ ದಕ್ಷಿಣ ಕನ್ನಡ
೧೧. ಕಂಬಿ ಉತ್ತರ ಕನ್ನಡ
೧೨. ಮಾನು ಬೀದರ್
೧೩. ತಡಿ ಚಾಮರಾಜನಗರ
ಮೈಸೂರು
೧೪. ಅರ‍್ಗೋಡು ಹಾಸನ
ಕೊಡಗು
೧೫. ರಿಶಿ ಉತ್ತರ ಕನ್ನಡ

ಕೋಷ್ಟಕ : ೪.೧ ಈಚು ೨. ಈಚ್ ೩. ಹೀಚು ೪. ಈಸು ೫. ಈಸ್ ೬. ಈಚ ೭. ಈಸ ೮. ಈಶು ೯. ಈಸಿನ್ ದಬ್ಬೆ ೧೦. ಈಚಿನ್ ಕಂಬಿ ೧೧. ಈಸ್ಮಾನು ೧೨. ಈಯ ೧೩. ಈಮು ೧೪. ಈವು ೧೫. ಅಸ್ರೆ ೧೬. ರಿಶಿ ೧೭. ರೀಶ್ ೧೮. ದಂಡಿಗೆ ೧೯. ಜಂಡ್ಗಿ ೨೦. ಮಟ್ಟು ೨೧. ಮಟ್ಗೀಸು ೨೨. ಉದ್ಗಿ ೨೩. ಮುಣೆ ೨೪. ಮಾನೆ ೨೫. ಈರಾಡ್ ೨೬. ನೊಗ ೨೭. ಕಂಬಿ ೨೮. ಮಾನು ೨೯. ತಡಿ ೩೦. ಅರ‍್ಗೋಡು ೩೧. ಈಚ್‌ಪಾರು ೩೨. ಉಯ್ಯೆಪಾರು

16_365_PV-KUH