ಕರ್ನಾಟಕದಾದ್ಯಂತ ಬಹುಪಾಲು ಜನರು ಕನ್ನಡ ಭಾಷೆಯನ್ನೇ ಮಾತನಾಡಿದರೂ ಒಂದು ಪ್ರದೇಶದ ಕನ್ನಡ ಬೇರೊಂದು ಪ್ರದೇಶದ ಕನ್ನಡಕ್ಕಿಂತ ಎದ್ದು ಕಾಣುವಂಥ ಭಿನ್ನತೆ ಹೊಂದಿದೆ. ಕೆಲವು ಸಲ ಒಂದು ಪ್ರದೇಶದ ಕನ್ನಡದ ಪದಗಳು ಬೇರೊಂದು ಪ್ರದೇಶದ ಕನ್ನಡಿಗರಿಗೆ ಸಂಪೂರ್ಣವಾಗಿ ಅರ್ಥವಾಗದೇ ಹೋಗುವ ಸಾಧ್ಯತೆ ಉಂಟು. ಹೀಗೆ ಆಗಲು ಅನೇಕ ಕಾರಣಗಳಿವೆ. ಒಂದು : ಕರ್ನಾಟಕದ ಗಡಿ ಪ್ರದೇಶದಲ್ಲಿ ತೆಲುಗು, ತಮಿಳು, ಮಲಯಾಳಿ, ತುಳು, ಮರಾಠಿ ಮಾತನಾಡುವ ಜನರಿದ್ದಾರೆ. ಕನ್ನಡಿಗರು ಇಂಥ ಗಡಿ ಪ್ರದೇಶದಲ್ಲಿ ಹತ್ತಿರದ ಬೇರೆ ಭಾಷಿಕರೊಂದಿಗೆ ಹತ್ತು ಹಲವು ಸಂದರ್ಭಗಳಲ್ಲಿ ವ್ಯವಹರಿಸಬೇಕಾಗುತ್ತದೆ. ಹಾಗಾಗಿ ತಾವು ಮಾತನಾಡುವ ಭಾಷೆಯಲ್ಲೂ ಸಹಜವಾಗಿಯೇ ಕೊಡುಕೊಳೆ ನಡೆಯುತ್ತದೆ. ಇಂತಹ ಸಂದರ್ಭದಿಂದ ಕಾಲಾಂತರದಲ್ಲಿ ಒಂದು ಭಾಷೆ ತನ್ನ ಭಾಷೆಯ ಹಲವಾರು ಪದಗಳು, ಭಾಷಿಕರ ರಚನೆಯ ನಿಯಮಗಳು (ಅತ್ಯಂತ ಕಡಿಮೆ ಪ್ರಮಾಣದಲ್ಲಿ) ಮತ್ತೊಂದು ಭಾಷೆಗೆ ವರ್ಗಾಯಿಸುವ ಅಥವಾ ತನ್ನದಾಗಿಸಿಕೊಳ್ಳುವ ಕ್ರಿಯೆ ನಡೆಯುತ್ತದೆ. ಅತ್ಯಂತ ನಿಧಾನವಾಗಿ ಈ ಪ್ರಕ್ರಿಯೆ ನಡೆಯುತ್ತದೆ. ಇದು ತನ್ನದಾಗಿಸಿಕೊಂಡ ಮೇಲೆ ಅದು ಆ ಭಾಷೆಯೇ ಆಗಿ ಹೋಗುತ್ತದೆ. ಆ ಪ್ರದೇಶದ ಭಾಷೆಯ ಸಹಜ ಬಳಕೆಯ ಕ್ರಮವೂ ಆಗುತ್ತದೆ. ಇದು ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯಲ್ಲಿ ಮತ್ತು ಒಂದೊಂದು ಹಂತದಲ್ಲಿ ನಡೆಯುವುದರಿಂದ ಪ್ರದೇಶದಿಂದ ಪ್ರದೇಶಕ್ಕೆ ಒಂದೇ ಭಾಷೆ ಹಲವಾರು ರೂಪಗಳನ್ನು ಪಡೆಯಬಹುದು. ಉದಾಹರಣೆ : ಬೆಳಗಾವಿ, ವಿಜಾಪುರ, ಗುಲಬರ್ಗಾ, ಬೀದರ ಜಿಲ್ಲೆಯ ಕೆಲವು ಭಾಗದ ಕನ್ನಡದಲ್ಲಿ ಮರಾಠಿ ಶಬ್ದಗಳು ಬಂದಿರುವುದನ್ನು ಕಾಣಬಹುದು. ಹಾಗೆಯೇ ತೆಲುಗು ಭಾಷಿಕರ ಪ್ರದೇಶದ ಗಡಿಯಲ್ಲಿರುವ ಕನ್ನಡ, ಹಾಗೆಯೇ ತಮಿಳು, ಮಲಯಾಳಿ ಇತ್ಯಾದಿ ಭಾಷೆಯ ಪದಗಳು ಕನ್ನಡದಲ್ಲಿ ಹಾಸು ಹೊಕ್ಕಿರುವುದನ್ನ ನೋಡಬಹುದಾಗಿದೆ.

ಎರಡು : ಕರ್ನಾಟಕ ರಾಜ್ಯ ವಿಶಾಲವಾದ ಪ್ರದೇಶವನ್ನು ಹೊಂದಿದೆ. ಅನೇಕ ದೊಡ್ಡ ದೊಡ್ಡ ಬೆಟ್ಟಗಳು, ನದಿಗಳು, ಕಾಡುಗಳು ಕನ್ನಡ ಭಾಷೆಯನ್ನು ಹಲವು ದ್ವೀಪಗಳನ್ನಾಗಿ ಸೃಷ್ಟಿಸಿವೆ. ಉದಾಹರಣೆಗೆ: ತುಂಗಭದ್ರ ನದಿ ಆಚೆ ಈಚೆ ಜನರಿಗೆ ಸಂಪರ್ಕವೇ ಇಲ್ಲದಂತಿರುವುದು. ಮಲೆನಾಡ ಪ್ರದೇಶದ ಘಟ್ಟದ ಮೇಲೆ, ಘಟ್ಟದ ಕೆಳಗೆ ಸಂಪರ್ಕವೇ ಇಲ್ಲದಿರುವುದು. ಕಾಡುಗಳ ಆಚೆ ಈಚೆ ಇರುವ ಒಂದೇ ಭಾಷಿಕರ ನಡುವೆ ಸಂಪರ್ಕ ಇಲ್ಲದಂತಿರುವುದು. ಬೇರೆ ಭಾಷೆಗಳೊಂದಿಗೂ ಇದೇ ರೀತಿಯ ಭೌಗೋಳಿಕ ಕಾರಣಗಳಿಗಾಗಿ ಪ್ರತ್ಯೇಕವಾಗಿ ಸಂಪರ್ಕ ಇಲ್ಲದೇ ಇರುವುದನ್ನು ನೋಡಬಹುದು. ಉದಾ: ಮಲೆಮಹದೇಶ್ವರ ಬೆಟ್ಟದ ಕಾಡು ಆ ಕಡೆ ಇರುವ ತಮಿಳು ಭಾಷಿಕರನ್ನು ಮತ್ತು ಕನ್ನಡ ಬಾಷಿಕರನ್ನು ಪ್ರತ್ಯೇಕಗೊಳಿಸಿರುವಂತೆ. ಈ ಭೌಗೋಳಿಕ ವ್ಯತ್ಯಾಸಗಳು ಭಾಷಿಕ ಭಿನ್ನತೆಯನ್ನು ಸೃಷ್ಟಿಸಿವೆ ಎಂದರೂ ತಪ್ಪಾಗಲಾರದು.

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದ ಮೇಲೆ ಆಧುನಿಕವಾಗಿ ಸಂಪರ್ಕವನ್ನು ಸಾಧಿಸಿದ್ದೇವೆ. ಆದರೆ ಈ ಸಂಪರ್ಕ ಮಾಧ್ಯಮ ಇತ್ತೀಚೆಗೆ ಸಾಧ್ಯವಾಗಿದೆ. ಆದರೆ ಭೌಗೋಳಿಕವಾಗಿ ಹತ್ತಿರದಲ್ಲೇ ಇದ್ದರೂ ನೈಸರ್ಗಿಕ ಕಾರಣಗಳಿಂದ ನೂರಾರು ವರ್ಷಗಳಿಂದ ನೇರ ಸಂಪರ್ಕಕಕ್ಕೆ ಬರದಿದ್ದರಿಂದ ತಮ್ಮತಮ್ಮ ಆಡುಮಾತಿನಲ್ಲಿ ಆದ ಬೆಳವಣಿಗೆ ಇಂದು ಒಂದೆಡೆ ಇಟ್ಟು ನೋಡಿದಾಗ ಒಂದೇ ಭಾಷೆಯಲ್ಲಿ ಅನೇಕ ಭಿನ್ನಾಂಶಗಳನ್ನು ಕಾಣುತ್ತೇವೆ. ಯಾಕೆ ಎನ್ನುವುದನ್ನು ವಿವರಿಸುವುದಕ್ಕಿಂತ ಆ ಭಿನ್ನ ರೂಪಗಳು ಹೇಗೆ ಆಗಿವೆ ಎನ್ನುವುದನ್ನು ನಕ್ಷೆಯ ಮೂಲಕ ಆ ಪದದ ಬಳಕೆಯ ವ್ಯಾಪ್ತಿಯ ಗಡಿಯನ್ನು ಸೂಚಿಸುವುದಷ್ಟೇ ಇಲ್ಲಿನ ಮುಖ್ಯ ಉದ್ದೇಶವಾಗಿದೆ.

ಈ ಟಿಪ್ಪಣಿಗಾಗಿ ಭತ್ತ ಪದವನ್ನು ಬಳಸಿಕೊಳ್ಳಲಾಗಿದೆ. ಭತ್ತ ಎನ್ನುವ ಪದಕ್ಕೆ ಮುಖ್ಯವಾಗಿ ೧. ನೆಲ್ಲು, ೨. ಕಳವೆ ಎನ್ನುವ ಎರಡು ರೂಪಗಳು ಸಿಗುತ್ತವೆ. ಆದರೆ ಧ್ವನಿ ವ್ಯತ್ಯಾಸದಲ್ಲಿ ಅನೇಕ ಪದಗಳ ಬಳಕೆಯೂ ಕಂಡು ಬಂದಿದೆ. ಉದಾಹರಣೆ: ೧. ಭತ್ತ ರೂಪ ಆರಂಭದ ಅಕ್ಷರ ಮಹಾಪ್ರಾಣ ಕಳೆದುಕೊಂಡು ಬತ್ತ ಎಂದು ಬಳಕೆಯಾಗುವ ರೂಪ ಸಿಗುತ್ತದೆ. ೨. ನೆಲ್ಲು ರೂಪಕ್ಕೆ ಧ್ವನಿ ವ್ಯತ್ಯಾಸವಾಗಿ ನೆಲ್ಲ ರೂಪ ಸಿಗುತ್ತದೆ. ೩. ಕಳವೆ ರೂಪಕ್ಕೆ ಮಾತ್ರ ಭತ್ತ ಮತ್ತು ನೆಲ್ಲು ಪದಗಳಿಗಿಂತ ಹೆಚ್ಚಿನ ಅಂದರೆ ಕಳಮೆ, ಕಳವಿ, ಕವಳೆ, ಕವಳಿ, ಕಳೆಮೆ, ಕಳಮೆ ಎನ್ನುವ ಧ್ವನಿವ್ಯತ್ಯಾಸಗಳು ಕ್ಷೇತ್ರದಲ್ಲಿ ಸಿಕ್ಕಿವೆ. ಇದನ್ನು ಮುಂದಿನ ನಕಾಶೆಯಲ್ಲಿ ನೋಡಬಹುದು.

ಭತ್ತ ಎನ್ನುವ ಪದ ಮುಖ್ಯವಾಗಿ ಕರ್ನಾಟಕದಾದ್ಯಂತ ಮೂರು ರೂಪದಲ್ಲಿ ಕರೆಯುವುದು ಕಂಡುಬರುತ್ತದೆ. ಉತ್ತರದ ಬೀದರ್, ಗುಲಬರ್ಗಾ ಜಿಲ್ಲೆಯಾದ್ಯಂತ ಪೂರ್ಣವಾಗಿ, ರಾಯಚೂರು ಮತ್ತು ವಿಜಾಪುರದ ಜಿಲ್ಲೆಯ ಒಂದೊಂದು ತಾಲೂಕಿನಲ್ಲಿ ಕಳವೆ ರೂಪ ಮತ್ತು ಅದರ ಧ್ವನಿವ್ಯತ್ಯಾಸದ ರೂಪಗಳು ಕಾಣುತ್ತವೆ. ನೆಲ್ಲು, ನೆಲ್ಲ ಎನ್ನುವ ರೂಪದ ಬಳಕೆ ರಾಯಚೂರು, ಬಳ್ಳಾರಿ, ಚಿತ್ರದುರ್ಗ, ವಿಜಾಪುರ, ಕೊಪ್ಪಳ ಜಿಲ್ಲೆಗಳಲ್ಲಿ ಮತ್ತು ಕೋಲಾರ, ಬೆಂಗಳೂರು, ತುಮಕೂರಿನಲ್ಲೂ ಇದರ ರೂಪ ಸ್ವಲ್ಪ ಮಟ್ಟಿಗೆ ಕಂಡುಬರುತ್ತದೆ. ಉತ್ತರದ ಎರಡು ಜಿಲ್ಲೆಗಳನ್ನು ಮತ್ತು ಬಳ್ಳಾರಿ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳನ್ನು ಮುಖ್ಯವಾಗಿ ಬಿಟ್ಟರೆ ಕರ್ನಾಟಕದಾದ್ಯಂತ ಭತ್ತ ಎನ್ನುವ ರೂಪವೇ ಬಳಕೆ ಇದೆ. ಇದನ್ನು ಮುಂದಿನ ಚಿತ್ರದ ಮೂಲಕ ಖಚಿತವಾಗಿ ಕಾಣಬಹುದು.

ಕರ್ನಾಟಕದ ನಕ್ಷೆಯನ್ನು ನೋಡಿದರೆ ಈ ಮೇಲೆ ಸೂಚಿಸಿದ ಮೂರು ರೂಪಗಳು ಬಹುತೇಕ ತಮ್ಮದೇ ಆದ ಒಂದು ಗಡಿ ರೇಖೆಯನ್ನು ನಿರ್ಮಿಸಿಕೊಂಡಿವೆ. ಕೆಲವು ಸಲ ಒಂದು ರೂಪದ ಬಳಕೆ ಮತ್ತೊಂದು ರೂಪದ ಬಳಕೆಯ ಪರಿಸರದ ನಡುವೆಯೂ ಕಂಡುಬರುತ್ತದೆ. ಹೀಗೆ ಕಂಡುಬರಲು ಆರ್ಥಿಕವಾದ, ರಾಜಕೀಯವಾದ ಮತ್ತು ಸಾಮಾಜಿಕವಾದ ಕಾರಣಗಲಿವೆ.

ಬತ್ತ, ಭತ್ತ ರೂಪದ ಬಳಕೆಯಲ್ಲಿ ಜಿಲ್ಲೆ ಮತ್ತು ತಾಲ್ಲೂಕುವಾರು ವಿವರ

ಕ್ರ. ಸಂ. ಜಿಲ್ಲೆಗಳು ತಾಲ್ಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ ೧೧
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ
೬. ಕೋಲಾರ ೧೦
೭. ಗದಗ
೮. ಚಾಮರಾಜನಗರ
೯. ಚಿಕ್ಕಮಗಳೂರು
೧೦. ಚಿತ್ರದುರ್ಗ
೧೧. ತುಮಕೂರು ೧೦
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ ೧೦
೧೯. ಬೆಂಗಳೂರು ೧೧
೨೦ ಮಂಡ್ಯ
೨೧. ಮೈಸೂರು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

ನೆಲ್ಲು, ನೆಲ್ಲ ರೂಪದ ಬಳಕೆಯಲ್ಲಿ ಜಿಲ್ಲೆ ಮತ್ತು ತಾಲ್ಲೂಕುವಾರು

ಕ್ರ. ಸಂ. ಜಿಲ್ಲೆಗಳು ತಾಲ್ಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ
೬. ಕೋಲಾರ
೭. ಗದಗ
೮. ಚಾಮರಾಜನಗರ
೯. ಚಿಕ್ಕಮಗಳೂರು
೧೦. ಚಿತ್ರದುರ್ಗ
೧೧. ತುಮಕೂರು
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ
೧೯. ಬೆಂಗಳೂರು
೨೦. ಮಂಡ್ಯ
೨೧. ಮೈಸೂರು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

ಕಳವಿ, ಕಳಮೆ, ಕವಳಿ, ಕವಳೆ, ಕಳೆಮೆ, ಕಳಮೆ ರೂಪದ ಬಳಕೆಯ ಜಿಲ್ಲೆ ಮತ್ತು ತಾಲ್ಲೂಕುವಾರು

ಕ್ರ.ಸಂ. ಜಿಲ್ಲಾವಾರು ತಾಲ್ಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ ೧೦
೪. ಕೊಡಗು
೫. ಕೊಪ್ಪಳ
೬. ಕೋಲಾರ
೭. ಗದಗ
೮. ಚಾಮರಾಜನಗರ
೯. ಚಿಕ್ಕಮಗಳೂರು
೧೦. ಚಿತ್ರದುರ್ಗ
೧೧. ತುಮಕೂರು
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ
೧೯. ಬೆಂಗಳೂರು
೨೦. ಮಂಡ್ಯ
೨೧. ಮೈಸೂರು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

 

01_365_PV-KUH