ಕರ್ನಾಟಕದಾದ್ಯಂತ ಕನ್ನಡ ಭಾಷೆಯನ್ನೇ ಪ್ರಧಾನವಾಗಿ ಮಾತನಾಡುವ ಜನರಿದ್ದಾರೆ. ಕನ್ನಡಿಗರು ಕನ್ನಡಿಗರಲ್ಲದವರೂ ಕೂಡ ಕನ್ನಡವನ್ನು ಬಳಸುವವರಿದ್ದಾರೆ. ಆದರೆ ಬೀದರ್ ನವನ ಭಾಷೆ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡದವನಿಗೆ ಸರಿಯಾಗಿ ಅರ್ಥವಾಗುವುದಿಲ್ಲ. ಹಾಗೆಯೇ ಉತ್ತರ ಕನ್ನಡ, ದಕ್ಷಿಣ ಕನ್ನಡದವರ ಭಾಷೆ ಬೀದರ್ ಕನ್ನಡದವರಿಗೂ, ರಾಯಚೂರು ಕನ್ನಡದವರಿಗೂ ಸರಿಯಾಗಿ ಅರ್ಥವಾಗುವುದಿಲ್ಲ. ಎಲ್ಲರೂ ಕನ್ನಡವೇ ಮಾತನಾಡುತ್ತಾರೆ. ಆದರೆ ಒಬ್ಬರ ಕನ್ನಡ ನುಡಿಗೂ ಮತ್ತೊಬ್ಬರ ಕನ್ನಡ ನುಡಿಗೂ ಸಾಕಷ್ಟು ಭಿನ್ನತೆ ಇರುವುದನ್ನು ಕಾಣುತ್ತೇವೆ. ಇದನ್ನು ಭಾಷಾ ತಜ್ಞರು ಕನ್ನಡದ ಉಪಭಾಷೆಗಳು, ಕನ್ನಡದ ಪ್ರಾದೇಶಿಕ ರೂಪಗಳು ಎಂದು ಕರೆಯುತ್ತಾರೆ.

ಒಂದೇ ವಸ್ತುವಿಗೆ, ಅಥವಾ ಒಂದು ಸಾಮಾನ್ಯ ಪದಕ್ಕೆ ಕರ್ನಾಟಕದಾದ್ಯಂತ ಬೇರೆ ಬೇರೆ ಪರ‍್ಯಾಯ ರೂಪಗಳು ದೊರೆಯುತ್ತವೆ. ಕೆಲವೆಡೆ ಧ್ವನಿವ್ಯತ್ಯಾಸ ಕಂಡುಬಂದರೆ ಕೆಲವೆಡೆ ಪೂರ್ಣ ಪ್ರಮಾಣದ ಪರ‍್ಯಾಯ ರೂಪಗಳೇ ದೊರೆಯುತ್ತವೆ. ಹೀಗೆ ಒಂದು ಪದದ ಬಳಕೆಯಲ್ಲಿರುವ ಧ್ವನಿವ್ಯತ್ಯಾಸದ ರೂಪಗಳು ಮತ್ತು ಅದಕ್ಕೆ ಪರ‍್ಯಾಯವಾಗಿ ಬಳಸುವ ಬೇರೆ ಬೇರೆ ರೂಪಗಳು ತಾಲೂಕು ಜಿಲ್ಲೆಗಳನ್ವಯ ವಿಂಗಡಿಸುತ್ತ ಹೋದರೆ ಇವಗಳಿಗೆ ನಿರ್ದಿಷ್ಟ ಸೀಮಾರೇಖೆಗಳನ್ನು ಗುರುತಿಸಲು ಸಾಧ್ಯವಿದೆ.

ನೇಗಿಲು ಪದ ಕರ್ನಾಟಕದಾದ್ಯಂತ ಎಲ್ಲ ಕೃಷಿಕರೂ ಬಳಸುವ ಉಪಕರಣ. ಪರಂಪರಾನುಗತದಿಂದ ಕೃಷಿ ಬಳಕೆಯಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುವ ಈ ಉಪಕರಣ ಕರ್ನಾಟಕದ ಉದ್ದಗಲಕ್ಕೂ ಒಂದೇ ರೀತಿ ಬಳಕೆಯಾಗಿಲ್ಲ. ನೇಗಿಲು ಪದಕ್ಕೆ ಮುಖ್ಯವಾಗಿ ನಾಲ್ಕು ಪರ‍್ಯಾಯ ರೂಪಗಳು ಸಿಕ್ಕಿವೆ. ೧. ನೇಲ್, ೨. ರೆಂಟೆ, ೩. ಮಡ್ಕೆ, ೪. ದಂಡ್ಗ. ಈ ಪ್ರತಿ ಪರ‍್ಯಾಯ ರೂಪಗಳಿಗೂ ಅನೇಕ ಧ್ವನಿವ್ಯತ್ಯಾಸ ಇರುವ ರೂಪಗಳು ದೊರೆತಿವೆ. ನೇಗಿಲು ಪದಕ್ಕೆ ಸುಮಾರು ೧೧ ಧ್ವನಿವ್ಯತ್ಯಾಸ ಇರುವ ರೂಪಗಳು ದೊರೆತರೆ, ನೇಲ್‌ಗೆ ಮೂರು ಧ್ವನಿವ್ಯತ್ಯಾಸಗಳು, ರಂಟೆ ಪದಕ್ಕೆ ಮೂರು ಧ್ವನಿ ವ್ಯತ್ಯಾಸಗಳು, ಮಡ್ಕೆ ರೂಪಕ್ಕೆ ನಾಲ್ಕು ಧ್ವನಿವ್ಯತ್ಯಾಸಗಳು ದೊರೆತಿವೆ. ದಂಡ್ಗ ರೂಪಕ್ಕೆ ಯಾವುದೇ ಧ್ವನಿವ್ಯತ್ಯಾಸ ಇರುವ ರೂಪಗಳು ದೊರೆತಿಲ್ಲ. ಕರ್ನಾಟಕದಲ್ಲಿ ಗುಲಬರ್ಗಾ ಜಿಲ್ಲೆಯ ಒಂದು ತಾಲೂಕಿನಲ್ಲಿ ಮಾತ್ರ ದಂಡ್ಗ ರೂಪ ದೊರೆತಿದೆ.

ನೇಗಿಲು ರೂಪಕ್ಕೆ ದೊರೆತ ಪರ‍್ಯಾಯ ಅಥವಾ ಭಿನ್ನ ರೂಪಗಳನ್ನು ನಕ್ಷೆಯಲ್ಲಿ ಬಣ್ಣ ತುಂಬುವ ಮೂಲಕ ಗಡಿರೇಖೆಯನ್ನು ಗುರುತಿಸಲಾಗಿದೆ. ನೇಗಿಲು ಮತ್ತು ಅದರ ಧ್ವನಿವ್ಯತ್ಯಾಸ ಇರುವ ರೂಪಗಳು ಉತ್ತರ ಕರ್ನಾಟಕದ ಬೀದರ್, ಗುಲಬರ್ಗಾ, ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಹಿಡಿದು, ತುಮಕೂರು ಹಾಸನ ಚಿಕ್ಕಮಗಳೂರು, ಬೆಂಗಳೂರು, ಕೋಲಾರ, ಮಂಡ್ಯ ಮೈಸದೂರು, ಚಾಮರಾಜನಗರ, ಮಡಿಕೇರಿ ಜಿಲ್ಲೆಯಾದ್ಯಂತ ನೇಗಿಲಿನ ರೂಪವೇ ಕಂಡು ಬಂದಿದೆ.

ನೇಲ್, ನಾಯರ್ ಮತ್ತು ನಾಂಗರ್ ರೂಪ ಕೇವಲ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕಿನಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕಿನಲ್ಲಿ ಮಾತ್ರಕಂಡು ಬಂದಿದೆ.

ರಂಟೆ ರೂಪ ಮುಖ್ಯವಾಗಿ ಬೆಳಗಾವಿ, ಧಾರವಾಡ, ಗದಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯಾದ್ಯಂತ ಬಳಕೆಯಾಗಿದೆ. ಬಳ್ಳಾರಿ ಜಿಲ್ಲೆಯ ಕೆಲವು ಭಾಗದಲ್ಲಿ ಶಿವಮೊಗ್ಗ ಚಿತ್ರದುರ್ಗ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಕಂಡು ಬಂದಿದೆ.

ಮಡ್ಕಿ ಮತ್ತು ಅದರ ಧ್ವನಿ ವ್ಯತ್ಯಾಸ ಹೊಂದಿರುವ ಮಡ್ಕೆ, ಮಡಿಕಿ, ಮಡ್ಕೆ ರೂಪಗಲು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಾದ್ಯಂತ ಮತ್ತು ಬಳ್ಳಾರಿ, ಬಾಗಲಕೋಟೆ, ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡು ಬಂದಿದೆ.

ದಂಡ್ಗ ರೂಪ ಒಂದೇ ಒಂದು ಮಾತ್ರ ಸಿಕ್ಕಿದೆ. ಇದಕ್ಕೆ ಯಾವುದೇ ದ್ವನಿವ್ಯತ್ಯಾಸ ಹೊಂದಿರುವ ರೂಪಗಳು ದೊರೆತಿಲ್ಲ. ಗುಲಬರ್ಗಾ ಜಿಲ್ಲೆಯ ಅಂದರೆ ಈಗ ಯಾದಗಿರಿ ಜಿಲ್ಲೆಯಾಗಿ ರೂಪುಗೊಂಡಿರುವ ಭಾಗದಲ್ಲಿ ದೊರೆತಿದೆ. ದಂಡ್ಗ ರೂಪ ಒಂದೇ ಒಂದು ಮಾತ್ರ ಸಿಕ್ಕಿರುವುದರಿಂದ ಕುತೂಹಲ ಮೂಡಿಸಿದೆ. ಇದು ಕನ್ನಡದ ರೂಪವೇ ಅಥವಾ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದ ರೂಪವೇ ಎಂದು ನೋಡಬೇಕಾಗಿದೆ.

ನೇಗಿಲು ಪದದ ಬಳಕೆಯ ಪರ‍್ಯಾಯ ರೂಪಗಳು ಮತ್ತು ಅವುಗಳಿಗೆ ಸಿಗುವ ಧ್ವನಿವ್ಯತ್ಯಾಸ ರೂಪಗಳು ದೊರೆತಿರುವ ಬಗೆಯನ್ನು ಜಿಲ್ಲಾವಾರು ವಿವರಣೆಯಲ್ಲಿ ಗಮನಿಸಬಹುದು. ನೇಗಿಲು ಪದ ಕರ್ನಾಟಕದಾದ್ಯಂತ ಹೇಗೆ ಬಳಕೆಯಾಗಿದೆ ಎನ್ನುವುದನ್ನು ಮುಂದಿನ ಕೋಷ್ಟಕಗಳಲ್ಲಿ ಮತ್ತು ನಕ್ಷೆಯಲ್ಲಿ ಅವುಗಳು ಬಳಕೆಯಾದ ಗಡಿರೇಖೆಯನ್ನು ಗಮನಿಸಬಹುದು.

ಕೋಷ್ಟಕ ೧ರಲ್ಲಿ ನೇಗಿಲು ಪದಕ್ಕೆ ಸಿಕ್ಕ ಎಲ್ಲ ರೂಪಗಳ ಪಟ್ಟಿಯನ್ನು ನೀಡಲಾಗಿದೆ. ಕೋಷ್ಟಕ ೨ ರಲ್ಲಿ ನೇಗಿಲು ಪದಕ್ಕೆ ಸಿಕ್ಕ ಪರ‍್ಯಾಯ ರೂಪಗಳು ಮತ್ತು ಅವುಗಳಿಗೆ ದೊರೆತ ಧ್ವನಿ ವ್ಯತ್ಯಾಸ ರೂಪಗಳನ್ನು ಪ್ರತ್ಯೇಕವಾಗಿ ನೀಡಿದೆ. ಕೋಷ್ಟಕ ೩ರಲ್ಲಿ ಪರ‍್ಯಾಯ ರೂಪಗಳು ಮತ್ತು ಅವುಗಳ ರೂಪಗಳು ದೊರೆತ ತಾಲೂಕು ಜಿಲ್ಲೆಗಳ ವಿವರಗಳನ್ನು ನೀಡಲಾಗಿದೆ.

ಕೋಷ್ಟಕ ೧ – ನೇಗಿಲು ಪದಕ್ಕೆ ಕರ್ನಾಟಕದಾದ್ಯಂತ ಸಿಕ್ಕ ಬಳಕೆಯ ರೂಪಗಳು

೧. ನೇಗ್ಲು

೨. ನೇಗ್ಲ

೩. ನೇಗ್ಲಿ

೪. ನೇಕ್ಲಿ

೫. ನೇಗಿಲ್

೬. ನೇಗಲ್

೭. ನೇಗಿಲ

೮. ನೇಗಿಲು

೯. ನೇಗಿಲಿ

೧೦. ನೇಗಿಲು

೧೧. ನೇಗಲ್ಲು

೧೨. ನೇಲ್

೧೩. ನಾಯರ್

೧೪. ನಾಂಗರ್

೧೫. ರಂಟೆ

೧೬. ರಂಟಿ

೧೭. ರೆಂಟಿ

೧೮. ಮಡಿಕಿ

೧೯. ಮಡ್ಕಿ

೨೦. ಮಡಿಕೆ

೨೧. ಮಡ್ಕಿ

೨೨. ದಂಡ್ಗ

ಕೋಷ್ಟಕ ೨ – ನೇಗಿಲು ಪದಕ್ಕೆ ಸಿಕ್ಕ ಪರ್ಯಾಯ ರೂಪಗಳು ಮತ್ತು ಅವುಗಳ ಧ್ವನಿ ವ್ಯತ್ಯಾಸಗಳು

೧. ನೇಗಿಲು ನೇಗ್ಲು
ನೇಗ್ಲ
ನೇಗ್ಲಿ
ನೇಗ್ಲಿ
ನೇಗಿಲ್
ನೇಗಲ್
ನೇಗಿಲ
ನೇಗಿಲು
ನೇಗಿಲಿ
ನೇಗಿಲು
ನೇಗಿಲ್ಲು
೨. ನೇಲ್ ನೇಲ್
ನಾಯರ್
೩. ರಂಟೆ ರಂಟೆ
ರಂಟಿ
ರೆಂಟಿ
೪. ಮಡ್ಕೆ ಮಡ್ಕೆ
ಮಡಿಕಿ
ಮಡ್ಕಿ
೫. ದಂಡ್ಗ ದಂಡ್ಗ

ಕೋಷ್ಟಕ – ನೇಗ್ಲು, ನೇಗ್ಲ, ನೇಗ್ಲಿ, ನೇಕ್ಲಿ, ನೇಗಿಲ್, ನೇಗಲ್, ನೇಗಿಲ, ನೇಗಲು, ನೇಗಿಲಿ, ನೇಗಿಲು, ನೇಗಲ್ಲು ರೂಪದ ಬಳಕೆಯ ಜಿಲ್ಲಾವಾರು ವಿವರ

ಕ್ರ.ಸಂ. ಜಿಲ್ಲೆಗಳು ತಾಲ್ಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ
೬. ಕೋಲಾರ ೧೧
೭. ಗದಗ
೮. ಚಾಮರಾಜನಗರ
೯. ಚಿಕ್ಕಮಗಳೂರು
೧೦. ಚಿತ್ರದುರ್ಗ
೧೧. ತುಮಕೂರು ೧೦
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ
೧೯. ಬೆಂಗಳೂರು ೧೧
೨೦. ಮಂಡ್ಯ
೨೧. ಮೈಸೂರು ೧೧
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

ನೇಲ್, ನಾಯರ್, ನಾಂಗರ್ ರೂಪದ ಬಳಕೆಯ ಜಿಲ್ಲಾವಾರು ವಿವರ

ಕ್ರ.ಸಂ. ಜಿಲ್ಲೆಗಳು ತಾಲ್ಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ
೬. ಕೋಲಾರ
೭. ಗದಗ
೮. ಚಾಮರಾಜನಗರ
೯. ಚಿಕ್ಕಮಗಳೂರು
೧೦. ಚಿತ್ರದುಗ-
೧೧. ತುಮಕೂರು
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ
೧೯. ಬೆಂಗಳೂರು
೨೦. ಮಂಡ್ಯ
೨೧. ಮೈಸೂರು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

ರಂಟೆ, ರಂಟಿ, ರೆಂಟಿ ರೂಪದ ಬಳಕೆಯ ಜಿಲ್ಲಾವಾರು ವಿವರ

ಕ್ರ.ಸಂ. ಜಿಲ್ಲೆಗಳು ತಾಲ್ಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ
೬. ಕೋಲಾರ
೭. ಗದಗ
೮. ಚಾಮರಾಜನಗರ
೯. ಚಿಕ್ಕಮಗಳೂರು
೧೦. ಚಿತ್ರದುರ್ಗ
೧೧. ತುಮಕೂರು
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ ೧೦
೧೯. ಬೆಂಗಳೂರು
೨೦. ಮಂಡ್ಯ
೨೧. ಮೈಸೂರು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

ಮಡಿಕಿ, ಮಡ್ಕಿ, ಮಡಿಕೆ, ಮಡ್ಕೆ ರೂಪದ ಬಳಕೆಯ ಜಿಲ್ಲಾವಾರು ವಿವರ

ಕ್ರ.ಸಂ. ಜಿಲ್ಲೆಗಳು ತಾಲ್ಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ
೬. ಕೋಲಾರ
೭. ಗದಗ
೮. ಚಾಮರಾಜನಗರ
೯. ಚಿಕ್ಕಮಗಳೂರು
೧೦. ಚಿತ್ರದುರ್ಗ
೧೧. ತುಮಕೂರು
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ
೧೯. ಬೆಂಗಳೂರು
೨೦. ಮಂಡ್ಯ
೨೧. ಮೈಸೂರು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

ದಂಡ್ಗ ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ಬಳಕೆಯ ವಿವರ

ಕ್ರ.ಸಂ. ಜಿಲ್ಲೆಗಳು ತಾಲ್ಲೂಕುಗಳು
೧.  ಗುಲಬರ್ಗಾ ಯಾದಗಿರಿ

02_365_PV-KUH