ರಾಜ್ಯಗಳಿಗೆ ಭೌಗೋಳಿಕ ಗಡಿ ರೇಖೆಗಳನ್ನು ಗುರುತಿಸುವಂತೆ ಭಾಷೆಗಳ ಬಳಕೆಗೆ ಸಂಬಂಧಿಸಿದಂತೆ ಭಾಷಾ ಗಡಿರೇಖೆಗಳನ್ನು ಕೂಡ ಗುರುತಿಸಲು ಸಾಧ್ಯವಿದೆ. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದದ್ದೇ ಆಯಾ ಭಾಷೆಗಳನ್ನು ಮಾತನಾಡುವ ಭಾಷಿಕರು ಇರುವ ಪ್ರದೇಶವನ್ನು ಅವಲಂಬಿಸಿ. ಆದರೂ ಇಂದಿನ ಭಾಷಾಗಡಿರೇಖೆ ಆಡಳಿತಾತ್ಮಕ ಗಡಿರೇಖೆಯಂತಿಲ್ಲ. ಅದನ್ನು ಗುರುತಿಸುವ ಕೆಲಸ ಸರಿಯಾಗಿ ನಡೆದಿಲ್ಲ. ಅವುಗಳನ್ನು ಸರಿಯಾಗಿ ಗುರುತಿಸಿದರೆ ಅವುಗಳ ನಕ್ಷೆಯೇ ಬೇರೆಯಾಗುತ್ತದೆ. ಏಕೆಂದರೆ ಕನ್ನಡ ಮಾತನಾಡುವ ಜನರು ಕರ್ನಾಟಕ ರಾಜ್ಯದಲ್ಲಷ್ಟೇ ಇಲ್ಲ. ಅಥವಾ ತೆಲುಗು, ತಮಿಳು ಭಾಷಿಕರು ಈಗ ಭಾಷಾ ಆಧಾರದ ಮೇಲೆ ನಿರ್ಮಾಣಗೊಂಡಿರುವ ಆಂಧ್ರಪ್ರದೇಶ ತಮಿಳುನಾಡು ಪ್ರದೇಶದ ಒಳಗೆ ಮಾತ್ರ ಇಲ್ಲ. ಕನ್ನಡ ಭಾಷಿಕರು ಕರ್ನಾಟಕದ ಸುತ್ತಲಿನ ಗಡಿಭಾಗಗಳಾಗಿರುವ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗೋವಾ ಪ್ರದೇಶಗಳಲ್ಲಿ ಇರುವಂತೆ ಇತರ ಭಾಷಿಕರು ಅವರ ರಾಜ್ಯದ ಗಡಿಯಲ್ಲಿರುವ ಇತರೆ ರಾಜ್ಯಗಳಲ್ಲೂ ಜೀವಿಸುತ್ತಿದ್ದಾರೆ. ಅಷ್ಟೇ ಅಲ್ಲ ಇಂದು ಅಮೇರಿಕ, ಆಸ್ಟ್ರೇಲಿಯ ಮುಂತಾದ ದೇಶಗಳಲ್ಲೂ ದ್ವೀಪದಂತೆ ವಾಸಿಸುತ್ತಿದ್ದಾರೆ. ಹಾಗಾಗಿ ಭಾಷಾ ನಕ್ಷಗಳನ್ನು ರಚಿಸಿದರೆ ಅವು ಇಂದಿನ ರಾಜಕೀಯ ಭೌಗೋಳಿಕ ವ್ಯಾಪ್ತಿ ಪಡೆದ ರಾಜ್ಯಗಳಿಗಿಂತ ಸಂಪೂರ್ಣ ಭಿನ್ನವಾಗುತ್ತವೆ. ಕನ್ನಡ ಭಾಷಾ ನಕ್ಷೆ ಕರ್ನಾಟಕದ ಹೊರಗೆ ವ್ಯಾಪಿಸಿಕೊಳ್ಳುತ್ತದೆ. ದೂರದ ದೆಹಲಿ, ಕಲ್ಕತ್ತಾ ಹೊರದೇಶಗಳಾದ ಅಮೇರಿಕದಲ್ಲಿ ಕನ್ನಡ ಭಾಷೆ ದ್ವೀಪದಂತೆ ಕಂಡು ಬರಲು ಅನೇಕ ಕಾರಣಗಳಿವೆ. ಇದು ಒಂದು ಬಗೆಯದ್ದಾಗಿದ್ದರೆ ಕನ್ನಡ ಭಾಷಾ ಗಡಿಯ ಒಳಗೆ ಮತ್ತೆ ಕೆಲವು ಗಡಿರೇಖೆಗಳನ್ನು ಕಾಣಲು ಸಾಧ್ಯವಿದೆ. ಏಕೆಂದರೆ ಉತ್ತರದ ಬೀದರ್ ಜಿಲ್ಲೆಯಿಂದ ದಕ್ಷಿಣದ ಚಾಮರಾಜನಗರದವರೆಗೆ ಕನ್ನಡ ಭಾಷೆಯನ್ನು ಬಳಸುವ ಕನ್ನಡಿಗರೇ ಇದ್ದರೂ ಅವರುಗಳ ನಡುವಿನ ಕನ್ನಡದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಈ ವ್ಯತ್ಯಾಸಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ನೈಸರ್ಗಿಕ ಕಾರಣಗಳೂ ಇವೆ.

ಕರ್ನಾಟಕದಾದ್ಯಂತ ಕನ್ನಡ ಭಾಷೆಯನ್ನೇ ಕನ್ನಡಿಗರು ಬಳಸಿದರೂ ಒಂದು ವಸ್ತುವನ್ನು ಒಂದೇ ರೀತಿಯಲ್ಲಿ ಹೆಸರಿಸುವುದಿಲ್ಲ. ಉದಾಹರಣೆಗೆ ಬೀದರ್ ಗುಲಬರ್ಗಾದಲ್ಲಿ ಹಣವನ್ನು ರೊಕ್ಕ ಎಂದು ಕರೆದರೆ ದಕ್ಷಿಣ ಕರ್ನಾಟಕದ ಬೆಂಗಳೂರು, ಮೈಸೂರಲ್ಲಿ ದುಡ್ಡು, ಕಾಸು ಎಂದು ಕರೆಯುತ್ತಾರೆ. ಹೀಗೆ ಬಳಸುವ ಭಿನ್ನತೆಯ ಗಡಿರೇಖೆ ಕೂಡ ಗುರುತಿಸಲು ಸಾಧ್ಯವಿದೆ. ಈ ಲೇಖನದಲ್ಲಿ ಅಳತೆಗೆ ಸಂಬಂಧಿಸಿದ ಮಣ ಪದದ ಬಳಕೆ ಕರ್ನಾಟಕದಾದ್ಯಂತ ಹೇಗೆ ಬಳಕೆಯಾಗಿದೆ ಎನ್ನುವುದನ್ನು ಕರ್ನಾಟಕದ ನಕ್ಷೆಯಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ.

ಮಣ ಎನ್ನುವ ಪದ ಅಳತೆ ಪ್ರಮಾಣವನ್ನು ಸೂಚಿಸುತ್ತದೆ. ಕರ್ನಾಟಕದಾದ್ಯಂತ ಈ ಪದದ ಬಳಕೆಯನ್ನು ಗಮನಿಸಿದರೆ ಮುಖ್ಯವಾಗಿ ನಾಲ್ಕು ಬಗೆಯ ರೂಪಗಳು ದೊರಕುತ್ತವೆ. ೧. ಮಣ, ೨. ಮಣಾ, ೩. ಮಣ್ಣ್, ೪. ಒಮ್ಮಣ. ಈ ನಾಲ್ಕೂ ರೂಪಗಳು ದೊರಕುತ್ತವೆ. ಮೂರು ರೂಪಗಳು ಒಂದು ಬಗೆಯವು. ಒಮ್ಮಣ ಸ್ವಲ್ಪ ಭಿನ್ನವಾಗಿ ಬಳಕೆಯಾಗಿದೆ. ಈ ಪದ ಅಳತೆ ಮತ್ತು ತೂಕ ಎರಡನ್ನೂ ಪ್ರತಿನಿಧಿಸುತ್ತವೆ. ಕೆಲವೆಡೆ ಅಳತೆಗೆ ಸಂಬಂಧಿಸಿದಂತೆ ಬಳಕೆಯಾದರೆ ಮತ್ತೆ ಕೆಲವೆಡೆ ತೂಕಕ್ಕೆ ಸಂಬಂಧಿಸಿದಂತೆ ಬಳಕೆಯಾಗಿದೆ. ಕೆಲವೆಡೆ ಹತ್ತು ಸೇರು, ಕೆಲವೆಡೆ ತೂಕಕ್ಕೆ ಸಂಬಂಧಿಸಿದಂತೆ ಬಳಕೆಯಾಗಿದೆ. ಕೆಲವೆಡೆ ಹತ್ತು ಸೇರು, ಕೆಲವೆಡೆ ನಾಲ್ಕು ಸೇರು ಅಳತೆಗೆ ಮಣ, ಒಮ್ಮಣ, ಒಮ್ಮನ ಎಂದು ಕರೆದರೆ ಕೆಲವೆಡೆ ಹತ್ತು ಕ್ರಿ.ಗ್ರಾಂ. ತೂಕದ ಅಳತೆಗೆ ಮಣ ಎಂದು ಕರೆಯುವ ಪದ್ಧತಿ ಇದೆ.

ಕರ್ನಾಟಕದ ಉದ್ದಗಲಕ್ಕೂ ಸಾಮಾನ್ಯವಾಗಿ ಬಳಕೆಯಾದ ಪದ ಮಣ. ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕು ಮತ್ತು ಧಾರವಾಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಣಾ ಪದದ ಬಳಕೆ ಇದೆ. ಇದಕ್ಕೆ ಮರಾಠಿ ಪ್ರಭಾವ ಇರಬಹುದೇ ಎಂದು ನೋಡಬೇಕು. ಮಣ್ಣ್ ಎಂಬ ರೂಪ ಧಾರವಾಡ ಜಿಲ್ಲೆಯಾದ್ಯಂತ ಬಳಕೆಯಿದ್ದರೆ ಒಮ್ಮಣ ಹಾವೇರಿ ಜಿಲ್ಲೆಯ ಒಂದೇ ಒಂದು ತಾಲೂಕಿನಲ್ಲಿ ಮಾತ್ರ ಬಳಕೆಯಾಗಿರುವುದನ್ನು ಚಿತ್ರದ ಮೂಲಕ ನೋಡಬಹುದು.

ಕರ್ನಾಟಕದ ನಕ್ಷೆಯನ್ನು ಗಮನಿಸಿದರೆ ಈ ಮೇಲೆ ಸೂಚಿಸಿದ ರೂಪಗಳು ತಮ್ಮದೇ ಆದ ಗಡಿರೇಖೆಯೊಳಗೆ ಬಳಕೆಯಾಗಿರುವುದನ್ನು ಗಮನಿಸಿಬಹುದು. ಕೆಲವು ಸಲ ಒಂದು ರೂಪದ ಬಳಕೆ ಮತ್ತೊಂದು ಬಳಕೆವಲಯದ ನಡುವೆಯೂ ಕಂಡುಬರಬಹುದು. ಉದಾಹರಣೆಗೆ ಮಣ ರೂಪ ಕರ್ನಾಟಕದ ಪಶ್ಚಿಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಒಂದೇ ಒಂದು ತಾಲ್ಲೂಕಿನಲ್ಲಿ ಬಳಕೆಯಾಗಿರುವುದನ್ನ ನೋಡಬಹುದು. ಹೀಗೆ ದ್ವೀಪದಂತೆ ಬಳಕೆ ಕಂಡುಬರಲು ಅದಕ್ಕೆ ಆರ್ಥಿಕ, ರಾಜಕೀಯ, ಸಾಮಾಜಿಕ ಕಾರಣಗಳೂ ಇರಬಹುದು. ಅಥವಾ ಪೂರ್ವದಿಂದ ಅಲ್ಲಿಗೆ ವಲಸೆ ಹೋದ ಸಾಧ್ಯತೆಯೂ ಇರಬಹುದು.

ಮಣ ಪದದ ಧ್ವನಿ ವ್ಯತ್ಯಾಸವಿರುವ ರೂಪಗಳು ಮತ್ತು ಪರ‍್ಯಾಯ ಪದಗಳು ದೊರೆತ ವಿವರ ಕೋಷ್ಟಕ ೧ ರಲ್ಲಿ ಮಣ ಪದದ ಬಳಕೆಯ ರೂಪಗಳ ಪಟ್ಟಿ ನೀಡಲಾಗಿದೆ. ಕೋಷ್ಟಕ ೨ರಲ್ಲಿ ಪ್ರತಿ ಜಿಲ್ಲೆಯಲ್ಲಿ ಈ ರೂಪಗಳು ಬಳಕೆಯಾದ ವಿವರವನ್ನು ನೀಡಲಾಗಿದೆ. ಕೋಷ್ಟಕ ೩ ರಲ್ಲಿ ಈ ಎಲ್ಲ ವಿವರಗಳನ್ನು ಸೂಚಿಸುವ ನಕಾಶೆ ನೀಡಲಾಗಿದೆ.

ಕೋಷ್ಟಕ

೧. ಮಣ

೨. ಮಣಾ

೩. ಮಣ್ಣ್

೪. ಒಮ್ಮಣ್ಣ

ಪರ‍್ಯಾಯ ರೂಪ – ೧ ಒಮ್ಮಣ

ಈ ರೂಪ ಕೂಡ ಪೂರ್ಣಪ್ರಮಾಣದಲ್ಲಿ ಪರ‍್ಯಾಯ ಪದ ಅಲ್ಲ. ಒಂದು ಮಣ ಎನ್ನುವುದಕ್ಕೆ ಬಳಕೆಯಾದಂತೆ ಕಾಣುತ್ತದೆ ಹಾಗಾಗೀ ಮಣ ರೂಪ ಕರ್ನಾಟಕದಾದ್ಯಂತ ಒಂದೇ ರೀತಿಯಲ್ಲಿ ಬಳಕೆಯಾಗಿದೆ. ಧ್ವನಿ ವ್ಯತ್ಯಾಸ ರೂಪಗಳು ಮಾತ್ರ ದೊರೆತಿವೆ.

ಕೋಷ್ಟಕ

ಕ್ರ. ಸಂ ಜಿಲ್ಲೆಗಳು ಮಣ ಮಣಾ ಮಣ್ಣ್ ಒಮ್ಮಣ
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ ೧೦
೪. ಕೊಡಗು
೫. ಕೊಪ್ಪಳ
೬. ಕೋಲಾರ ೧೧
೭. ಗದಗ
೮. ಚಾಮರಾಜನಗರ
೯. ಚಿಕ್ಕಮಗಲೂರು
೧೦. ಚಿತ್ರದುರ್ಗ
೧೧. ತುಮಕೂರು ೧೦
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ ೧೦
೧೯. ಬೆಂಗಳೂರು ೧೧
೨೦. ಮಂಡ್ಯ
೨೧. ಮೈಸೂರು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

 03_365_PV-KUH