ಕಣ ಪದ ಕೃಷಿ ವಲಯದಲ್ಲಿ ಬಳಕೆಯಾಗುವ ಸಹಜ ರೂಪ. ಕಣ ಎಂದರೆ ಕೃಷಿಕರು ರಾಶಿ ಮಾಡಲು ಬಳಸುವ ಸ್ಥಳ. ರಾಶಿ ಮಾಡಲು ಬಳುಸುವ ಈ ಸ್ಥಳವನ್ನು ಕರ್ನಾಟಕದಾದ್ಯಂತ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದ ತುದಿಯವರೆಗೆ ಕಣ ಪದಕ್ಕೆ ಸುಮಾರು ಹದಿನೈದು ಪರ‍್ಯಾಯ ರೂಪಗಳು ದೊರೆತಿವೆ.

ಕಣ ಎಂದರೆ ಹೊಲದ ಮಧ್ಯದಲ್ಲಿ ಇಲ್ಲವೆ ಹೊಲದ ಕೊನೆಯಲ್ಲಿ ರಾಶಿ ಮಾಡಲು ವೃತ್ತಾಕಾರವಾಗಿ ಸ್ವಚ್ಛಗೊಳಿಸಿ, ನೀರು ಹಾಕಿ ಬಡಿದು ಗಟ್ಟಿ ಮಾಡಿ ನಟ್ಟ ನಡುವೆ ಕಂಬವೊಂದು ನೆಟ್ಟು ಅದರ ಸುತ್ತಲೂ ತಾವು ಬೆಳೆದ ಫಸಲಿನ ತೆನೆಗಳನ್ನು ಕಡಿದು ಅದರಲ್ಲಿ ಹಾಕುತ್ತಾರೆ. ನಡು ಮಧ್ಯ ನೆಟ್ಟಿರುವ ಕಂಬಕ್ಕೆ ಹಗ್ಗವನ್ನು ಕಟ್ಟಿ ಅದಕ್ಕೆ ನಾಲ್ಕರಿಂದ ಹತ್ತರವರೆಗೆ ದನಗಳನ್ನು ಕಟ್ಟಿ ಕಂಬದ ಸುತ್ತ ಸುತ್ತಿಸುತ್ತಾರೆ. ದನಗಳ ತುಳಿತದಿಂದ ಕಾಳು ಬೇರೆಯಾಗುತ್ತದೆ. ಇದನ್ನು ಗಾಳಿಗೆ ತೂರಿ ದವಸಧಾನ್ಯ ಸ್ವಚ್ಚಮಾಡಿಕೊಂಡು ಮನೆಗೆ ಕೊಂಡೊಯ್ಯುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಕೆಲವೆಡೆ ಇದು ವೃತ್ತಾಕಾರವಾಗಿ ಇರುವುದಿಲ್ಲ. ಬದಲಿಗೆ ಚೌಕಾಕಾರವಾಗಿದ್ದು ಈ ಸ್ಥಳವನ್ನು ಕಣ ಎನ್ನುತ್ತಾರೆ. ಕೆಲವೆಡೆ ಕಣದಲ್ಲಿರುವ ರಾಶಿಯನ್ನೇ ಕಣ ಎಂದು ಕರೆದಿರುವುದೂ ಇದೆ. ಬೇರೆ ಬೇರೆ ಸ್ವರೂಪದಲ್ಲಿ ಇರುವುದನ್ನು ಕಾಣುತ್ತೇವೆ.

ರೈತ ತಾನು ಇಡೀ ವರ್ಷ ದುಡಿದದ್ದರ ಫಲವಾಗಿ ಅಂತಿಮ ಫಲ ದೊರಕುವ ಸ್ಥಳ ಇದಾಗಿರುವುದರಿಂದ ಇದಕ್ಕೆ ಮಹತ್ವದ ಸ್ಥಾನ ಇದೆ. ಹೀಗೆ ರಾಶಿ ಮಾಡುವಾಗ ಅನೇಕ ಆಚರಣೆಗಳನ್ನು ಮಾಡುತ್ತಾರೆ. ಹಂತಿ ತುಳಿಸುವಾಗ ಹಂತಿ ಪದಗಳು ಹಾಡುತ್ತಾರೆ. ಇದರಿಂದ ಹಂತಿ ಪದಗಳು ಎಂಬ ಪ್ರತ್ಯೇಕ ಸಾಹಿತ್ಯವೇ ಸೃಷ್ಟಿಯಾಗಿದೆ.

ರೈತನ ಜೀವದಲ್ಲಿ ಮಹತ್ವದ ಸ್ಥಾನ ಪಡೆದ ಕಣ ಪದವನ್ನು ಕರ್ನಾಟಕದಾದ್ಯಂತ ಒಂದೇ ರೀತಿಯಾಗಿ ಬಳಕೆಯಾಗಿಲ್ಲ. ಸುಮಾರು ಹದಿನೈದು ಪರ‍್ಯಾಯ ರೂಪಗಳು ದೊರೆತಿವೆ. ಅವು ಈರೀತಿ ಇದೆ. ಕರ್ನಾಟಕದಾದ್ಯಂತ ಕನ್ನಡ ಭಾಷೆಯೊಂದೇ ಇದ್ದರೂ ಒಂದೇ ಬಗೆಯ ಕನ್ನಡ ಇಲ್ಲ ಎನ್ನುವುದನ್ನು ಇದು ದೃಢಪಡಿಸುತ್ತದೆ. ಕರ್ನಾಟಕದಾದ್ಯಂತ ಹತ್ತಾರು ರೂಪಗಳು ದೊರೆತರೂ ಮುಖ್ಯವಾಗಿ ಮೂರು ಬಗೆಯ ರೂಪಗಳನ್ನು ಕಾಣುತ್ತೇವೆ ೧. ಕಣ, ೨. ಕಣಾ, ೩. ಕಳ ಬಿಟ್ಟರೆ ಉಳಿದಂತೆ ಸಿಕ್ಕ ರೂಪಗಳು ಕೆಲವೆಡೆ ಮಾತ್ರ ಬಳಕೆಯಾಗಿರುವುದು ಮುಂದಿನ ಕೋಷ್ಟಕಗಳಲ್ಲಿ, ನಕ್ಷೆಯಲ್ಲಿ ಗಮನಿಸಬಹುದು.

ಹೀಗೆ ಕರ್ನಾಟಕದಾದ್ಯಂತ ಒಂದೇ ಪದಕ್ಕೆ ಬೇರೆ ಬೇರೆ ಪರ‍್ಯಾಯ ರೂಪಗಳು ದೊರೆಯಲು ಭೌಗೋಳಿಕವಾಗಿ ಕೆಲವು ಕಾರಣಗಳಿದ್ದರೆ ಸಾಮಾಜಿಕ ಕಾರಣವೂ ಇವೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಾಷಾ ಸಂಬಂಧಗಳು ಕಡಿಮೆಯಾಗುತ್ತಾ ಹೋದಂತೆ ಈ ಬಗೆಯ ಪರ‍್ಯಾಯ ರೂಪಗಳು ದೊರೆಯುತ್ತ ಹೋಗುತ್ತವೆ. ಹಾಗೆಯೇ ಕರ್ನಾಟಕದಾದ್ಯಂತ ಬೇರೆ ಬೇರೆ ಪ್ರದೇಶದ ಕನ್ನಡ ಬೇರೆ ಬೇರೆ ಭಾಷೆಗಳೊಂದಿಗೆ ಬದುಕುತ್ತಿರುವುದರಿಂದಲೂ ಕೂಡ ಈ ವ್ಯತ್ಯಾಸಗಳಿಗೆ ಕಾರಣವಾಗಿದೆ. ಈ ವಿವರಗಳನ್ನು ಕೆಳಗಿನ ಕೋಷ್ಟಗಳಲ್ಲಿ ವಿವರಿಸಲಾಗಿದೆ.

ಕೋಷ್ಟಕ-೧ರಲ್ಲಿ ಮಣ ಪದಕ್ಕೆ ಕರ್ನಾಟಕದಲ್ಲಿ ಬಳಕೆಯಾದ ಎಲ್ಲರೂಪಗಳ ಪಟ್ಟಿ ನೀಡಲಾಗಿದೆ. ಕೋಷ್ಟಕ-೨ರಲ್ಲಿ ಕಣ ಪದಕ್ಕೆ ಸಿಕ್ಕ ಪರ‍್ಯಾಯ ರೂಪಗಳು ಮತ್ತು ಅದರ ಧ್ವನಿವ್ಯತ್ಯಾಸ ರೂಪಗಳನ್ನು ನೀಡಿದೆ. ಕೋಷ್ಟಕ-೩ರಲ್ಲಿ ಪರ‍್ಯಾಯ ರೂಪಗಳು ಕರ್ನಾಟಕದ ತಾಲೂಕು ಜಿಲ್ಲೆಗಳಲ್ಲಿ ದೊರೆತ ವಿವರವನ್ನು ನೀಡಿದೆ. ಕೋಷ್ಟಕ-೪ರಲ್ಲಿ ಕರ್ನಾಟಕದ ನಕ್ಷೆಯಲ್ಲಿ ಇದನ್ನು ವಿವರಿಸಿದೆ.

ಕೋಷ್ಟಕ ೧ – ಕಣ ಪದಕ್ಕೆ ಕರ್ನಾಟಕದಲ್ಲಿ ಸಿಕ್ಕ ಪರ್ಯಾಯ ಮತ್ತು ಧ್ವನಿವ್ಯತ್ಯಾಸದ ಒಟ್ಟು ರೂಪಗಳ ವಿವರ

೧. ಕಣ

೨. ಕಣಾ

೩. ಕನಾ

೪. ಖಣ

೫. ಖಣಾ

೬. ಖನ

೭. ಕಳ

೮. ಕಣ್ಣ

೯. ಕಾಣ

೧೦ ಖಳ

೧೧.ಕಂಗಾಣ

೧೨. ಅಂಗಳ

೧೩. ಜಾಳ

೧೪. ಒಳಗೂಡು

೧೫. ಕೊಟಾರ

೧೬. ಅಂಗ್ಳ

೧೭. ಪುಳಿಗಟ್ಟ

ಕೋಷ್ಟಕ ೨ – ಕಣ ಮತ್ತು ಕಣದ ಪರ್ಯಾಯ ರೂಪಗಳ ಧ್ವನಿವ್ಯತ್ಯಾಸ ರೂಪಗಳು

೧. ಕಣ ಕಣ
ಕಣಾ
ಕನಾ
ಖಣ
ಖಣಾ
ಖನ
ಕಣ್ಣ
ಕಾಣ
೨. ಕಳ ಕಳ
ಖಳ
೩. ಕಂಗಾಣ ಕಂಗಾಣ
೪. ಅಂಗಳ ಅಂಗಳ
ಅಂಗ್ಳ
೫. ಜಾಳ ಜಾಳ
೬. ಒಳಗೂಡು ಒಳಗೂಡು
೭. ಕೊಟಾರ ಕೊಟಾರ
೮. ಪುಳಿಗಟ್ಟ ಪುಳಿಗಟ್ಟ

ಕೋಷ್ಟಕ

. ಕಣ, ಕಣಾ, ಕನಾ, ಖಣ, ಖಣಾ, ಖನ, ಕಣ್ಣ, ಕಾಣ ರೂಪದಲ್ಲಿ ಜಿಲ್ಲಾ ಮತ್ತು ತಾಲೂಕುವಾರು ವಿವರ

ಕ್ರ. ಸಂ. ಜಿಲ್ಲೆಗಳು ತಾಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ ಎಲ್ಲಾ ತಾಲೂಕು
೬. ಕೋಲಾರ ಎಲ್ಲಾ ತಾಲೂಕು
೭. ಗದಗ ಎಲ್ಲ ತಾಲೂಕು
೮. ಚಾಮರಾಜನಗರ
೯. ಚಿಕ್ಕಮಗಳೂರು ಎಲ್ಲ ತಾಲೂಕು
೧೦. ಚಿತ್ರದುರ್ಗ ಎಲ್ಲ ತಾಲೂಕು
೧೧. ತುಮಕೂರು ಎಲ್ಲ ತಾಲೂಕು
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ ಎಲ್ಲ ತಾಲೂಕು
೧೪. ಧಾರವಾಡ ಎಲ್ಲ ತಾಲೂಕು
೧೫. ಬಳ್ಳಾರಿ ಎಲ್ಲ ತಾಲೂಕು
೧೬. ಬಾಗಲಕೋಟೆ ಎಲ್ಲ ತಾಲೂಕು
೧೭. ಬೀದರ್
೧೮. ಬೆಳಗಾವಿ ಎಲ್ಲ ತಾಲೂಕು
೧೯. ಬೆಂಗಳೂರು ಎಲ್ಲ ತಾಲೂಕು
೨೦. ಮಂಡ್ಯ
೨೧. ಮೈಸೂರು
೨೨. ರಾಯಚೂರು ಎಲ್ಲ ತಾಲೂಕು
೨೩. ವಿಜಾಪುರ ಎಲ್ಲ ತಾಲೂಕು
೨೪. ಶಿವಮೊಗ್ಗ
೨೫. ಹಾಸನ ಎಲ್ಲ ತಾಲೂಕು
೨೬. ಹಾವೇರಿ ಎಲ್ಲತಾಲೂಕು

 

. ಕಳ ಮತ್ತು ಖಳ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

ಕ್ರ. ಸಂ ಜಿಲ್ಲೆಗಳು ತಾಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುಗ್ರಿ
೪. ಕೊಡಗು
೫. ಕೋಲಾರ
೬. ಚಾಮರಾಜನಗರ
೭. ಬೀದರ್
೮. ಬೆಂಗಳೂರು
೯. ಮಂಡ್ಯ
೧೦. ವಿಜಾಪುರ

 

. ಕಂಗಾಣ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ಕೋಲಾರ

 

. ಅಂಗಳ, ಅಂಗ್ಳ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ಉತ್ತರ ಕನ್ನಡ
೨. ಚಿಕ್ಕಮಂಗಳೂರು
೩. ದಕ್ಷಿಣ ಕನ್ನಡ

 

೫. ಜಾಳ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ದಕ್ಷಿಣ ಕನ್ನಡ

 

. ಒಳಗೂಡು ರೂಪದ ಜಿಲ್ಲಾ ಮತ್ತು ತಾಲೂಕುವಾರ ವಿವರ

೧. ಉತ್ತರ ಕನ್ನಡ

 

. ಕೊಟಾರ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ಚಾಮರಾಜನಗರ
೨. ಮೈಸೂರು

 

. ಪುಳಿಗಟ್ಟ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ದಕ್ಷಿಣ ಕನ್ನಡ

04_365_PV-KUH