ಈ ಟಿಪ್ಪಣಿಯಲ್ಲಿ ಪದವಿನ್ಯಾಸಕ್ಕಾಗಿ ಏತ ಪದವನ್ನು ಆರಿಸಿಕೊಳ್ಳಲಾಗಿದೆ. ಏತ ಪದ ಭಾರತೀಯ ಪಾರಂಪರಿಕ ನೀರಾವರಿ ಕೃಷಿಯಲ್ಲಿ ಬಾವಿಯಂದ ನೀರನ್ನು ಮೇಲಕ್ಕೆತ್ತಲು ಬಳಸುವ ಉಪಕರಣವಾಗಿದೆ. ಈ ಉಪಕರಣ ಇಪ್ಪತ್ತನೇ ಶತಮಾನದ ಆದಿಯಲ್ಲೂ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಬಳಕೆಯಲ್ಲಿತ್ತು. ಈ ಉಪಕರಣ ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಾಗಲಿ, ಮಳೆಯೇ ಬೀಳದ ಗುಲಬರ್ಗಾ, ವಿಜಾಪುರ, ರಾಯಚೂರು ಪ್ರದೇಶದಲ್ಲಾಗಲಿ ಹೆಚ್ಚು ಕಂಡು ಬರುವುದಿಲ್ಲ. ಬದಲಿಗೆ ಭೂಮಿಯಲ್ಲಿ ಜಲದ ಮಟ್ಟ ಮೇಲಿರುವ ಮತ್ತು ಬಾವಿಗಳನ್ನು ತೋಡಿ ನೀರಾವರಿ ಕೃಷಿಯನ್ನು ಮಾಡುವ ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನ ಬರುವ ಮುನ್ನ ಈ ಪದ್ಧತಿ ಜಾರಿಯಲ್ಲಿದ್ದದ್ದು ಕಂಡುಬರುತ್ತದೆ. ಈ ಪದ್ಧತಿ ಈಗ ಇಲ್ಲದಿದ್ದರೂ ಗ್ರಾಮೀಣ ಪ್ರದೇಶದ ಕೆಲವು ಊರುಗಳಲ್ಲಿ ಇದರ ಪಳವಳಿಕೆಗಳು ವಿರಳವಾಗಿಯಾದರೂ ಕಂಡುಬರುತ್ತದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಪದದ ಬಳಕೆ ಕಂಡುಬರುವುದಿಲ್ಲವಾದರೂ ಏತ ಪದಕ್ಕೆ ಪರ‍್ಯಾಯವಾಗಿ ಹತ್ತು ರೂಪಗಳು ದೊರೆತಿದ್ದರೂ ಅವುಗಳನ್ನು ಮುಖ್ಯವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಅವುಗಳಲ್ಲಿ ಏತಕ್ಕೆ ಹತ್ತಿರವಾದ ಯಾತ ಮತ್ತು ಯಾತಾ ರೂಪಗಳು ಬಳಕೆಯಾದರೆ, ಏತ ಪದಕ್ಕೆ ಪರ‍್ಯಾಯವಾಗಿ ನಾಲ್ಕು ಬೇರೆ ರೂಪಗಳು ದೊರೆತಿವೆ.

೧. ಜಂತ್ರ, ೨. ಜೊಟ್ಟಿ, ಜೊಟ್ಟೆ, ಜಟ್ಟಿ ಮತ್ತು ದೊಟ್ಟೆ ೩. ತೊಲಂಡ್ಲಾ ೪. ಮಟ್ಟಿ ಮತ್ತು ಮಟ್ಟೆ ರೂಪಗಳು. ಇವುಗಳಲ್ಲಿ ಜಂತ್ರ, ಜೊಟ್ಟಿ, ಜೊಟ್ಟೆ, ಜಟ್ಟಿ, ದೊಟ್ಟೆ ಮತ್ತು ತೊಲ್ಲಂಡ್ಲಾ ರೂಪಗಳು ಉತ್ತ ಕನ್ನಡ ಜಿಲ್ಲೆಯೊಂದರಲ್ಲೇ ಬಳಕಾಯಾಗಿರುವುದು ವಿಶೇಷವಾಗಿದೆ. ಉಳಿದ ಮಟ್ಟಿ, ಮಟ್ಟೆ ರೂಪ ಉತ್ತರ ಕರ್ನಾಟಕದ ತುಟ್ಟ ತುದಿಯಲ್ಲಿ ಇರುವ ಬೀದರ್ ಜಿಲ್ಲೆಯಲ್ಲಿ ಮತ್ತು ಗುಲಬರ್ಗಾದ ಗಡಿಯಲ್ಲಿ ಬಳಕೆಯಾಗಿವೆ. ಏತ, ಯಾತ, ಯಾತಾ ರೂಪಗಳೇ ರಾಜ್ಯಾದಾದ್ಯಂತ ಹೆಚ್ಚಾಗಿ, ಅಂದರೆ ದಕ್ಷಿಣ ಕರ್ನಾಟಕದ ಧಾರವಾಡ ಮತ್ತು ಬೆಳಗಾವಿಯಲ್ಲೂ ಇದರ ಅಲ್ಪಸ್ವಲ್ಪ ಬಳಕೆ ಕಂಡುಬಂದಿದೆ. ಹಾಗೆಯೇ ಉತ್ತರ ಕನ್ನಡದಲ್ಲಿ ಈ ಉಪಕರಣದ ಬಳಕೆಗೆ ಅತಿಹೆಚ್ಚಿನ ಪರ‍್ಯಾಯ ರೂಪಗಳು ಕಂಡುಬಂದಿದೆ. ಬೀದರ್‌ನಲ್ಲಿಯೂ ಕೂಡ ಏತ ರೂಪಕ್ಕೆ ಪರ‍್ಯಾಯವಾಗಿ ಮಟ್ಟೆ ರೂಪ ಬಳಕೆಯಾಗಿರುವುದನ್ನು ಮುಂದಿನ ನಕ್ಷೆಯ ಮೂಲಕ ನೋಡಬಹುದಾಗಿದೆ.

ಏತ ಉಪಕರಣ ಕೂಡ ಕರ್ನಾಟಕದಾದ್ಯಂತ ಒಂದೇ ರೀತಿಯಲ್ಲಿ ಇರಲಿಕ್ಕಿಲ್ಲ ಉತ್ತರ ಕರ್ನಾಟಕದ ತುತ್ತು ತುದಿಯಲ್ಲಿ ಚರ್ಮದಿಂದ ಮಾಡಿದ ಚೀಲದಂತಿರುವ ಸಾಧನ ಹಗ್ಗದ ಸಹಾಯದಿಂದ ಎತ್ತುಗಳ ಮೂಲಕ ಬಾವಿಗೆ ಬಿಟ್ಟು ಅದರಲ್ಲಿ ನೀರು ತುಂಬಿದ ಬಳಿಕ ಮೇಲಕ್ಕೆ ಎತ್ತಿ ಪಕ್ಕದ ಸಣ್ಣ ಕಾಲುವೆಯಲ್ಲಿ ಸುರಿಸಿ ಕೃಷಿ ಮಾಡುತ್ತಿದ್ದರು. ದಕ್ಷಿಣ ಕರ್ನಾಟಕದ ಕೆಲವೆಡೆ ಒಂದು ಕೋಲಿಗೆ ಬುಟ್ಟಿಕಟ್ಟಿ ಅದೇ ಕೋಲಿನ ಮತ್ತೊಂದೆಡೆ ಕಲ್ಲು ಕಟ್ಟಿ ಕೈಯಿಂದ ಎಳೆದು ಬುಟ್ಟಿ ನೀರಿನಲ್ಲಿ ಮುಳುಗಿಸಿ ಎತ್ತಿ ಎತ್ತಿ ಕಾಲುವೆಗೆ ಸುರಿದು ಕೃಷಿ ಮಾಡುವ ವಿಧಾನವೂ ಇತ್ತು. ಇದು ಪ್ರದೇಶದಿಂದ ಪ್ರದೇಶಕ್ಕೆ ಬೇರೆಯದೇ ಆಗಿರುವ ಸಾಧ್ಯತೆಯೂ ಇದೆ. ಈ ಪದ್ಧತಿಯಲ್ಲಿ ಬಳಸುವ ಉಪಕರಣ ಏತ ಎಂದು ಪರಿಗಣಿಸಿ ಅದಕ್ಕೆ ಸಿಗುವ ಪರ‍್ಯಾಯ ರೂಪಗಳನ್ನು ಸಂಗ್ರಹಿಸಿ ವಿವರಿಸಲಾಗಿದೆ.

ಕೋಷ್ಟಕ-೧ರಲ್ಲಿ ಏತ ಪದಕ್ಕೆ ಕರ್ನಾಟಕದಾದ್ಯಂತ ಬಳಕೆಯಾದ ಎಲ್ಲರೂಪಗಳ ಪಟ್ಟಿ ನೀಡಿದೆ. ಕೋಷ್ಟಕ-೨ರಲ್ಲಿ ಏತ ಪದಕ್ಕೆ ಸಿಕ್ಕ ಪರ‍್ಯಾಯ ರೂಪ ಮತ್ತು ಅದಕ್ಕೆ ಇರುವ ಧ್ವನಿವ್ಯತ್ಯಾಸ ರೂಪಗಳನ್ನು ಕೊಡಲಾಗಿದೆ.ಕೋಷ್ಟಕ-೩ರಲ್ಲಿ ಈ ಎಲ್ಲ ಪರ‍್ಯಾಯ ರೂಪಗಳು ಜಿಲ್ಲಾ ಮತ್ತು ತಾಲೂಕುವಾರು ಬಳಕೆಯಾದ ವಿವರ ನೀಡಲಾಗಿದೆ. ಕೋಷ್ಟಕ ೪ರಲ್ಲಿ ನಕ್ಷೆ ನೀಡಲಾಗಿದೆ.

ಕೋಷ್ಟಕ ೧ – ಏತ ಪದಕ್ಕೆ ಕರ್ನಾಟಕದಾದ್ಯಂತ ಸಿಕ್ಕ ಪರ್ಯಾಯ ಮತ್ತು ಧ್ವನಿವ್ಯತ್ಯಾಸದ ಒಟ್ಟು ರೂಪಗಳು

೧. ಏತ

೨. ಯಾತ

೩. ಯಾತಾ

೪. ಜಂತ್ರ

೫. ಜೊಟ್ಟಿ

೬. ಜೊಟ್ಟೆ

೭.ದೊಟ್ಟೆ

೮. ಜಟ್ಟಿ

೯. ತೊಲಂಡ್ಲಾ

೧೦. ಮಟ್ಟಿ

ಕೋಷ್ಟಕ ೨ – ಏತ ರೂಪದ ಪರ್ಯಾಯ ಪದಗಳು

೧. ಏತ ಏತ
ಯಾತ
ಯಾತಾ
೨. ಜಂತ್ರ ಜಂತ್ರ
೩. ಜೊಟ್ಟಿ ಜೊಟ್ಟಿ
ಜೊಟ್ಟೆ
ಜಟ್ಟಿ
೪. ದೊಟ್ಟೆ ದೊಟ್ಟೆ
೫. ತೊಲಂಡ್ಲಾ ತೊಲಂಡ್ಲಾ
೬. ಮಟ್ಟಿ ಮಟ್ಟಿ

ಕೋಷ್ಟಕ – ೧. ಏತ, ಯಾತ, ಯಾತಾ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

ಜಿಲ್ಲೆಗಳು ತಾಲೂಕುಗಳು
೧. ಉಡುಪಿ
೨. ಉತ್ತರ ಕನ್ನಡ
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ
೬. ಕೋಲಾರ ಎಲ್ಲ ತಾಲೂಕು
೭. ಗದಗ
೮. ಚಾಮರಾಜನಗರ ಎಲ್ಲ ತಾಲೂಕು
೯. ಚಿಕ್ಕಮಗಳೂರು
೧೦ ಚಿತ್ರದುರ್ಗ ಎಲ್ಲ ತಾಲೂಕು
೧೧. ತುಮಕೂರು ಎಲ್ಲ ತಾಲೂಕು
೧೨. ದಕ್ಷಿಣ ಕನ್ನಡ
೧೩. ದಾವಣಗೆರೆ
೧೪. ಧಾರವಾಡ ಎಲ್ಲ ತಾಲೂಕು
೧೫. ಬಳ್ಳಾರಿ
೧೬. ಬಾಗಲಕೋಟೆ
೧೭. ಬೀದರ್
೧೮. ಬೆಳಗಾವಿ ಎಲ್ಲ ತಾಲೂಕು
೧೯. ಬೆಂಗಳೂರು ಎಲ್ಲ ತಾಲೂಕು
೨೦. ಮಂಡ್ಯ ಎಲ್ಲ ತಾಲೂಕು
೨೧. ಮೈಸೂರು ಎಲ್ಲ ತಾಲೂಕು
೨೨. ರಾಯಚೂರು
೨೩. ವಿಜಾಪುರ
೨೪. ಶಿವಮೊಗ್ಗ
೨೫. ಹಾಸನ
೨೬. ಹಾವೇರಿ

. ಜಂತ್ರ ರೂಪದ ಜಿಲ್ಲಾ ಮತ್ತು ತಾಲೂಕುವಾರ ವಿವರ

೧. ಉತ್ತರ ಕನ್ನಡ

. ಜೊಟ್ಟಿ, ಜೊಟ್ಟೆ, ಜಟ್ಟಿ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ಉತ್ತರ ಕನ್ನಡ

. ದೊಟ್ಟೆ ರೂಪದ ಜಿಲ್ಲಾ ಮತ್ತು ತಾಲೂಕುವಾರ ವಿವರ

೧. ಉತ್ತರ ಕನ್ನಡ

. ತೊಲಂಡ್ಲಾ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ಉತ್ತರ ಕನ್ನಡ

. ಮಟ್ಟಿ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ಬೀದರ್ ಎಲ್ಲಾ ತಾಲೂಕು

05_365_PV-KUH